• search
  • Live TV
ಜೈಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ ಕಡಿತ ಮಾಡಿತ ರಾಜಸ್ಥಾನ ಸರ್ಕಾರ: ಈಗ ಎಷ್ಟಿದೆ ದರ?

|
Google Oneindia Kannada News

ಜೈಪುರ, ಮೇ 22: ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕವನನ್ನು ಕಡಿಮೆ ಮಾಡಿದ ಬೆನ್ನಲ್ಲೇ ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಕಡಿತ ಮಾಡಿದೆ.

ಕೇಂದ್ರ ಸರ್ಕಾರದ ಮಹತ್ವದ ಆದೇಶದ ಬೆನ್ನಲ್ಲೇ ರಾಜಸ್ಥಾನದ ಕಾಂಗ್ರೆಸ್ ನೇತೃತ್ವದ ಸರ್ಕಾರ ಪೆಟ್ರೋಲ್ ಮೇಲೆ 2.48 ರೂ. ಮತ್ತು ಡೀಸೆಲ್ ಮೇಲೆ 1.16 ವ್ಯಾಟ್ ಕಡಿತ ಮಾಡಿದೆ. ಈ ಮೂಲಕ ಶನಿವಾರ 118.48 ರೂ. ಇದ್ದ ಪೆಟ್ರೋಲ್ ಬೆಲೆ ಈಗ 108.48 ರೂಪಾಯಿಗೆ ಇಳಿಕೆಯಾಗಿದೆ. 100.92 ರೂಪಾಯಿ ಮೂಲಕ ಶತಕದ ಗಡಿ ದಾಟಿದ್ದ ಡೀಸೆಲ್ ಬೆಲೆ 93.27 ರೂಪಾಯಿಗಳಿಗೆ ಇಳಿಕೆಯಾಗಿದೆ.

ಪೆಟ್ರೋಲ್-ಡೀಸೆಲ್ ದರ ಇಳಿಕೆಗೆ ಕರ್ನಾಟಕದಲ್ಲಿ ಹೇಗಿದೆ ಬಿಜೆಪಿ ನಾಯಕರ ಪ್ರತಿಕ್ರಿಯೆ?ಪೆಟ್ರೋಲ್-ಡೀಸೆಲ್ ದರ ಇಳಿಕೆಗೆ ಕರ್ನಾಟಕದಲ್ಲಿ ಹೇಗಿದೆ ಬಿಜೆಪಿ ನಾಯಕರ ಪ್ರತಿಕ್ರಿಯೆ?

ಈ ಬಗ್ಗೆ ಮಾಹಿತಿ ನೀಡಿ ಟ್ವೀಟ್ ಮಾಡಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ "ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಕೇಂದ್ರ ಸರ್ಕಾರ ಅಬಕಾರಿ ಸುಂಕ ಕಡಿಮೆ ಮಾಡಿದೆ. ರಾಜ್ಯ ಸರ್ಕಾರ ಕೂಡ ವ್ಯಾಟ್ ಕಡಿತಗೊಳಿಸಲು ತೀರ್ಮಾನ ಮಾಡಿದ್ದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 2.48 ರೂ., ಡೀಸೆಲ್ ಮೇಲೆ 1.16 ರೂ ವ್ಯಾಟ್ ಕಡಿತ ಮಾಡಲಾಗಿದೆ. ಈ ಮೂಲಕ ಪೆಟ್ರೋಲ್ ಬೆಲೆಯಲ್ಲಿ10.48 ರೂ. ಕಡಿಮೆಯಾಗಿದ್ದು ಡೀಸೆಲ್ ಬೆಲೆಯಲ್ಲಿ 7.16 ರೂ. ಕಡಿಮೆಯಾಗಲಿದೆ" ಎಂದು ಮಾಹಿತಿ ನೀಡಿದ್ದಾರೆ.

ರಾಜಸ್ಥಾನದ ನಂತರ ಕೇರಳ ಸರ್ಕಾರ ಕೂಡ ತೆರಿಗೆ ಕಡಿಮೆ ಮಾಡಿದ್ದು ಪೆಟ್ರೋಲ್‌ ಮೇಲೆ 2.41 ರೂ. ಡೀಸೆಲ್ ಮೇಲೆ 1.36 ರೂ. ವ್ಯಾಟ್ ಕಡಿತಗೊಳಿಸಿದೆ.

ತೈಲ ಬೆಲೆ ಇಳಿಕೆ; ಭಾರತ ಹೊಗಳಿದ ಇಮ್ರಾನ್ ಖಾನ್ ತೈಲ ಬೆಲೆ ಇಳಿಕೆ; ಭಾರತ ಹೊಗಳಿದ ಇಮ್ರಾನ್ ಖಾನ್

ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡಲು ಶನಿವಾರ ಮಹತ್ವದ ನಿರ್ಣಯ ಕೈಗೊಂಡಿದ್ದ ಕೇಂದ್ರ ಸರ್ಕಾರ, ಪ್ರತಿ ಲೀಟರ್ ಮೇಲೆ ಪೆಟ್ರೋಲ್ ಮೇಲೆ 8 ರೂ. ಡೀಸೆಲ್‌ ಮೇಲೆ 6 ರೂ. ಅಬಕಾರಿ ಸುಂಕ ಕಡಿಮೆ ಮಾಡಿತ್ತು.

ಸಿಲಿಂಡರ್ ಮೇಲೆ 200 ರೂ. ಸಬ್ಸಿಡಿ; ಬೆಲೆ ಕಡಿಮೆ ಮಾಡಿದ್ದ ಮಾಹಿತಿಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಟ್ವೀಟ್ ಮಾಡಿದ್ದರು. ಅಬಕಾರಿ ಸುಂಕ ಕಡಿಮೆ ಮಾಡಿರುವುದರಿಂದ ಕೇಂದ್ರ ಸರ್ಕಾರಕ್ಕೆ 1 ಲಕ್ಷ ಕೋಟಿ ಆದಾಯ ಕಡಿಮೆಯಾಗಲಿದೆ. ಹಣದುಬ್ಬರ ಕಡಿಮೆ ಮಾಡುವ ಉದ್ದೇಶದಿಂದ ಹಲವು ಘೋಷಣೆ ಮಾಡಿರುವ ಸಚಿವೆ, ಉಜ್ವಲ ಯೋಜನೆಯಡಿ ಸಿಲಿಂಡರ್‍‌ ಮೇಲೆ 200 ರೂ. ಸಬ್ಸಿಡಿ ನೀಡಲಾಗುವುದು ಎಂದು ಹೇಳಿದರು.

Rajasthan Government Cuts VAT On Petrol And Diesel

ಬೆಲೆ ಏರಿಕೆಯಿಂದ ಸಾಮಾನ್ಯ ಜನರಿಗೆ ತೊಂದರೆಯಾಗಿದ್ದೆ ಪೆಟ್ರೋಲಿಯಂ ಮೇಲಿನ ಉತ್ಪನ್ನಗಳ ಮೇಲಿನ ವ್ಯಾಟ್ ತಗ್ಗಿಸುವಂತೆ ರಾಜ್ಯ ಸರ್ಕಾರಗಳಿಗೆ ನಿರ್ಮಲಾ ಸೀತಾರಾಮನ್ ಒತ್ತಾಯ ಮಾಡಿದ್ದರು. ಈ ಬೆನ್ನಲ್ಲೇ ರಾಜಸ್ಥಾನ ಮತ್ತು ಕೇರಳ ಸರ್ಕಾರ ವ್ಯಾಟ್ ತಗ್ಗಿಸುವ ಮೂಲಕ ಕೊಂಚ ಬೆಲೆ ಇಳಿಕೆ ಮಾಡಿದೆ.

2021 ನವೆಂಬರ್‌ನಲ್ಲಿ ದೀಪಾವಳಿ ಹಿಂದಿನ ದಿನದಂದು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ಕಡಿಮೆ ಮಾಡಿತ್ತು. ಪೆಟ್ರೋಲ್ ಮೇಲೆ ಪ್ರತಿ ಲೀಟರ್‌ 5 ರೂ. ಡೀಸೆಲ್ ಮೇಲೆ ಪ್ರತಿ ಲೀಟರ್ 10 ರೂ. ಸುಂಕ ಕಡಿತಮಾಡಿತ್ತು.

English summary
The Rajasthan government cuts VAT on petrol by Rs 2.48 per litre and diesel by Rs 1.16 per litre, following the reduction of excise duty by the Centre.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X