ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನೆಯಲ್ಲೇ ಹೊಸ ವರ್ಷಾಚರಣೆಗೆ ಅಶೋಕ್ ಗೆಹ್ಲೋಟ್ ಮನವಿ

|
Google Oneindia Kannada News

ರಾಜಸ್ಥಾನ, ಡಿಸೆಂಬರ್ 21: ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಈ ಬಾರಿ ಜನರು ಮನೆಯಲ್ಲೇ ಹೊಸ ವರ್ಷದ ಆಚರಣೆ ನಡೆಸಬೇಕು, ಪಟಾಕಿ ಸಿಡಿಸುವುದರಿಂದ ದೂರವಿರಬೇಕು ಎಂದು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಜನರಲ್ಲಿ ಮನವಿ ಮಾಡಿದ್ದಾರೆ.

ಕೊರೊನಾ ಲಸಿಕಾ ಕಾರ್ಯಕ್ರಮದ ಕುರಿತು ಸೋಮವಾರ ಸಭೆ ನಡೆಸಿ ಮಾತನಾಡಿದ ಅವರು, ಸಾರ್ವಜನಿಕರ ಆರೋಗ್ಯದ ಕುರಿತು ಕಳವಳ ವ್ಯಕ್ತಪಡಿಸಿದರು.

ಫ್ರಾನ್ಸ್: ಡಿಸೆಂಬರ್ 15ರಿಂದ ಕೊರೊನಾ ಲಾಕ್‌ಡೌನ್, ರಾತ್ರಿ ಕರ್ಫ್ಯೂಫ್ರಾನ್ಸ್: ಡಿಸೆಂಬರ್ 15ರಿಂದ ಕೊರೊನಾ ಲಾಕ್‌ಡೌನ್, ರಾತ್ರಿ ಕರ್ಫ್ಯೂ

"ಜನರು ಮನೆಯಲ್ಲೇ ಅವರ ಕುಟುಂಬ ಸದಸ್ಯರೊಂದಿಗೆ ಹೊಸ ವರ್ಷವನ್ನು ಆಚರಿಸಲಿ. ಈ ಬಾರಿ ಹೆಚ್ಚು ಜನ ಸೇರುವುದನ್ನು ತಪ್ಪಿಸಬೇಕು. ಪಟಾಕಿಗಳನ್ನು ಹಚ್ಚುವುದರಿಂದ ದೂರವುಳಿಯುವಂತೆ ನೋಡಿಕೊಳ್ಳಬೇಕು. ಸದ್ಯ ಈಗಿರುವ ಪರಿಸ್ಥಿತಿಯಲ್ಲಿ ಎಲ್ಲರ ಆರೋಗ್ಯವೂ ಮುಖ್ಯ. ಸುಪ್ರೀಂ ಕೋರ್ಟ್ ನೀಡಿರುವ ಕೋವಿಡ್ 19 ನಿಯಮಗಳ ಮಾರ್ಗಸೂಚಿಗಳನ್ನು ರಾಜಸ್ಥಾನ ಸರ್ಕಾರ ಕಠಿಣವಾಗಿ ಪಾಲಿಸಬೇಕಿದೆ" ಎಂದು ಹೇಳಿದ್ದಾರೆ.

Rajasthan CM Ashok Gehlot Urged People To Celebrate New Year At Home

ಕೊರೊನಾ ಲಸಿಕೆ ಕಾರ್ಯಕ್ರಮಕ್ಕೆ ಆದಷ್ಟು ಬೇಗ ಸೂಕ್ತ ಸ್ಥಳಗಳನ್ನು ಗುರುತಿಸಲು ಅಧಿಕಾರಿಗಳಿಗೆ ಸೂಚಿಸಿ, ಕ್ರಿಸ್ ಮಸ್, ಹೊಸ ವರ್ಷಾಚರಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದ್ದಾರೆ.

English summary
Rajasthan Chief Minister Ashok Gehlot has urged people to celebrate New Year''s eve at home and avoid bursting firecrackers and mass gatherings in view of the COVID-19 pandemic
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X