India
  • search
  • Live TV
ಜೈಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜಸ್ಥಾನದಲ್ಲಿ ಶಾಸಕಿಯ ಮತಚೀಟಿ ಕೈಗೆತ್ತಿಕೊಂಡ ಬಿಜೆಪಿ ವೀಕ್ಷಕ; ಮತ ಅಸಿಂಧುಗೊಳಿಸಲು ಆಗ್ರಹ

|
Google Oneindia Kannada News

ಜೈಪುರ, ಜೂ. 10: ರಾಜಸ್ಥಾನದಲ್ಲಿ ರಾಜ್ಯಸಭೆ ಚುನಾವಣೆಗೆ ನಡೆಯುತ್ತಿರುವ ಮತದಾನದ ವೇಳೆ ಉದ್ವಿಗ್ನ ವಾತಾವರಣ ಉಂಟಾಗಿದ್ದು, ಈಗ ಬಿಜೆಪಿ ಶಾಸಕರೊಬ್ಬರ ಮತ ವಿವಾದಕ್ಕೆ ಕಾರಣವಾಗಿದೆ.

ಧೋಲ್‌ಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ರಾಣಿ ಕುಶ್ವಾಹ ಅವರು ಮತದಾನ ಮಾಡುತ್ತಿದ್ದಾಗ ಅವರ ಪಕ್ಷದ ಚುನಾವಣಾ ವೀಕ್ಷಕ ರಾಜೇಂದ್ರ ರಾಥೋಡ್ ಅವರು ಶೋಭಾ ರಾಣಿಯವರ ಮತ ಚೀಟಿಯನ್ನು ಕೈಗೆ ತೆಗೆದುಕೊಂಡರೆನ್ನಲಾಗಿದೆ., ಇದು ಈಗ ವಿವಾದ ಹುಟ್ಟು ಹಾಕಿದ್ದು, ನಿಯಮಗಳಿಗೆ ವಿರುದ್ಧವಾಗಿದೆ ಎನ್ನಲಾಗಿದೆ. ಈ ಸಂಬಂಧ ತಗಾದೆ ಎತ್ತಿರುವ ಈ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿರುವ ಉದ್ಯಮಿ ಸುಭಾಷ್ ಚಂದ್ರ ಅವರು ಶೋಭಾ ರಾಣಿಯವರ ಮತವನ್ನು 'ಅಸಿಂಧು' ಎಂದು ಘೋಷಿಸಬೇಕೆಂದು ಒತ್ತಾಯಿಸಿದ್ದಾರೆ. ಶೋಭಾ ರಾಣಿ ಕುಶ್ವಾಹ ಅವರು ಕಾಂಗ್ರೆಸ್ ಅಭ್ಯರ್ಥಿ ಪ್ರಮೋದ್ ತಿವಾರಿ ಪರ ಅಡ್ಡ ಮತದಾನ ಮಾಡಿದ್ದಾರೆ ಎನ್ನಲಾಗಿದೆ.

ರಾಜ್ಯಸಭೆ: ಪವಾಡ ಸಂಭವಿಸಿದರೆ ಮಾತ್ರ ಬಿಜೆಪಿಗೆ ಗೆಲುವು!ರಾಜ್ಯಸಭೆ: ಪವಾಡ ಸಂಭವಿಸಿದರೆ ಮಾತ್ರ ಬಿಜೆಪಿಗೆ ಗೆಲುವು!

ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಸುಭಾಷ್ ಚಂದ್ರ ಅವರು ಆಕ್ಷೇಪ ವ್ಯಕ್ತಪಡಿಸಿ, ರಾಜೇಂದ್ರ ರಾಥೋಡ್ ಅವರ ಮತದಾನದ ಚೀಟಿಯನ್ನು ಕೈಯಲ್ಲಿ ಹಿಡಿದಿದ್ದಾರೆ ಎಂಬ ಕಾರಣಕ್ಕಾಗಿ ಅವರ ಮತವನ್ನು ಅಸಿಂಧುಗೊಳಿಸಬೇಕೆಂದು ಒತ್ತಾಯಿಸಿದರು. ಆದರೆ ರಾಜೇಂದ್ರ ರಾಥೋಡ್‌ ಅವರು ಈ ಆರೋಪವನ್ನು ನಿರಾಕರಿಸಿದರು.

"ನಾನು ಶೋಭಾ ರಾಣಿ ಕುಶ್ವಾಹ ಅವರ ಮತವನ್ನು ನೋಡಿದೆ ಅಷ್ಟೇ. ಮತಪತ್ರವನ್ನು ನಾನು ಕೈಗೆ ತೆಗೆದುಕೊಳ್ಳಲಿಲ್ಲ. ಅಲ್ಲಿ ಏನೇ ನಡೆದೆಲ್ಲವೂ ಪಕ್ಷದ ಆಂತರಿಕ ವಿಷಯವಾಗಿದೆ. ಶೋಭಾ ರಾಣಿ ಕುಶ್ವಾಹ ಬಿಜೆಪಿ ಅಣತಿ ಪ್ರಕಾರ ಮತ ಚಲಾಯಿಸಿಲ್ಲ" ಎಂದು ಬಿಜೆಪಿ ಚುನಾವಣಾ ವೀಕ್ಷಕ ರಾಜೇಂದ್ರ ರಾಥೋಡ್ ಹೇಳಿದ್ದಾರೆ. ಆದರೆ ಈ ಬಗ್ಗೆ ರಾಜಸ್ಥಾನ ಬಿಜೆಪಿ ಅಧ್ಯಕ್ಷ ಸತೀಶ್ ಪೂನಿಯಾ ಮಾತನಾಡಿ, ಶೋಭಾ ರಾಣಿ ಕುಶ್ವಾಹ ಅವರ ಮತದಲ್ಲಿ ಕೆಲವು ತಪ್ಪುಗಳಿವೆ ಎಂದು ಹೇಳಿದ್ದಾರೆ.

ಚುನಾವಣಾ ವೀಕ್ಷಕರು ಶಾಸಕರ ಮತವನ್ನು ಹಿಡಿದಿಟ್ಟುಕೊಳ್ಳಬಾರದು. ಆದರೆ ಸಾಮಾನ್ಯವಾಗಿ ಶಾಸಕರು ತಮ್ಮ ಮತವನ್ನು ರಹಸ್ಯ ಮತದಾನಕ್ಕೆ ಒಳಪಡಿಸುವ ಮೊದಲು ವೀಕ್ಷಕರಿಗೆ ತೋರಿಸುತ್ತಾರೆ.

Rajasthan BJP Poll Observer Holds Vote Slip on Hand, Triggering Controversy

ರಾಜಸ್ಥಾನದಲ್ಲಿ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್ 108 ಶಾಸಕರನ್ನು ಹೊಂದಿದ್ದು, ಬಿಜೆಪಿ 71 ಮತಗಳನ್ನು ಹೊಂದಿದೆ. ಬಿಜೆಪಿ 30 ಹೆಚ್ಚುವರಿ ಮತಗಳನ್ನು ಹೊಂದಿದ್ದು, ಎರಡನೇ ಸ್ಥಾನ ಗೆಲ್ಲಲು ಇನ್ನೂ 11 ಮತಗಳ ಅಗತ್ಯವಿದೆ. ಮೂರನೇ ಸ್ಥಾನವನ್ನು ಗೆಲ್ಲಲು ಕಾಂಗ್ರೆಸ್‌ಗೆ ಇನ್ನೂ 15 ಮತಗಳ ಅಗತ್ಯವಿದೆ.

ರಾಜ್ಯಸಭೆ ಚುನಾವಣೆ ಅನಗತ್ಯ; ಅಶೋಕ್ ಗೆಹ್ಲೋಟ್ರಾಜ್ಯಸಭೆ ಚುನಾವಣೆ ಅನಗತ್ಯ; ಅಶೋಕ್ ಗೆಹ್ಲೋಟ್

ಕಾಂಗ್ರೆಸ್ ಎರಡು ಮತ್ತು ಬಿಜೆಪಿ ಒಂದು ಸ್ಥಾನ ಗೆಲ್ಲುವ ತವಕದಲ್ಲಿದೆ. ನಾಲ್ಕನೇ ಸ್ಥಾನಕ್ಕೆ ಸುಭಾಷ್ ಚಂದ್ರ ಅವರು ಪ್ರಮೋದ್ ತಿವಾರಿಗೆ ಕಣದಲ್ಲಿ ಸವಾಲು ಹಾಕುವ ಮೂಲಕ ಪೈಪೋಟಿ ಏರ್ಪಟ್ಟಿದೆ. 200 ಸದಸ್ಯ ಬಲದ ರಾಜಸ್ಥಾನ ವಿಧಾನಸಭೆಯಲ್ಲಿ ಪ್ರತಿ ಅಭ್ಯರ್ಥಿ ಗೆಲುವಿಗೆ 41 ಮತಗಳ ಅಗತ್ಯವಿದೆ. ಇದಕ್ಕೂ ಮುನ್ನ ಆಡಳಿತಾರೂಢ ಕಾಂಗ್ರೆಸ್‌ನೊಂದಿಗೆ ಮತ ಚಲಾಯಿಸಿದವರಲ್ಲಿ ಮಾಯಾವತಿ ಪಕ್ಷದ ನಾಲ್ವರು ಶಾಸಕರು ಸೇರಿದ್ದರು.

English summary
The Rajya Sabha polls in Rajasthan have triggered a tense atmosphere, which has now led to a controversy for a BJP MLA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X