ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಸ್ಥಾನದಲ್ಲಿ ನಿಲ್ಲದ ಜಟಾಪಟಿ; ಗೆಹ್ಲೋಟ್ ಪ್ರಸ್ತಾವನೆ ತಿರಸ್ಕಾರ!

|
Google Oneindia Kannada News

ಜೈಪುರ, ಜುಲೈ 29 : ರಾಜಸ್ಥಾನದಲ್ಲಿ ಸ್ಪೀಕರ್ ಮತ್ತು ಸರ್ಕಾರದ ನಡುವೆ ನಡೆಯುತ್ತಿರುವ ಜಟಾಪಟಿ ಮುಂದುವರೆದಿದೆ. ವಿಧಾನಸಭೆ ಅಧಿವೇಶನ ಕರೆಯಲು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಲ್ಲಿಸಿದ್ದ 3ನೇ ಪ್ರಸ್ತಾವನೆಯನ್ನು ರಾಜ್ಯಪಾಲ ಕಲ್ರಾಜ್ ಮಿಶ್ರಾ ತಿರಸ್ಕರಿಸಿದ್ದಾರೆ.

ವಿಧಾನಸಭೆ ಅಧಿವೇಶನ ಕರೆಯುವ ವಿಚಾರದಲ್ಲಿ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಜಟಾಪಟಿ ನಡೆಯುತ್ತಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಜುಲೈ 31ರಿಂದ ವಿಧಾನಸಭೆ ಅಧಿವೇಶನ ಕರೆಯುವಂತೆ ಸಲ್ಲಿಸಿದ್ದ 3ನೇ ಪ್ರಸ್ತಾವನೆಗೂ ರಾಜಭವನ ಒಪ್ಪಿಗೆ ಕೊಟ್ಟಿಲ್ಲ.

ರಾಜಸ್ಥಾನ ಬಿಕ್ಕಟ್ಟು; ಸಂವಿಧಾನ ಮತ್ತು ಪಕ್ಷಾಂತರ ನಿಷೇಧ ಕಾಯ್ದೆರಾಜಸ್ಥಾನ ಬಿಕ್ಕಟ್ಟು; ಸಂವಿಧಾನ ಮತ್ತು ಪಕ್ಷಾಂತರ ನಿಷೇಧ ಕಾಯ್ದೆ

ಜುಲೈ 31ರ ಶುಕ್ರವಾರದಿಂದ ವಿಧಾನಸಭೆ ಅಧಿವೇಶನ ಕರೆಯಬೇಕು. ಕೊರೊನಾ ಪರಿಸ್ಥಿತಿ ಕುರಿತು ಚರ್ಚಿಸಲು ಅಧಿವೇಶನ ಕರೆಯಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಖುದ್ದಾಗಿ ಭೇಟಿ ಮಾಡಿ ಸಹ ಮನವಿ ಸಲ್ಲಿಸಿದ್ದರು.

ರಾಜಸ್ಥಾನ ಬಿಜೆಪಿಗೆ ಸಂಕಷ್ಟ ತಂದ ಬಿಎಸ್‌ಪಿ ವಿಲೀನ! ರಾಜಸ್ಥಾನ ಬಿಜೆಪಿಗೆ ಸಂಕಷ್ಟ ತಂದ ಬಿಎಸ್‌ಪಿ ವಿಲೀನ!

ಒಂದು ಕಡೆ ರಾಜಸ್ಥಾನ ಕಾಂಗ್ರೆಸ್ ಎರಡು ಗುಂಪು ಆಗಿದೆ. ಸಚಿನ್ ಪೈಲೆಟ್ ಮತ್ತು ಅಶೋಕ್ ಗೆಹ್ಲೋಟ್ ನಡುವಿನ ಅಸಮಾಧಾನ ಮುಂದುವರೆದಿದೆ. ಇದರ ನಡುವೆಯೇ ಸರ್ಕಾರ ಮತ್ತು ರಾಜಭವನದ ನಡುವೆ ಜಟಾಪಟಿ ನಡೆಯುತ್ತಿದೆ.

ರಾಜಸ್ಥಾನ ಕಾಂಗ್ರೆಸ್ ಬಿಕ್ಕಟ್ಟಿಗೆ ತಿರುವು; ಸ್ಪೀಕರ್ ಅರ್ಜಿ ವಾಪಸ್ ರಾಜಸ್ಥಾನ ಕಾಂಗ್ರೆಸ್ ಬಿಕ್ಕಟ್ಟಿಗೆ ತಿರುವು; ಸ್ಪೀಕರ್ ಅರ್ಜಿ ವಾಪಸ್

21 ದಿನಗಳ ನೋಟಿಸ್ ನೀಡಬೇಕು

21 ದಿನಗಳ ನೋಟಿಸ್ ನೀಡಬೇಕು

ವಿಧಾನಸಭೆ ಅಧಿವೇಶನ ಕರೆಯಬೇಕು ಎಂದು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕಳಿಸಿದ್ದ ಪ್ರಸ್ತಾವನೆಯನ್ನು ರಾಜ್ಯಪಾಲರು ತಿರಸ್ಕರಿಸಿದ್ದಾರೆ. ಅಧಿವೇಶನ ಕರೆಯಲು 21 ದಿನಗಳ ಮೊದಲು ನೋಟಿಸ್ ನೀಡಬೇಕು ಎಂದು ರಾಜಭವನ ಹೇಳಿದೆ. ಮಂಗಳವಾರ ಅಶೋಕ್ ಗೆಹ್ಲೋಟ್ ಪ್ರಸ್ತಾವನೆ ಕಳಿಸಿ ಶುಕ್ರವಾರದಿಂದ ಅಧಿವೇಶನ ಕರೆಯಬೇಕು ಎಂದು ಮನವಿ ಮಾಡಿದ್ದರು.

ಹಿಂದೆಯೂ ಮನವಿ ತಿರಸ್ಕರಿಸಿದ್ದರು

ಹಿಂದೆಯೂ ಮನವಿ ತಿರಸ್ಕರಿಸಿದ್ದರು

ಭಾನುವಾರ ವಿಧಾನಸಭೆ ಅಧಿವೇಶನ ಕರೆಯುವಂತೆ ಅಶೋಕ್ ಗೆಹ್ಲೋಟ್ ಸಲ್ಲಿಸಿದ್ದ ಮನವಿಯನ್ನು ರಾಜ್ಯಪಾಲ ಕಲ್ರಾಜ್ ಮಿಶ್ರಾ ತಿರಸ್ಕರಿಸಿದ್ದರು. ಕೋವಿಡ್ - 19 ಸಂದರ್ಭದಲ್ಲಿ ವಿಧಾನಸಭೆ ಅಧಿವೇಶನ ನಡೆಸಿದರೆ ಸೋಂಕು ಹರಡದಂತೆ ತಡೆಯಲು ಯಾವ ಕ್ರಮ ಕೈಗೊಂಡಿದ್ದೀರಿ? ಎಂದು ಪ್ರಶ್ನೆ ಮಾಡಿದ್ದರು.

ರಾಜ್ಯಪಾಲರನ್ನು ಭೇಟಿಯಾಗಿದ್ದರು

ರಾಜ್ಯಪಾಲರನ್ನು ಭೇಟಿಯಾಗಿದ್ದರು

ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕಳೆದ ಶುಕ್ರವಾರ ರಾಜ್ಯಪಾಲರನ್ನು ಖುದ್ದಾಗಿ ಭೇಟಿ ಮಾಡಿ ಅಧಿವೇಶನ ಕರೆಯಬೇಕು ಎಂದು ಮನವಿ ಮಾಡಿದ್ದರು. ಆದರೆ, ಅಜೆಂಡಾಗಳು ಸರಿಯಾಗಿಲ್ಲ ಎಂಬ ಕಾರಣಕ್ಕೆ ಆ ಪ್ರಸ್ತಾವನೆಯನ್ನು ತಿರಸ್ಕಾರ ಮಾಡಲಾಗಿತ್ತು.

ರಾಜ್ಯಪಾಲರು ಒತ್ತಡದಲ್ಲಿದ್ದಾರೆ

ರಾಜ್ಯಪಾಲರು ಒತ್ತಡದಲ್ಲಿದ್ದಾರೆ

ಶುಕ್ರವಾರ ರಾಜ್ಯಪಾಲರ ಭೇಟಿ ಬಳಿಕ ಮಾತನಾಡಿದ್ದ ಅಶೋಕ್ ಗೆಹ್ಲೋಟ್, "ಕೆಲವು ವಿಚಾರದಲ್ಲಿ ರಾಜ್ಯಪಾಲರು ಒತ್ತಡದಲ್ಲಿದ್ದಾರೆ. ಆದ್ದರಿಂದ, ವಿಧಾನಸಭೆ ಅಧಿವೇಶವನ್ನು ಕರೆಯುತ್ತಿಲ್ಲ" ಎಂದು ಹೇಳಿಕೆ ನೀಡಿದ್ದರು.

English summary
Kalraj Mishra governor of Rajasthan rejected CM Ashok Gehlot's request for an assembly session from July 31. For the third time raj bhavan rejected request and said that 21 day notice is necessary to call an assembly session.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X