ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

12ಕ್ಕೆ ಏರಿದ ನವಜಾತ ಶಿಶುಗಳ ಸಾವು; ತನಿಖೆಗೆ ಸಮಿತಿ ರಚನೆ

|
Google Oneindia Kannada News

ಜೈಪುರ, ಡಿಸೆಂಬರ್ 11: ರಾಜಸ್ಥಾನದ ಕೋಟಾದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ಸಾವಿನ ಸಂಖ್ಯೆಯು 12ಕ್ಕೆ ಏರಿಕೆಯಾಗಿದೆ. ಡಿ.9ರಿಂದ 10ರವರೆಗೆ 9 ಶಿಶುಗಳು ಸಾವನ್ನಪ್ಪಿದ್ದ ವರದಿಯಾಗಿದ್ದು, ಇದೀಗ ಸಾವಿನ ಸಂಖ್ಯೆಯು 12ಕ್ಕೆ ಏರಿಕೆಯಾಗಿರುವುದಾಗಿ ತಿಳಿದುಬಂದಿದೆ.

ಕೋಟಾದ ಜೆಕೆ ಲೋನ್ ಆಸ್ಪತ್ರೆಯಲ್ಲಿ ಬುಧವಾರ ಐದು ಶಿಶುಗಳು, ಗುರುವಾರ ನಾಲ್ಕು ಶಿಶುಗಳು ಸಾವನ್ನಪ್ಪಿದ್ದವು. 1-4 ದಿನದ ನವಜಾತ ಶಿಶುಗಳು ಇವಾಗಿದ್ದು, ಏಕಾಏಕಿ ಮಕ್ಕಳ ಸಾವಿನ ಸಂಖ್ಯೆ ಏರಿದ್ದರಿಂದ ಆತಂಕ ಉಂಟಾಗಿತ್ತು. ಇದೇ ನಿಟ್ಟಿನಲ್ಲಿ ಶುಕ್ರವಾರ ವಾರ್ಡ್ ಗಳಿಗೆ ಆರು ಹೆಚ್ಚುವರಿ ವೈದ್ಯರು ಹಾಗೂ ನರ್ಸ್ ಗಳನ್ನು ನಿಯೋಜಿಸಲಾಗಿತ್ತು.

ರಾಜಸ್ಥಾನದ ಸರ್ಕಾರಿ ಆಸ್ಪತ್ರೆಯಲ್ಲಿ 9 ನವಜಾತ ಶಿಶುಗಳ ಸಾವುರಾಜಸ್ಥಾನದ ಸರ್ಕಾರಿ ಆಸ್ಪತ್ರೆಯಲ್ಲಿ 9 ನವಜಾತ ಶಿಶುಗಳ ಸಾವು

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಪ್ರಾಥಮಿಕ ತನಿಖೆ ನಡೆಸಲು ಆರೋಗ್ಯ ಸಚಿವ ರಘು ಶರ್ಮಾ ಸೂಚಿಸಿದ್ದರು. ಇದೀಗ ಶಿಶುಗಳ ಸಾವಿನ ಕುರಿತು ತನಿಖೆ ನಡೆಸಲು ರಾಜ್ಯ ಆರೋಗ್ಯ ಸಚಿವಾಲಯವು ನಾಲ್ಕು ಮಂದಿಯನ್ನೊಳಗೊಂಡ ಸಮಿತಿಯನ್ನು ರಚಿಸಿದೆ. ವೈದ್ಯಕೀಯ ಶಿಕ್ಷಣ ಕಾರ್ಯದರ್ಶಿ ಶಿವಾಂಗಿ ಸ್ವರ್ಣಕಾರ್ ಈ ಸಾವಿನ ಕುರಿತು ತನಿಖೆ ನಡೆಸಿ ಮೂರು ದಿನಗಳ ಒಳಗೆ ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

Rajasthan Kota Hospital Infant Death Toll Rises To 12

ಆರೋಗ್ಯ ಸಚಿವ ಡಾ. ರಘು ಶರ್ಮಾ ಈ ಕುರಿತು ಮಾಹಿತಿ ನೀಡಿದ್ದು, "ನವಜಾತ ಶಿಶುಗಳ ಸಾವಿನ ಕುರಿತು ತನಿಖೆಗೆ ಆದೇಶಿಸಲಾಗಿದೆ. ಈ ಕುರಿತು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಿಂದ ಮಾಹಿತಿ ಪಡೆಯಲಾಗಿದೆ. ಒಂಬತ್ತು ಶಿಶುಗಳಲ್ಲಿ ಮೂರು ಶಿಶುಗಳು ಆಸ್ಪತ್ರೆಗೆ ಬರುವ ಮುನ್ನವೇ ಸಾವನ್ನಪ್ಪಿದ್ದವು. ಮೂರು ಮಕ್ಕಳು ಜನ್ಮಜಾತ ಸಮಸ್ಯೆಯಿಂದ ಸಾವನ್ನಪ್ಪಿವೆ. ಇನ್ನು ಮೂರು ಮಕ್ಕಳು ಸ್ತನ್ಯಪಾನ ಮಾಡುವಾಗ ಶ್ವಾಸಕೋಶಕ್ಕೆ ಹಾಲು ಹೋಗಿ ಸಾವನ್ನಪ್ಪಿವೆ" ಎಂದು ತಿಳಿಸಿದ್ದಾರೆ.

ಇದೀಗ ಸಾವಿನ ಸಂಖ್ಯೆ ಇನ್ನಷ್ಟು ಏರಿರುವುದರಿಂದ ಡಿಸಿ ಸಭೆಯನ್ನು ನಡೆಸಿದ್ದಾರೆ. ಶೀಘ್ರವೇ ಪ್ರಾಥಮಿಕ ವರದಿ ನೀಡುವಂತೆ ಸೂಚಿಸಿದ್ದಾರೆ. ಆಸ್ಪತ್ರೆಯಲ್ಲಿರುವ ನವಜಾತ ಶಿಶುಗಳ ಆರೋಗ್ಯದ ಬಗ್ಗೆ ನಿಗಾ ವಹಿಸಲು ಸೂಚಿಸಿದ್ದಾರೆ.

English summary
The death toll of infants rises to 12 on friday at jk lon hospital at kota. special committee has appointed to investigate on issue
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X