ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ ಯಾರೆಂದು ಹೈಕಮಾಂಡ್ ತೀರ್ಮಾನಿಸಲಿ ಎಂಬ ನಿರ್ಧಾರ; ಶಾಸಕ ಅಸಮಾಧಾನ

|
Google Oneindia Kannada News

ಜೈಪುರ್, ಡಿಸೆಂಬರ್ 12: ರಾಜಸ್ತಾನದಲ್ಲಿ ಮುಖ್ಯಮಂತ್ರಿ ಆಯ್ಕೆ ವಿಚಾರವಾಗಿ ಅಸಮಾಧಾನ ವ್ಯಕ್ತವಾಗಿದೆ. ಶಾಸಕ ವಿಶ್ವೇಂದ್ರ ಸಿಂಗ್ ಆಯ್ಕೆ ಪ್ರಕ್ರಿಯೆಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜಸ್ತಾನದಲ್ಲಿ ಬುಧವಾರ ಒಂದು ಅಂಶದ ನಿರ್ಣಯ ಕೈಗೊಳ್ಳಲಾಯಿತು. ಮುಖ್ಯಮಂತ್ರಿ ಆಯ್ಕೆಯ ಅಧಿಕಾರವನ್ನು ರಾಹುಲ್ ಗಾಂಧಿ ಅವರಿಗೆ ನೀಡಲಾಯಿತು.

ಈ ಬಗ್ಗೆ ಇದೀಗ ಅಸಮಾಧಾನವಾಗಿದ್ದಾರೆ ವಿಶ್ವೇಂದ್ರ ಸಿಂಗ್. ಪಕ್ಷದ ಹೈಕಮಾಂಡ್ ನಿಂದ ಮುಖ್ಯಮಂತ್ರಿ ಯಾರು ಎಂಬುದನ್ನು ನಿರ್ಧರಿಸುವಂತೆ ಇದ್ದರೆ ಶಾಸಕರಿಂದ ಅಭಿಪ್ರಾಯ ಸಂಗ್ರಹಿಸುವ ಅಗತ್ಯ ಏನು? ಪಕ್ಷದ ವೀಕ್ಷಕರಿಗೆ ನನ್ನ ಅಭಿಪ್ರಾಯವನ್ನು ತಿಳಿಸುವ ಮೂಲಕ ಏಕೆ ಸಮಯ ವ್ಯರ್ಥ ಮಾಡಿಕೊಳ್ಳಬೇಕು ಎಂದು ಎಂದು ಸಿಂಗ್ ಪ್ರಶ್ನಿಸಿದ್ದಾರೆ.

ರಾಜಸ್ಥಾನ: ಬಿದ್ದ ಕಾಂಗ್ರೆಸ್ಸಿನ ಪತಾಕೆಯನ್ನು ಹಾರಿಸಿದ 'ಪೈಲಟ್' ರಾಜಸ್ಥಾನ: ಬಿದ್ದ ಕಾಂಗ್ರೆಸ್ಸಿನ ಪತಾಕೆಯನ್ನು ಹಾರಿಸಿದ 'ಪೈಲಟ್'

ಶಾಸಕಾಂಗ ಪಕ್ಷದಲ್ಲಿ ಭಾಗವಹಿಸಿದ್ದ ಅವರು, ಆ ನಂತರ ಮಾತನಾಡಿದ್ದಾರೆ. ಜಾಟ್ ಸಮುದಾಯದ ನಾಯಕರಾದ ಅವರು, ಭರತ್ ಪುರ್ ಜಿಲ್ಲೆಯ ದೀಗ್-ಕುಮ್ಹೇರ್ ಕ್ಷೇತ್ರದಿಂದ ಗೆದ್ದು ಶಾಸಕರಾಗಿದ್ದಾರೆ. ಕಾಂಗ್ರೆಸ್ ವೀಕ್ಷಕರಾದ ಕೆ.ಸಿ.ವೇಣುಗೋಪಾಲ್ ಅವರು ಕಾಂಗ್ರೆಸ್ ಶಾಸಕರ ಜತೆ ಮಾತುಕತೆ ನಡೆಸಿದ್ದಾರೆ.

Rajasthan Congress MLA in disagreement over Rahul Gandhi selecting CM face

ಶಾಸಕರಿಂದ ಅಭಿಪ್ರಾಯ ಪಡೆದು, ಅದನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ತಿಳಿಸಲಾಗುವುದು. ಆ ನಂತರ ಮುಖ್ಯಮಂತ್ರಿ ಯಾರು ಎಂದು ಅವರು ಹೇಳಿದ್ದಾರೆ. "ಇದೊಂದು ಅಂಶದ ಬಗ್ಗೆ ಭಿನ್ನಾಭಿಪ್ರಾಯ ಇದೆ. ಆದರೆ ಪಕ್ಷದ ಮೇಲೆ ಕೋಪ, ಅಸಂತೋಷ ಏನಿಲ್ಲ. ಪಕ್ಷದ ಒಂದಂಶದ ನಿರ್ಣಯಕ್ಕೆ ನನಗೆ ಒಪ್ಪಿಗೆ ಇದೆ. ಆದರೆ ಅಂಥ ಸನ್ನಿವೇಶದಲ್ಲಿ ಶಾಸಕರ ಅಭಿಪ್ರಾಯ ಏಕೆ ಪಡೆಯಬೇಕು? ಅದರಿಂದ ಪ್ರಯೋಜನ ಇಲ್ಲ ಅಂದಿದ್ದೆ" ಎಂದಿದ್ದಾರೆ ವಿಶ್ವೇಂದ್ರ ಸಿಂಗ್.

5 ರಾಜ್ಯಗಳ ಚುನಾವಣೆ : ಸಮೀಕ್ಷೆ ಹೇಳಿದ್ದೇನು? ಫಲಿತಾಂಶ ಬಂದಿದ್ದೇನು?5 ರಾಜ್ಯಗಳ ಚುನಾವಣೆ : ಸಮೀಕ್ಷೆ ಹೇಳಿದ್ದೇನು? ಫಲಿತಾಂಶ ಬಂದಿದ್ದೇನು?

ರಾಜಸ್ತಾನ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಪೈಲಟ್ ಹಾಗೂ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಇಬ್ಬರೂ ಅಲ್ಲಿನ ಮುಖ್ಯಮಂತ್ರಿ ಹುದ್ದೆಯ ರೇಸಿನಲ್ಲಿ ಇದ್ದಾರೆ.

English summary
Congress MLA Vishvendra Singh has expressed disagreement over the process of seeking opinion of party legislators to select the chief ministerial candidate in Rajasthan when party president Rahul Gandhi will decide the face for the coveted post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X