ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಸ್ಥಾನದಲ್ಲಿ ಕಾಂಗ್ರೆಸ್ ಮುನ್ನಡೆ : ಪೈಲಟ್ ಅಭಿಮಾನಿಗಳ ಸಂಭ್ರಮ

|
Google Oneindia Kannada News

ಜೈಪುರ, ಡಿಸೆಂಬರ್ 11 : ಐದು ವರ್ಷಗಳಿಂದ ಅಧಿಕಾರವಿಲ್ಲದೆ ರಾಜಸ್ಥಾನದಲ್ಲಿ ಪರಿತಪಿಸುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ, ಚುನಾವಣೆ ಫಲಿತಾಂಶದಲ್ಲಿ ಭರ್ಜರಿ ಮುನ್ನಡೆ ಸಾಧಿಸಿರುವುದು ಮರುಭೂಮಿಯಲ್ಲಿ ನೀರಿನ ಸೆಲೆ ಕಂಡಂತಾಗಿದೆ.

ಪಂಚರಾಜ್ಯ ಫಲಿತಾಂಶ LIVE: 3 ರಾಜ್ಯಗಳಲ್ಲಿ ಕಾಂಗ್ರೆಸ್ ಮುನ್ನಡೆ ಪಂಚರಾಜ್ಯ ಫಲಿತಾಂಶ LIVE: 3 ರಾಜ್ಯಗಳಲ್ಲಿ ಕಾಂಗ್ರೆಸ್ ಮುನ್ನಡೆ

ಬೆಳಿಗ್ಗೆ 9.20ರ ಸುಮಾರಿಗೆ 199 ಕ್ಷೇತ್ರಗಳ ವಿಧಾನಸಭಾ ಚುನಾವಣೆ ಫಲಿತಾಂಶದಲ್ಲಿ 94ರಲ್ಲಿ ಮುನ್ನಡೆ ಸಾಧಿಸಿದ್ದು, ಈಗಾಗಲೆ ಭರ್ಜರಿ ಸಂಭ್ರಮಾಚರಣೆ ಶುರುವಾಗಿದೆ. ಬಹುಮತ ಸಾಧಿಸಲು ಬೇಕಿರುವುದು 101 ಸ್ಥಾನಗಳು ಮಾತ್ರ. ಕಾಂಗ್ರೆಸ್ ಈ ಸಂಖ್ಯೆಗೆ ತೀರ ಹತ್ತಿರದಲ್ಲಿದೆ.

ರಾಜಸ್ಥಾನದಲ್ಲಿ ಕಾಂಗ್ರೆಸ್‌ ನಾಗಲೋಟ, ಬಿಜೆಪಿಗೆ ಹಿನ್ನಡೆ ರಾಜಸ್ಥಾನದಲ್ಲಿ ಕಾಂಗ್ರೆಸ್‌ ನಾಗಲೋಟ, ಬಿಜೆಪಿಗೆ ಹಿನ್ನಡೆ

ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿಸಲಾಗಿರುವ ಸಚಿನ್ ಪೈಲಟ್ ಅವರ ಮನೆಯ ಮುಂದೆ ನೂರಾರು ಅಭಿಮಾನಿಗಳು ಈಗಾಗಲೆ ಜಮಾಯಿಸಿದ್ದು, ಡೋಲು ಬಾರಿಸುತ್ತ ಕುಣಿಯುತ್ತಿದ್ದಾರೆ. ಟ್ರೆಂಡ್ ನೋಡುತ್ತಿದ್ದರೆ ಕಾಂಗ್ರೆಸ್ ಈಬಾರಿ ಬಿಜೆಪಿಯಿಂದ ಅಧಿಕಾರ ಕಸಿದುಕೊಳ್ಳುವುದು ಖಚಿತ.

Rajasthan election results : Congress takes huge lead

ಆಡಳಿತ ಚುಕ್ಕಾಣಿ ಹಿಡಿದಿದ್ದ ಭಾರತೀಯ ಜನತಾ ಪಕ್ಷ ಹಿನ್ನಡೆ ಸಾಧಿಸಿದ್ದು 75 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದ್ದು, ಇದೇ ಸ್ಥಿತಿ ಮುಂದುವರಿದರೆ ಬಿಜೆಪಿ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವುದು ನಿಶ್ಚಿತ.

ಈ ನಡುವೆ ಸಚಿನ್ ಪೈಲಟ್ ಮತ್ತು ಹಿರಿಯ ನಾಯಕ ಅಶೋಕ್ ಗೆಹ್ಲೋಟ್ ನಡುವೆ ಮುಖ್ಯಮಂತ್ರಿ ಕುರ್ಚಿಗಾಗಿ ಭಾರೀ ಪೈಪೋಟಿ ಎದುರಾಗಿದೆ. ಇತ್ತೀಚೆಗೆ ಮಾಧ್ಯಮದೊಂದಿಗೆ ಮಾತನಾಡುವಾಗ ಸಚಿನ್ ಪೈಲಟ್ ಬಗ್ಗೆ ಪ್ರಶ್ನೆ ಕೇಳಿದಾಗ ಗೆಹ್ಲೋಟ್ ಹಾರಿಕೆಯ ಉತ್ತರ ನೀಡಿದ್ದರು.

2013ರಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 163 ಸ್ಥಾನಗಳಲ್ಲಿ ಗೆದ್ದು, ವಸುಂಧರಾ ರಾಜೇ ಅವರು ಮುಖ್ಯಮಂತ್ರಿ ಪದವಿಗೇರಿದ್ದರು. ಕಾಂಗ್ರೆಸ್ ಕೇವಲ 21ರಲ್ಲಿ ಮಾತ್ರ ಗೆದ್ದಿತ್ತು.

English summary
Rajasthan election results : Congress takes huge lead leaving BJP behind. Sachin Pilot fans have already started celebrations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X