ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಶೊಕ್ ಗೆಹ್ಲೋಟ್ ಹಠದ ಮುಂದೆ ಸೋತು ನಿಂತ ರಾಹುಲ್ ಗಾಂಧಿ!

By ವಿನೋದ್ ಕುಮಾರ್ ಶುಕ್ಲಾ
|
Google Oneindia Kannada News

ಜೈಪುರ, ನವೆಂಬರ್ 15: ಎತ್ತು ಏರಿಗೆ... ಕೋಣ ನೀರಿಗೆ... ಹಾಗಾಗಿದೆ ರಾಜಸ್ಥಾನದ ಕಾಂಗ್ರೆಸ್ ಪರಿಸ್ಥಿತಿ! ಮುಖಂಡರಾದ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲೆಟ್ ಅವರನ್ನು ಚುನಾವಣೆ ಕಣದಿಂದ ದೂರವಿಟ್ಟು, ಅವರು ಐದು ರಾಜ್ಯಗಳಲ್ಲಿ ಪುರ್ಣ ಪ್ರಮಾಣದಲ್ಲಿ ಪ್ರಚಾರದ ಹೊಣೆ ಹೊತ್ತುಕೊಳ್ಳುವಂತೆ ಮಾಡಬೇಕು ಎಂಬುದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಯೋಜನೆಯಾಗಿತ್ತು.

ಆದರೆ ಇದೀಗ ರಾಜಸ್ಥಾನ ವಿಧಾನಸಭೆ ಚುನಾವಣೆಗೆ ತಾವು (ಅಶೋಕ್ ಗೆಹ್ಲೋಟ್) ಮತ್ತು ಸಚಿನ್ ಪೈಲೆಟ್ ಇಬ್ಬರೂ ಸ್ಪರ್ಧಿಸುವುದಾಗಿ ಅಶೋಕ್ ಗೆಹ್ಲೋಟ್ ಸ್ವತಃ ಘೋಷಿಸಿಬಿಟ್ಟಿದ್ದಾರೆ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವ ಮೊದಲೇ ಈ ರೀತಿ ಘೋಷಿಸಿದ್ದು, ಹಲವರ ಕೆಂಗಣ್ಣಿಗೆ ಕಾರಣವಾಗಿದೆ.

ಚುನಾವಣೆ ಕಣದಿಂದ ದೂರವುಳಿಸುವ ರಾಹುಲ್ ಯೋಜನೆಗೆ ಇಬ್ಬರು ನಾಯಕರೂ ಸಿದ್ಧವಿಲ್ಲ. ರಾಜಕೀಯದಲ್ಲಿದ್ದುಕೊಂಡು ಚುನಾವಣೆಗೆ ಸ್ಪರ್ಧಿಸದೆ ಉಳಿಯುವುದು ಎಂದರೆ ಹೇಗೆ ಸಾಧ್ಯ? ಅದೂ ಅಲ್ಲದೆ ಇಬ್ಬರ ಮುಂದೆಯೂ ಮುಖ್ಯಮಂತ್ರಿ ಪಟ್ಟದ ಕನಸಿರುವಾಗ..!

ಸಚಿನ್, ಗೆಹ್ಲೋಟ್ ಇಬ್ಬರೂ ರಾಜಸ್ತಾನ ವಿಧಾನಸಭಾ ಕಣದಲ್ಲಿ; 'ಕೈ' ಚತುರ ನಡೆ ಸಚಿನ್, ಗೆಹ್ಲೋಟ್ ಇಬ್ಬರೂ ರಾಜಸ್ತಾನ ವಿಧಾನಸಭಾ ಕಣದಲ್ಲಿ; 'ಕೈ' ಚತುರ ನಡೆ

ಈ ಇಬ್ಬರು ನಾಯಕರ ನಡುವೆಯೂ ಇದ್ದ ಭಿನ್ನಾಭಿಪ್ರಾಯವನ್ನೇನೋ ರಾಹುಲ್ ಗಾಂಧಿ ತಹಬಂದಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಇಬ್ಬರನ್ನೂ ಚುನಾವಣೆಯ ಕಣದಿಂದ ದೂರವುಳಿಸುವುದಕ್ಕೆ ಮಾತ್ರ ಅವರಿಗೆ ಸಾಧ್ಯವಾಗಿಲ್ಲ!

ಕಣದಿಂದ ದೂರವಿರಿಸುವ ಯೋಚನೆ ಏಕೆ?

ಕಣದಿಂದ ದೂರವಿರಿಸುವ ಯೋಚನೆ ಏಕೆ?

ಮಧ್ಯಪ್ರದೇಶದಲ್ಲಿ ಕಮಲ್ ನಾಥ್ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ, ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲೆಟ್ ನಾಲ್ವರೂ ಪ್ರಮುಖ ನಾಯಕರು ಮತ್ತು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳು. ತಮ್ಮ ತಮ್ಮ ಕ್ಷೇತ್ರಗಳ ಬಗ್ಗೆ ಮಾತ್ರ ಇವರೆಲ್ಲರೂ ಹೆಚ್ಚು ಗಮನ ನೀಡುತ್ತಿರುವುದರಿಂದ ಈ ಯಾರಿಗೂ ಟಿಕೆಟ್ ನೀಡದೆ, ಐದು ರಾಜ್ಯಗಳ ಚುನಾವಣೆಯ ಪ್ರಚಾರದಲ್ಲೂ ಈ ನಾಯಕರು ಸಕ್ರಿಯರಾಗುವಂತೆ ಮಾಡಬೇಕು ಎಂಬುದು ಹೈಕಮಾಂಡ್ ಉದ್ದೇಶವಾಗಿತ್ತು.

ರಾಜಸ್ಥಾನದಲ್ಲಿ ಬಿಜೆಪಿಗೆ ಬಿಗ್ ಶಾಕ್, ಕಾಂಗ್ರೆಸ್ ಸೇರಿದ ಬಿಜೆಪಿ ಸಂಸದ!ರಾಜಸ್ಥಾನದಲ್ಲಿ ಬಿಜೆಪಿಗೆ ಬಿಗ್ ಶಾಕ್, ಕಾಂಗ್ರೆಸ್ ಸೇರಿದ ಬಿಜೆಪಿ ಸಂಸದ!

ತಾನೂ ಅಭ್ಯರ್ಥಿ ಎಂದುಬಿಟ್ಟರು ಗೆಹ್ಲೋಟ್!

ತಾನೂ ಅಭ್ಯರ್ಥಿ ಎಂದುಬಿಟ್ಟರು ಗೆಹ್ಲೋಟ್!

ನವದೆಹಲಿಯ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಬುಧವಾರ ನಡೆದ ಸಭೆಯೊಂದರಲ್ಲಿ ತಾವೂ ರಾಜಸ್ಥಾನ ವಿಧಾನಸಭೆ ಚುನಾವಣೆಯ ಅಭ್ಯರ್ಥಿ ಎಂದು ಸ್ವತಃ ಅಶೋಕ್ ಗೆಹ್ಲೋಟ್ ಅವರೇ ಘೋಷಿಸಿಬಿಟ್ಟರು. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ರಾಜಸ್ಥಾನ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಅವಿನಾಶ್ ಪಾಂಡೆಯವರು ಗೆಹ್ಲೋಟ್ ಪಕ್ಕದಲ್ಲೇ ಕೂತಿದ್ದರೂ, ಅವರಿಗೆ ಅವಕಾಶವನ್ನೇ ನೀಡದೆ ತಮ್ಮ ಹೆಸರನ್ನು ತಾವೇ ಘೋಷಿಸಿಕೊಂಡು ಕೈ ನಾಯಕರಿಗೆ ಕೊಂಚ ಇರಿಸುಮುರಿಸುಂಟಾಗುವಂತೆ ಮಾಡಿದರು.

ಮೋದಿ ಅಲೆ ರಾಜಸ್ಥಾನದಲ್ಲಿ ಬಿಜೆಪಿಯನ್ನು ಗೆಲ್ಲಿಸಲಿದೆಯೇ? ಮೋದಿ ಅಲೆ ರಾಜಸ್ಥಾನದಲ್ಲಿ ಬಿಜೆಪಿಯನ್ನು ಗೆಲ್ಲಿಸಲಿದೆಯೇ?

ಅಭ್ಯರ್ಥಿಗಳ ಪಟ್ಟಿಯೇ ಪ್ರಕಟವಾಗಿಲ್ಲ!

ಅಭ್ಯರ್ಥಿಗಳ ಪಟ್ಟಿಯೇ ಪ್ರಕಟವಾಗಿಲ್ಲ!

ರಾಜಸ್ಥಾನದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗುವ ಮೊದಲೇ ಇಷ್ಟೆಲ್ಲ ಬೆಳವಣಿಗೆ ನಡೆದಿರುವುದು ಹೈಕಮಾಂಡ್ ಅನ್ನೇ ಚಿಂತೆಗೀಡುಮಾಡಿದೆ. ಗೆಹ್ಲೋಟ್ ಮಾತನಾಡುತ್ತ, ತಾವು ಮತ್ತು ಪೈಲೆಟ್ ಇಬ್ಬರೂ ಚುನಾವಣೆಗೆ ಸ್ಪರ್ಧಿಸುತ್ತೇವೆ ಎಂದಿದ್ದಾರೆ. ಅಕಸ್ಮಾತ್ ಇಬ್ಬರೂ ಗೆದ್ದರೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಜಿದ್ದಾಜಿದ್ದಿ ಏರ್ಪಡುವುದು ಖಂಡಿತ.

ಎಂದು ಚುನಾವಣೆ?

ಎಂದು ಚುನಾವಣೆ?

ರಾಜಸ್ಥಾನದಲ್ಲಿ ಡಿಸೆಂಬರ್ 7 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 11 ರಂದು ಫಲಿತಾಂಶ ಹೊರಬೀಳಲಿದೆ. 200 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ರಾಜಸ್ಥಾನದಲ್ಲಿ ಪಕ್ಷವೊಂದು ಬಹುಮತ ಪಡೆಯಲು ಬೇಕಾದ ಮ್ಯಾಜಿಕ್ ನಂಬರ್ 101. ಪ್ರಸ್ತುತ ವಸುಂಧರಾ ರಾಜೆ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ.

English summary
Congress President Rahul Gandhi had to succumb to the pressure of national general secretary of the party Ashok Gehlot on the issues related to the organisation. This was the biggest reason that Gandhi was forced to field state Congress president Sachin Pilot and Ashok Gehlot in the Assembly elections in Rajasthan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X