ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಸ್ಥಾನ : ಕಾಂಗ್ರೆಸ್ಸಿನಿಂದ 28 ಬಂಡಾಯಗಾರರ ಉಚ್ಚಾಟನೆ

|
Google Oneindia Kannada News

ಜೈಪುರ, ನವೆಂಬರ್ 26: ರಾಜಸ್ಥಾನದಲ್ಲಿ ಚುನಾವಣಾ ಪ್ರಚಾರದ ರಂಗು ಪ್ರತಿದಿನ ಹೆಚ್ಚಾಗುತ್ತಿದ್ದು, ಬಿಜೆಪಿಯಂತೆ ಕಾಂಗ್ರೆಸ್ಸಿನಲ್ಲೂ ಬಂಡಾಯಗಾರರ ಬಿಸಿ ತಟ್ಟಿದೆ.

ಚುನಾವಣೆ ದಿನಾಂಕ(ಡಿಸೆಂಬರ್ 07) ಹತ್ತಿರವಾಗುತ್ತಿದ್ದಂತೆ ಭಿನ್ನಮತೀಯ ಚಟುವಟಿಕೆಗಳು ಕಂಡು ಬರುತ್ತಿದ್ದು, ಪಕ್ಷದಲ್ಲಿನ ಟಿಕೆಟ್ ಕಲಹವನ್ನು ಹತ್ತಿಕ್ಕಲು ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಚಿನ್ ಪೈಲಟ್ ಅವರು ಯತ್ನಿಸುತ್ತಿದ್ದಾರೆ.

ರಾಜಸ್ಥಾನದಲ್ಲಿ ಸಚಿನ್ ಪೈಲಟ್ ಗೆ ಸಿಕ್ತು ನವಾಬ್ ಕುಟುಂಬ ಬೆಂಬಲ ರಾಜಸ್ಥಾನದಲ್ಲಿ ಸಚಿನ್ ಪೈಲಟ್ ಗೆ ಸಿಕ್ತು ನವಾಬ್ ಕುಟುಂಬ ಬೆಂಬಲ

ರಾಜಸ್ಥಾನದಲ್ಲಿ ಒಂಬತ್ತು ಶಾಸಕರು ಮತ್ತು ಮಾಜಿ ಕೇಂದ್ರ ಸಚಿವರು ಸೇರಿ 28 ಕಾಂಗ್ರೆಸ್‌ ನಾಯಕರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.

Rajasthan Congress expels 28 rebel leaders ahead of December 7 polls

ಪಕ್ಷದಿಂದ ಟಿಕೆಟ್‌ ನೀಡಿದ್ದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ನಾಮಪತ್ರ ಸಲ್ಲಿಸಿದ್ದಕ್ಕಾಗಿ ಈ ರೀತಿ ಕ್ರಮ ಜರುಗಿಸುವಂತೆ ರಾಜ್ಯಾಧ್ಯಕ್ಷ ಸಚಿನ್ ಪೈಲಟ್ ಆದೇಶಿಸಿದ್ದಾರೆ.

ಮಾಜಿ ಕೇಂದ್ರ ಸಚಿವ ಮಹಾದೇವ್‌ ಸಿಂಗ್‌ ಖಂಡೇಲಾ, ಮಾಜಿ ಶಾಸಕ ಸನ್ಯಮ್‌ ಲೋಧಾ, ನಾತು ರಾಮ್‌ ಸಿನೋದಿಯಾ, ನಾವಲ್‌ ಕಿಶೋರ್‌ ಮೀನಾ, ಖುಶ್ವೀರ್‌ ಸಿಂಗ್, ಸೋಹನ್‌ ನಾಯಕ್, ಸಿಎಸ್‌ ಬೈದ್, ಮೇಶ್‌ ಚಾಂದ್‌ ಖಂಡೇವಾರ ಮತ್ತು ರಮೇಶ್‌ ಖಿಂಚಿಯನ್ನು ಉಚ್ಚಾಟಿಸಲಾಗಿದೆ. ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಸ್ವತಂತ್ರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ ಆರೋಪ ಹೊತ್ತುಕೊಂಡಿದ್ದಾರೆ.

ದೇಶದ ಗಮನ ಸೆಳೆದಿರುವ ರಾಜಸ್ಥಾನದ 10 ಕ್ಷೇತ್ರಗಳ ಕದನ ದೇಶದ ಗಮನ ಸೆಳೆದಿರುವ ರಾಜಸ್ಥಾನದ 10 ಕ್ಷೇತ್ರಗಳ ಕದನ

200 ವಿಧಾನಸಭಾ ಕ್ಷೇತ್ರಗಳ ರಾಜಸ್ಥಾನದಲ್ಲಿ ಡಿಸೆಂಬರ್ 7ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಡಿಸೆಂಬರ್ 11ರಂದು ಫಲಿತಾಂಶ ಹೊರಬರಲಿದೆ.

English summary
The Congress on Sunday expelled its 28 leaders in Rajasthan, including nine former MLAs and an ex-Union minister, for filing nominations against the party's official candidates. The action was initiated on the direction of state Congress chief Sachin Pilot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X