ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಸ್ಥಾನ: ಪಂಚಾಯತ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆ ಭರ್ಜರಿ ಗೆಲುವು

|
Google Oneindia Kannada News

ಜೈಪುರ, ಜುಲೈ 03: ಲೋಕಸಭೆ ಚುನಾವಣೆಯ ಹೀನಾಯ ಸೋಲಿನಿಂದ ಮುಖಭಂಗ ಅನುಭವಿಸಿದ್ದ ಕಾಂಗ್ರೆಸ್ ಗೆ ಕೊಂಚ ಸಮಾಧಾನ ನೀಡುವಂತೆ ರಾಜಸ್ಥಾನ ಪಂಚಾಯತ್ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದೆ.

ರಾಜಸ್ಥಾನದಲ್ಲಿ 26(33) ಜಿಲ್ಲೆಗಳಲ್ಲಿ ಜೂನ್ 30 ರಂದು ನಡೆದ ಪಂಚಾಯತ್ ಸಮಿತಿ ಮತ್ತು ಜಿಲ್ಲಾ ಪರಿಷತ್ ಉಪಚುನಾವಣೆಗಳ ಫಲಿತಾಂಶ ಜುಲೈ 2 ರಂದು ಹೊರಬಿದ್ದಿದೆ.

ರಾಜಸ್ಥಾನ ಸರ್ಕಾರಕ್ಕೆ ಗಂಡಾಂತರ, ಶಕ್ತಿ ಪ್ರದರ್ಶಿಸಿದ ಸಚಿನ್ ಪೈಲಟ್! ರಾಜಸ್ಥಾನ ಸರ್ಕಾರಕ್ಕೆ ಗಂಡಾಂತರ, ಶಕ್ತಿ ಪ್ರದರ್ಶಿಸಿದ ಸಚಿನ್ ಪೈಲಟ್!

ಒಟ್ಟು 74 ಪಂಚಾಯತ್ ಸಮಿತಿಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ 39 ರಲ್ಲಿ ಗೆದ್ದರೆ ಬಿಜೆಪಿ 29 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಇನ್ನುಳಿದ ಆರು ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

Rajasthan Panchayat by polls: Congress performed very well

ಕಾಂಗ್ರೆಸ್ ನ 8, ಬಿಜೆಪಿಯ 2 ಮತ್ತು ಐವರು ಪಕ್ಷೇತರ ಅಭ್ಯರ್ಥಿಗಳು ಸೇರಿ ಒಟ್ಟು 15 ಜನ ಅವಿರೋಧವಾಗಿ ಆಯ್ಕೆಯಾಗಿದ್ದು ವಿಶೇಷ.

ಇನ್ನು ಜಿಲ್ಲಾ ಪರಿಷತ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಒಂಬತ್ತರಲ್ಲಿ ಏಳು ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ಬಿಜೆಪಿ ಕೇವಲ ಒಂದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.

ರಾಜಸ್ಥಾನ ಕಾಂಗ್ರೆಸ್ ನಲ್ಲಿ ಬಂಡಾಯ ಸ್ಫೋಟ, ಪೈಲಟ್ ಸಿಎಂ?ರಾಜಸ್ಥಾನ ಕಾಂಗ್ರೆಸ್ ನಲ್ಲಿ ಬಂಡಾಯ ಸ್ಫೋಟ, ಪೈಲಟ್ ಸಿಎಂ?

ಪಂಚಾಯತ್ ಉಪಚುನಾವಣೆಯ ಗೆಲುವಿಗೆ ಸಂತಸ ವ್ಯಕ್ತಪಡಿಸಿದ ರಾಜಸ್ಥಾನ ಮುಖ್ಯಮಂತ್ರಿ, ಕಾಂಗ್ರೆಸ್ ಮುಖಂಡ ಅಶೋಕ್ ಗೆಹ್ಲೋಟ್ , ಗೆಲುವಿಗಾಗಿ ಶ್ರಮಿಸಿದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು.

ಕಳೆದ ಮೇ ತಿಂಗಳಿನಲ್ಲಿ ಹೊರಬಿದ್ದ ಲೋಕಸಭೆ ಚುನಾವಣೆಯ ಫಲಿತಾಂಶದಲ್ಲಿ ರಾಜಸ್ಥಾನದಲ್ಲಿ ಕಾಂಗ್ರೆಸ್ ಹೀನಾಯ ಪ್ರದರ್ಶನ ತೋರಿತ್ತು. ವಿಧಾನಸಭೆಯಲ್ಲಿ ಕಾಂಗ್ರೆಸ್ ಆಡಳಿತವಿದ್ದರೂ ಲೋಕಸಭೆಯಲ್ಲಿ ಇಂದೂ ಸ್ಥಾನ ಗೆಲ್ಲಲಾಗದೆ ಮುಖಭಂಗ ಅನುಭವಿಸಿತ್ತು. ಇಲ್ಲಿನ ಒಟ್ಟು 25 ಲೋಕಸಭೆ ಕ್ಷೇತ್ರಗಳಲ್ಲೂ ಬಿಜೆಪಿ ಗೆದ್ದುಕೊಂಡಿತ್ತು.

English summary
After defeating in all 25 seats in Rajasthan, Now Congress performed very well in Panchayat by polls. It wins 39 out of 74 Panchayat Samiti seats whereas BJP bagged 29.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X