ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಸ್ಥಾನ ಚುನಾವಣೆ : ಪಕ್ಷೇತರ ಅಭ್ಯರ್ಥಿ ವಿರುದ್ಧ ಸೋತ ಸಚಿವ!

|
Google Oneindia Kannada News

ಜೈಪುರ, ಡಿಸೆಂಬರ್ 11 : ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಸಚಿವರೊಬ್ಬರು ಪಕ್ಷೇತರ ಅಭ್ಯರ್ಥಿ ವಿರುದ್ಧ ಸೋಲು ಕಂಡಿದ್ದಾರೆ. ರಾಜಸ್ಥಾನದಲ್ಲಿ ಬಿಜೆಪಿಗೆ ಹಿನ್ನಡೆ ಉಂಟಾಗಿದ್ದು, ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಮಂಗಳವಾರ ರಾಜಸ್ಥಾನ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. 199 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ 98, ಬಿಜೆಪಿ 74, 13 ಪಕ್ಷೇತರರು ಮತ್ತು 14 ಇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ರಾಜಸ್ಥಾನದಲ್ಲಿ ಬಿಜೆಪಿಗೆ ಮುಖಭಂಗ : ಸೋಲಿಗೆ 5 ಕಾರಣಗಳು ರಾಜಸ್ಥಾನದಲ್ಲಿ ಬಿಜೆಪಿಗೆ ಮುಖಭಂಗ : ಸೋಲಿಗೆ 5 ಕಾರಣಗಳು

ಶಿರೋಹಿ ಕ್ಷೇತ್ರದಲ್ಲಿ ಸಚಿವ ಓಥರಾಮ್ ದೇವಾಸಿ ಅವರು ಪಕ್ಷೇತರ ಅಭ್ಯರ್ಥಿ ಸನ್ಯಾಮ್ ಲೋಧ ವಿರುದ್ಧ ಸೋಲು ಕಂಡಿದ್ದಾರೆ. ದೇವಾಸಿ ಅವರು 71,019 ಮತಗಳನ್ನು ಪಡೆದರೆ, ಲೋಧ ಅವರು 81,272 ಮತಗಳನ್ನು ಪಡೆದಿದ್ದಾರೆ.

Rajasthan elections 2018 : Minister loses to independent candidate

ರಾಜಸ್ಥಾನ ಕಾಂಗ್ರೆಸ್‌ ಕೈಗೆ : ಸಮೀಕ್ಷೆಗಳ ಫಲಿತಾಂಶ ನಿಜವಾಯ್ತು!ರಾಜಸ್ಥಾನ ಕಾಂಗ್ರೆಸ್‌ ಕೈಗೆ : ಸಮೀಕ್ಷೆಗಳ ಫಲಿತಾಂಶ ನಿಜವಾಯ್ತು!

ಸನ್ಯಾಮ್ ಲೋಧ ಅವರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾಗಿದ್ದರು. 2018ರ ವಿಧಾನಸಭೆ ಚುನಾವಣೆಗೂ ಮೊದಲು ಅವರು ಕಾಂಗ್ರೆಸ್‌ ತೊರೆದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಹಾಲಿ ಸಚಿವರಿಗೆ ಅವರು ಸೋಲಿನ ರುಚಿ ತೋರಿಸಿದ್ದಾರೆ.

ಸೋತ ಸಚಿವರು : ಓಥರಾಮ್ ದೇವಾಸಿ ಅವರು ಮಾತ್ರ ಚುನಾವಣೆಯಲ್ಲಿ ಸೋತಿಲ್ಲ, ಇನ್ನೂ ಹಲವರು ಸೋಲು ಕಂಡಿದ್ದಾರೆ.

* ಜಲಸಂಪನ್ಮೂಲ ಸಚಿವ ರಾಮ್‌ ಪ್ರತಾಪ್‌ ಅವರು ಹನುಮಘರ್‌ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ವಿನೋದ್ ಕುಮಾರ್ ಅವರ ಎದುರು 15,522 ಮತಗಳಿಂದ ಸೋಲುಕಂಡಿದ್ದಾರೆ.

* ಕೃಷಿ ಸಚಿವ ಪ್ರಭುಲಾಲ್ ಸಾಯ್ನಿ ಅವರು ಕಾಂಗ್ರೆಸ್‌ನ ಪ್ರಮೋದ್ ಭಯ್ಯ ವಿರುದ್ಧ 34,063 ಮತಗಳ ಅಂತರದಲ್ಲಿ ಸೋತಿದ್ದಾರೆ.

* ರಾಜಸ್ಥಾನ ವಿಧಾನಸಭೆ ಸ್ಪೀಕರ್ ಕೈಲಾಶ್ ಮೇಘಾವಾಲ್ ಅವರು 74,542 ಮತಗಳ ಅಂತರದಲ್ಲಿ ಶಾಹ್‌ಪುರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.

English summary
Rajasthan assembly elections 2018 result. Minister Otaram Dewasi lost the Sirohi seat to independent candidate Sanyam Lodha with a margin of 10,253 votes. Dewasi bagged 71,019 votes and Lodha got 81,272 votes in election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X