ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದ್ಯದ ಬೆಲೆ ಹೆಚ್ಚಿಸಿದ ರಾಜಸ್ಥಾನ ಸರ್ಕಾರ: ಆದಾಯ ಹೆಚ್ಚಿಸಿಕೊಳ್ಳಲು ಪ್ಲ್ಯಾನ್‌

|
Google Oneindia Kannada News

ಕೊರೊನಾವೈರಸ್ ಬಿಕ್ಕಟ್ಟಿನ ಮಧ್ಯೆ ಆದಾಯವನ್ನು ಹೆಚ್ಚಿಸಲು ರಾಜಸ್ಥಾನ ರಾಜ್ಯ ಸರ್ಕಾರವು ಮದ್ಯದ ಬೆಲೆಯನ್ನು 30 ರುಪಾಯಿ ಹೆಚ್ಚಿಸಿದೆ. ಪ್ರವಾಹ, ಸಾಂಕ್ರಾಮಿಕ ರೋಗಗಳಂತಹ ನೈಸರ್ಗಿಕ ಅಥವಾ ಮಾನವ ನಿರ್ಮಿತ ವಿಪತ್ತುಗಳನ್ನು ನಿರ್ವಹಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರಾಜ್ಯ ಹಣಕಾಸು ಇಲಾಖೆ ತಿಳಿಸಿದೆ.

"ರಾಜಸ್ಥಾನ ಅಬಕಾರಿ ಕಾಯ್ದೆ 1950 ರ ಸೆಕ್ಷನ್ 28-ಎ ಯಿಂದ ನೀಡಲ್ಪಟ್ಟ ಅಧಿಕಾರವನ್ನು ಚಲಾಯಿಸಲು ಈ ಆದೇಶವನ್ನು ತೆಗೆದುಕೊಳ್ಳಲಾಗಿದೆ. ಬರ, ಪ್ರವಾಹ, ಸಾಂಕ್ರಾಮಿಕ ರೋಗಗಳಂತಹ ನೈಸರ್ಗಿಕ ಅಥವಾ ಮಾನವ ನಿರ್ಮಿತ ವಿಪತ್ತುಗಳನ್ನು ತಗ್ಗಿಸುವ ಉದ್ದೇಶದಿಂದ ಎಲ್ಲಾ ರೀತಿಯ ಮದ್ಯದ ಮೇಲೆ ಹೆಚ್ಚುವರಿ ಶುಲ್ಕ ವಿಧಿಸಬಹುದು "ಎಂದು ಹಣಕಾಸು ಇಲಾಖೆ ಮಂಗಳವಾರ ತಿಳಿಸಿದೆ.

ಭಾರತೀಯ ನಿರ್ಮಿತ ವಿದೇಶಿ ಮದ್ಯದ ಮೇಲಿನ ಶುಲ್ಕ 180 ಮಿ.ಲಿ ಮತ್ತು 375 ಮಿ.ಲಿ ಬಾಟಲಿಗಳ ಮೇಲೆ 5 ರುಪಾಯಿ ಏರಿಕೆ, ಬ್ರೀಜರ್‌ಗಳು, ಮತ್ತು ಇತರ ಪ್ಯಾಕೇಜಿಂಗ್‌ಗೆ 750 ಮಿಲಿ ಬಾಟಲಿಗಳ ಮೇಲೆ 10 ರುಪಾಯಿ ಏರಿಕೆಗೊಂಡಿದೆ. ಬಿಯರ್‌ 650 ಮಿ.ಲಿ ಮೇಲೆ 20 ರುಪಾಯಿ ಹಾಗೂ 500 ಮಿ.ಲಿ ಬಾಟಲಿಗಳಿಗೆ 30 ರುಪಾಯಿ ಶುಲ್ಕ ವಿಧಿಸಲಾಗುತ್ತದೆ .

Rajasthan Hike Liquor Prices To Increase Revenue

ದೇಶದ ಮದ್ಯ ಮತ್ತು ರಾಜಸ್ಥಾನ ಮೇಡ್ ಲಿಕ್ಕರ್ (ಆರ್‌ಎಂಎಲ್) ಗೆ 1.5 ರುಪಾಯಿ ಏರಿಕೆಗೊಂಡಿದೆ. ಈ ಹಿಂದೆ ಏಪ್ರಿಲ್‌ನಲ್ಲಿ ರಾಜ್ಯ ಸರ್ಕಾರವು ಮದ್ಯದ ಮೇಲಿನ ಅಬಕಾರಿ ಸುಂಕವನ್ನು 10 ಪರ್ಸೆಂಟ್‌ರಷ್ಟು ಹೆಚ್ಚಿಸಿತ್ತು.

English summary
government imposing a surcharge of up to ₹30 to mop up revenue amid the COVID-19 crisis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X