ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆರಿಗೆ ಸಮಯದಲ್ಲಿ ಗರ್ಭದಲ್ಲೇ ಉಳಿದ ಶಿಶುವಿನ ತಲೆ: ನರ್ಸ್ ಅಚಾತುರ್ಯ!

|
Google Oneindia Kannada News

ರಾಮಗರ್(ರಾಜಸ್ಥಾನ), ಜನವರಿ 11: ನರ್ಸ್ ವೊಬ್ಬರ ಅಚಾತುರ್ಯದಿಂದ ಹೆರಿಗೆಯ ಸಮಯದಲ್ಲಿ ಮಗಿವಿನ ದೇಹ ತುಂಡಾಗಿ, ತಲೆ ತಾಯಿಯ ಗರ್ಭದಲ್ಲೇ ಉಳಿದ ಹೃದಯವಿದ್ರಾವಕ, ಆಘಾತಕಾರಿ ಘಟನೆ ರಾಜಸ್ಥಾನದ ರಾಮಗರ್ ನಲ್ಲಿ ನಡೆದಿದೆ.

ಭಾರತ್ ಬಂದ್: ಕುಡಚಿ ಬಳಿ ರೈಲಿನಲ್ಲೇ ಮಗುವಿಗೆ ಜನ್ಮ ನೀಡಿದ ಮಹಾತಾಯಿಭಾರತ್ ಬಂದ್: ಕುಡಚಿ ಬಳಿ ರೈಲಿನಲ್ಲೇ ಮಗುವಿಗೆ ಜನ್ಮ ನೀಡಿದ ಮಹಾತಾಯಿ

ಜನವರಿ 6 ರಂದೇ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಗರ್ಭಿಣಿಯೊಬ್ಬರು ಹೆರಿಗೆಗೆಂದು ರಾಮಗರದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದರು. ಜನವರಿ 6 ರಂದು ಹೆರಿಗೆಯ ಸಮಯದಲ್ಲಿ ಮಗುವನ್ನು ತಾಯಿಯ ಗರ್ಭದಿಂದ ಹೊರತೆಗೆಯುವಾಗ ಪುರುಷ ನರ್ಸ್ ವೊಬ್ಬರು ತೀರಾ ಒರಟಾಗಿ ಮಗುವಿನ ದೇಹವನ್ನು ಎಳೆದ ಪರಿಣಾಮ ಮಗುವಿನ ತಲೆ ಮತ್ತು ಕತ್ತಿನ ಕೆಳಭಾಗಗಳು ಬೇರೆ ಬೇರೆಯಾಗಿ, ತಲೆ ತಾಯಿಯ ಗರ್ಭದಲ್ಲೇ ಉಳಿದುಕೊಂಡಿತ್ತು.

ರಸ್ತೆಯಲ್ಲೇ ಹೆರಿಗೆ: ವಿಡಿಯೋವಾದರೂ ಅಧಿಕಾರಿಗಳ ಮನಕಲಕಲಿ! ರಸ್ತೆಯಲ್ಲೇ ಹೆರಿಗೆ: ವಿಡಿಯೋವಾದರೂ ಅಧಿಕಾರಿಗಳ ಮನಕಲಕಲಿ!

ನರ್ಸ್ ಮಾಡಿದ ಈ ಅಚಾತುರ್ಯ ಮತ್ತು ನಿರ್ಲಕ್ಷ್ಯದಿಂದಾಗಿ ಆಸ್ಪತ್ರೆ ವಿರುದ್ಧ ರಾಜ್ಯ ಮಾನವ ಹಕ್ಕು ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ.

Rajasthan: Male nurse splits baby in half in delivery time

ಘಟನೆಯ ನಂತರ ಮಹಿಳೆ ಮತ್ತು ಆಕೆಯ ಕುಟುಂಬಸ್ಥರ ಬಳಿ ಬಂದು ಹೆಚ್ಚಿನ ಚಿಕಿತ್ಸೆಗೆಂದು ಜೈಶಲ್ಮೇರ್ ಗೆ ತೆರಳುವಂತೆ ಈ ನರ್ಸ್ ಹೇಳಿದ್ದಾರೆ. ಹೆರಿಗೆ ತಜ್ಞರ ಬಳಿ ಹೋಗಿ ಹೆರಿಗೆಯನ್ನು ಮುಗಿಸಿದ್ದೇವೆ ಎಂದು ಸಹ ಹೇಳಿಕೊಂಡಿದ್ದಾರೆ.

ತನ್ನ ಹೆರಿಗೆಗೆ ಸೈಕಲ್ ಏರಿ ಆಸ್ಪತ್ರೆಗೆ ತೆರಳಿದ ಸಚಿವೆಯ ಸಾಹಸ ನೋಡಿ!ತನ್ನ ಹೆರಿಗೆಗೆ ಸೈಕಲ್ ಏರಿ ಆಸ್ಪತ್ರೆಗೆ ತೆರಳಿದ ಸಚಿವೆಯ ಸಾಹಸ ನೋಡಿ!

ಈ ಹೇಯಕೃತ್ಯಕ್ಕೆ ನರ್ಸ್ ಗೆ ಕಠಿಣ ಶಿಕ್ಷೆಯಾಗಬೇಕೆಂದು ಮಹಿಳೆಯ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

English summary
In a shocking incident, a male nurse at a government hospital in Rajasthan's Ramgarh district is said to have botched a difficult delivery during which he pulled the foetus so hard that it broke into two parts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X