• search
  • Live TV
ಜೈಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಜಸ್ಥಾನ ಕಾಂಗ್ರೆಸ್‌ ಶಾಸಕರು ಜೈಸಲ್ಮೇರ್‌ಗೆ ಸ್ಥಳಾಂತರ!

|

ಜೈಪುರ, ಜುಲೈ 31 : ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಬೆಂಬಲಿಸುವ ರಾಜಸ್ಥಾನದ ಕಾಂಗ್ರೆಸ್ ಶಾಸಕರನ್ನು ಜೈಸಲ್ಮೇರ್‌ನ ಹೋಟೆಲ್‌ಗೆ ಸ್ಥಳಾಂತರ ಮಾಡಲಾಗಿದೆ. ಆಗಸ್ಟ್ 14ರ ತನಕ ಶಾಸಕರು ಹೋಟೆಲ್‌ನಲ್ಲಿಯೇ ಇರಲಿದ್ದಾರೆ.

ಶುಕ್ರವಾರ ಜೈಪುರ ವಿಮಾನ ನಿಲ್ದಾಣದಿಂದ ರಾಜಸ್ಥಾನದ ಕಾಂಗ್ರೆಸ್‌ ಶಾಸಕರು ಜೈಸಲ್ಮೇರ್‌ಗೆ ಪ್ರಯಾಣ ಬೆಳೆಸಿದರು. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಸಹ ತಮ್ಮ ಬೆಂಬಲಿಗ ಶಾಸಕರ ಜೊತೆ ತೆರಳಿದರು.

ರಾಜಸ್ಥಾನ ಬಿಕ್ಕಟ್ಟು; ಕಾಂಗ್ರೆಸ್ ಶಾಸಕರು ಇರುವ ಹೋಟೆಲ್ ಬದಲು

ಅಶೋಕ್ ಗೆಹ್ಲೋಟ್ ಗುರುವಾರ ಶಾಸಕರ ಸಭೆ ನಡೆಸಿ ಆಗಸ್ಟ್ 14ರ ತನಕ ಶಾಸಕರು ಹೋಟೆಲ್‌ನಲ್ಲಿಯೇ ಇರಬೇಕು. ಸಚಿವರು ವಿಧಾನಸೌಧಕ್ಕೆ ಹೋಗಿ ಇಲಾಖೆಯ ಕೆಲಸಗಳನ್ನು ಮಾಡಬೇಕು ಎಂದು ಸೂಚನೆ ಕೊಟ್ಟಿದ್ದರು.

ವಿಧಾನಸಭೆ ಅಧಿವೇಶನ ನಡೆಸಲು ರಾಜಸ್ಥಾನ ರಾಜ್ಯಪಾಲರ ಒಪ್ಪಿಗೆ

ಸಚಿನ್ ಪೈಲೆಟ್ ಬಣ ಮತ್ತು ಬಿಜೆಪಿ ಶಾಸಕರನ್ನು ಸೆಳೆಯಲು ಭಾರಿ ಪ್ರಯತ್ನ ಮಾಡುತ್ತಿದೆ. ಆದ್ದರಿಂದ, ಎಲ್ಲರನ್ನೂ ಜೈಪುರದ ಹೋಟೆಲ್‌ನಿಂದ ಜೈಸಲ್ಮೇರ್‌ನ ಹೋಟೆಲ್‌ಗೆ ಸ್ಥಳಾಂತರ ಮಾಡಲಾಗಿದೆ.

ಗೆಹ್ಲೋಟ್ ಜೇಬಲ್ಲಿ ಮ್ಯಾಜಿಕ್ ನಂಬರ್; ಕಾಂಗ್ರೆಸ್ ಸರ್ಕಾರ ಸುಭದ್ರ!

ರಾಜಸ್ಥಾನ ವಿಧಾನಸಭೆ ಅಧಿವೇಶನ ಆಗಸ್ಟ್ 14ರಂದು ಆರಂಭವಾಗಲಿದೆ. ಅಲ್ಲಿಯ ತನಕ ಎಲ್ಲಾ ಶಾಸಕರು ಹೋಟೆಲ್‌ನಲ್ಲಿಯೇ ಇರಲಿದ್ದಾರೆ. ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲೆಟ್ ನಡುವಿನ ಅಸಮಾಧಾನ ಭುಗಿಲೆದ್ದ ಬಳಿಕ ಎಲ್ಲಾ ಶಾಸಕರು ಹೋಟೆಲ್‌ನಲ್ಲಿಯೇ ಇದ್ದಾರೆ.

ಮತ್ತೊಂದು ಕಡೆ ಸಚಿನ್ ಪೈಲೆಟ್ ಬಣದ ಶಾಸಕರು ಹರ್ಯಾಣದ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಸಚಿನ್ ಪೈಲೆಟ್ ಜೊತೆ 21, ಗೆಹ್ಲೋಟ್ ಜೊತೆ 103 ಶಾಸಕರು ಇದ್ದಾರೆ ಎಂದು ಅಂದಾಜಿಸಲಾಗಿದೆ.

English summary
Rajasthan Congress MLAs who supporting CM Ashok Gehlot shifted to Jaisalmer from Jaipur. MLAs will stay in hotel till August 14, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X