ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಸ್ಥಾನದಲ್ಲೂ ಅತಂತ್ರ : ಸರಕಾರ ರಚಿಸಲು ಕಾಂಗ್ರೆಸ್ ಸ್ವ'ತಂತ್ರ'!

|
Google Oneindia Kannada News

ಜೈಪುರ, ಡಿಸೆಂಬರ್ 11 : ರಾಜಸ್ಥಾನದಲ್ಲಿ ಸರಳ ಬಹುಮತ ಪಡೆಯುವತ್ತ ಸಾಗಿದ್ದ ಕಾಂಗ್ರೆಸ್ ಪಕ್ಷಕ್ಕೆ ಅಲ್ಪ ಹಿನ್ನಡೆ ಉಂಟಾಗಿದ್ದು, ಬಹುಮತ ಗಳಿಸಲು ಕೆಲ ಸ್ಥಾನ ಕೊರತೆಯಾಗುವ ಸಾಧ್ಯತೆಗಳು ಕಂಡುಬರುತ್ತಿವೆ.

ಅಂತಿಮ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲವಾದರೂ, ಮಧ್ಯಾಹ್ನ 1.30ರ ಸುಮಾರಿಗೆ ಚುನಾವಣಾ ಆಯೋಗದ ವೆಬ್ ಸೈಟ್ ನೀಡಿರುವ ಮಾಹಿತಿ ಪ್ರಕಾರ, ಕಾಂಗ್ರೆಸ್ 95 ಕ್ಷೇತ್ರಗಳಲ್ಲಿ ಮುಂದಿದ್ದು, ಭಾರತೀಯ ಜನತಾ ಪಕ್ಷ 76 ಕ್ಷೇತ್ರಗಳಲ್ಲಿ ಮುಂದಿದೆ ಮತ್ತು ಒಂದರಲ್ಲಿ ಗೆಲುವು ಸಾಧಿಸಿದೆ.

ರಾಜಸ್ಥಾನದಲ್ಲಿ ಕಾಂಗ್ರೆಸ್ ಮುನ್ನಡೆ : ಪೈಲಟ್ ಅಭಿಮಾನಿಗಳ ಸಂಭ್ರಮ ರಾಜಸ್ಥಾನದಲ್ಲಿ ಕಾಂಗ್ರೆಸ್ ಮುನ್ನಡೆ : ಪೈಲಟ್ ಅಭಿಮಾನಿಗಳ ಸಂಭ್ರಮ

ಬಹುಜನ ಸಮಾಜ ಪಕ್ಷ 4 ಸ್ಥಾನದಲ್ಲಿ ಮುಂದಿದ್ದರೆ, ಇತರೆ ಸಣ್ಣ ಪುಟ್ಟ ಪಕ್ಷಗಳು ಒಂದಿಷ್ಟು ಕ್ಷೇತ್ರಗಳನ್ನು ತಮ್ಮದಾಗಿಸಿಕೊಳ್ಳಲಿವೆ. ಈ ರಾಜ್ಯದಲ್ಲಿ ನಿರ್ಣಾಯಕವಾಗಿರುವವರು ಸ್ವತಂತ್ರ ಅಭ್ಯರ್ಥಿಗಳೇ. ಏಕೆಂದರೆ, 14 ಸ್ಥಾನಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಮುಂದಿದ್ದು, ಸರಕಾರ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇದೆ.

Rajasthan election results : Congerss approaches independents

ಈ ಕಾರಣದಿಂದಾಗಿಯೇ, ಸಂಭಾವ್ಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ಕಾಂಗ್ರೆಸ್ ನ 41 ವರ್ಷದ ಯುವ ನಾಯಕ ಸಚಿನ್ ಪೈಲಟ್ ಅವರು ಗೆಲ್ಲುವ ಸಾಧ್ಯತೆ ಇರುವ ಸ್ವತಂತ್ರ ಅಭ್ಯರ್ಥಿಗಳ ಸಂಪರ್ಕದಲ್ಲಿ ಇರುವುದಾಗಿ ಹೇಳಿದ್ದಾರೆ. ಈಗಾಗಲೆ 8 ಸ್ವತಂತ್ರ ಅಭ್ಯರ್ಥಿಗಳೊಂದಿಗೆ ಅವರು ಮಾತುಕತೆಯನ್ನೂ ಆಡಿದ್ದಾರೆ.

ನಾವು ಸರಳ ಬಹುಮತ ಪಡೆಯುವತ್ತ ಸಾಗುತ್ತಿದ್ದೇವೆ. ಅಂತಿಮ ಫಲಿತಾಂಶ ಬಂದ ಮೇಲೆ ಇದು ಖಂಡಿತ ಸ್ಪಷ್ಟವಾಗಲಿದೆ. ಆದರೂ ಬಿಜೆಪಿಯೇತರ ಮತ್ತು ನಮ್ಮ ಸಿದ್ಧಾಂತವನ್ನು ಬೆಂಬಲಿಸುವ ಪಕ್ಷಗಳನ್ನು ನಾವು ಸ್ವಾಗತಿಸುತ್ತೇವೆ. ಆ ಎಲ್ಲ ಪಕ್ಷ, ಅಭ್ಯರ್ಥಿಗಳೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ ಎಂದು ಸಚಿನ್ ಪೈಲಟ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಪಂಚರಾಜ್ಯ ಚುನಾವಣೆ ಫಲಿತಾಂಶ LIVE:ರೋಚಕ ಘಟ್ಟದಲ್ಲಿ ಮಧ್ಯಪ್ರದೇಶ ಫಲಿತಾಂಶಪಂಚರಾಜ್ಯ ಚುನಾವಣೆ ಫಲಿತಾಂಶ LIVE:ರೋಚಕ ಘಟ್ಟದಲ್ಲಿ ಮಧ್ಯಪ್ರದೇಶ ಫಲಿತಾಂಶ

ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿರುವ ಅವರು ಯಾರು ಮುಖ್ಯಮಂತ್ರಿ ಆಗುತ್ತಾರೆ ಎಂಬ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಡುತ್ತಿಲ್ಲ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಚಿನ್ ಪೈಲಟ್ ಮತ್ತು ಹಿರಿಯ ನಾಯಕ, ಎರಡು ಬಾರಿ ಮುಖ್ಯಮಂತ್ರಿಯೂ ಆಗಿರುವ ಅಶೋಕ್ ಗೆಹ್ಲೋಟ್ ನಡುವೆ ಭಾರೀ ಪೈಪೋಟಿಯಿದೆ.

ರಾಜಸ್ಥಾನ ಕಾಂಗ್ರೆಸ್‌ ಕೈಗೆ : ಸಮೀಕ್ಷೆಗಳ ಫಲಿತಾಂಶ ನಿಜವಾಯ್ತು!ರಾಜಸ್ಥಾನ ಕಾಂಗ್ರೆಸ್‌ ಕೈಗೆ : ಸಮೀಕ್ಷೆಗಳ ಫಲಿತಾಂಶ ನಿಜವಾಯ್ತು!

ಈ ಬಗ್ಗೆ ಪ್ರತಿಕ್ರಿಯಿಸಿರುವ ಗೆಹ್ಲೋಟ್ ಅವರು, ಕಾಂಗ್ರೆಸ್ಸಿಗೆ ರಾಜಸ್ಥಾನದ ಜನಾದೇಶ ಸಿಕ್ಕಿದೆ. ಅಂಕಿಸಂಖ್ಯೆಗಳು ಸ್ವಲ್ಪ ಹೆಚ್ಚೂಕಡಿಮೆಯಾದರೂ ಜನಾದೇಶ ಕಾಂಗ್ರೆಸ್ ಪರವಾಗಿಯೇ ಇದೆ. ಕಾಂಗ್ರೆಸ್ ಖಂಡಿತ ಸರಕಾರ ರಚಿಸಲಿದೆ. ಆದರೂ, ನಮಗೆ ಬಿಜೆಪಿ ವಿರೋಧಿ ಮತ್ತು ಸ್ವತಂತ್ರ ಅಭ್ಯರ್ಥಿಗಳ ಬೆಂಬಲ ಬೇಕೇಬೇಕು ಎಂದು ಹೇಳಿದ್ದು, ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಬಗ್ಗೆ ಇದನ್ನು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಲಿದೆ ಎಂದು ಹಾರಿಕೆಯ ಉತ್ತರ ನೀಡಿದ್ದಾರೆ.

English summary
Rajasthan election results : Congerss has approached independents and like minded partis, which are anti-BJP to form government. Sachin Pilot and Ashok Gehlot are fighting for CM post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X