• search
  • Live TV
ಜೈಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಈ ವ್ಯಕ್ತಿ ತಿಂಗಳಲ್ಲಿ 25 ದಿನ, ವರ್ಷದಲ್ಲಿ 300 ದಿನ ಮಲಗೇ ಇರ್ತಾರಂತೆ!

|
Google Oneindia Kannada News

ವೈದ್ಯರ ಪ್ರಕಾರ ದಿನಕ್ಕೆ 8 ಗಂಟೆ ನಿದ್ದೆ ಮಾಡುವುದು ಉತ್ತಮವಾದದ್ದು, ಅದಕ್ಕಿಂತ ಕಡಿಮೆ ಅಥವಾ ಅದಕ್ಕಿಂತ ಹೆಚ್ಚು ನಿದ್ದೆ ಮಾಡಿದರೂ ಅನೇಕ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಆದರೆ ಇಲ್ಲೊಬ್ಬರು ವರ್ಷದಲ್ಲಿ 300 ದಿನ ಮಲಗೇ ಇರ್ತಾರಂತೆ, ಒಮ್ಮೆ ಮಲಗಿದರೆ ಏಳುವುದು 25 ದಿನಗಳನ್ನು ಬಿಟ್ಟು ಎನ್ನುವ ಮಾಹಿತಿ ಲಬ್ಯವಾಗಿದ್ದು, ಎಲ್ಲರಲ್ಲಿ ಅಚ್ಚರಿ ಮೂಡಿಸಿದೆ.

 ಈ ಎರಡು ಔಷಧಗಳು ಸ್ಲೀಪ್ ಅಪ್ನಿಯಾವನ್ನು ಎಷ್ಟು ಕಡಿಮೆ ಮಾಡುತ್ತವೆ ಗೊತ್ತೇ? ಈ ಎರಡು ಔಷಧಗಳು ಸ್ಲೀಪ್ ಅಪ್ನಿಯಾವನ್ನು ಎಷ್ಟು ಕಡಿಮೆ ಮಾಡುತ್ತವೆ ಗೊತ್ತೇ?

ಹಿಂದೂ ಮಹಾಕಾವ್ಯದಲ್ಲಿ ಬರುವ ರಾವಣನ ಕಥೆ ತಿಳಿಯದವರೇ ಇಲ್ಲ, ಲಂಕೇಶ್ವರ ರಾವಣನ ಕಿರಿಯ ಸಹೋದರ ಆಗಿರುವ ಕುಂಭಕರ್ಣ ಒಂದು ಬಾರಿ ಮಲಗಿದರೆ ಮತ್ತೆ ಎಚ್ಚರವಾಗಲು 6 ತಿಂಗಳು ಬೇಕಿತ್ತಂತೆ.

ಆದರೆ ಈ ಆಧುನಿಕ ಜಗತ್ತಿನಲ್ಲೂ ಅಂತಹ ವ್ಯಕ್ತಿಗಳು ಇದ್ದಾರೆ ಎಂದರೆ ಆಶ್ಚರ್ಯವಾಗುತ್ತದೆ. ಆತ ವರ್ಷದಲ್ಲಿ 300 ದಿನ ಮಲಗೇ ಇರುತ್ತಾರಂತೆ. ಇದು ಆಶ್ಚರ್ಯವೆನಿಸಿದರೂ ಸತ್ಯ, ರಾಜಸ್ಥಾನದ ನಾಗ್ಪುರ ಜಿಲ್ಲೆಯ ಭದ್ವಾ ಗ್ರಾಮದ ನಿವಾಸಿ ಪುರಖರಂ ನಿದ್ರಿಸುವ ವ್ಯಕ್ತಿಯಾಗಿದ್ದಾರೆ.

ಆತನ ಆಕ್ಸಿಸ್ ಹೈಪರ್‌ಸೊಮ್ನಿಯಾ ಎಂಬ ಕಾಯಿಲೆಯಿಂದ ಬಳಲುತ್ತಿರುವುದೇ ಅತಿಯಾದ ನಿದ್ರೆಗೆ ಕಾರಣವಾಗಿದೆ.

ಈ ವಿರಳ ಕಾಯಿಲೆಯಿಂದ ಬಳಲುತ್ತಿರುವ ಪುರಖರಂ ತಿಂಗಳಲ್ಲಿ ಐದು ದಿನ ಮಾತ್ರ ತಮ್ಮ ಅಂಗಡಿಯನ್ನು ನೋಡಿಕೊಳ್ಳಲು ಸಾಧ್ಯವಾಗುತ್ತದೆ. ನಿದ್ದೆಗೆ ಜಾರಿದರೆ ಅವರನ್ನು ಎಬ್ಬಿಸುವುದು ಕಷ್ಟ ಎನ್ನುತ್ತಾರೆ ಕುಟುಂಬಸ್ಥರು.

ಆರಂಭದಲ್ಲಿ ಅವರು 15 ಗಂಟೆಗಳ ಕಾಲ ನಿದ್ರಿಸುತ್ತಿದ್ದರು, ಕ್ರಮೇಣವಾಗಿ ಈಗ 25 ದಿನಗಳು ನಿದ್ರಿಸುತ್ತಿದ್ದಾರೆ. ಅವರು ಮಲಗಿರುವಾಗಲೇ ಅವರಿಗೆ ಸ್ನಾನ ಮಾಡಿಸಲಾಗುತ್ತದೆ, ಊಟವನ್ನು ಕೂಡ ಮಾಡಿಸಲಾಗುತ್ತದೆ.

English summary
Most of us Indians are familiar with Kumbhakaran, the younger brother of Ravan in Ramayana, who used to sleep for six months at a time. And often, people who sleep long and deep in the country are referred to "Kumbhakaran" by their friends and family.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X