ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಸ್ಥಾನದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

|
Google Oneindia Kannada News

Recommended Video

Rajastan Assembly Election : ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್ | Oneindia Kannada

ಜೈಪುರ, ನವೆಂಬರ್ 16: ಡಿಸೆಂಬರ್ ನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಗುರುವಾರ ರಾತ್ರಿ ಬಿಡುಗಡೆಯಾಗಿದೆ.

ಒಟ್ಟು 200 ಕ್ಷೇತ್ರಗಳಲ್ಲಿ 152 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ.

ಅಶೊಕ್ ಗೆಹ್ಲೋಟ್ ಹಠದ ಮುಂದೆ ಸೋತು ನಿಂತ ರಾಹುಲ್ ಗಾಂಧಿ!ಅಶೊಕ್ ಗೆಹ್ಲೋಟ್ ಹಠದ ಮುಂದೆ ಸೋತು ನಿಂತ ರಾಹುಲ್ ಗಾಂಧಿ!

Rajasthan assembly polls 2018: Congress releases first of 152 candidates

ಪಕ್ಷದ ಕೇಂದ್ರ ಚುನಾವಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಮುಖುಲ್ ವಾಸ್ನಿಕ್ ಅವರು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡದಿರು.

ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ಸರ್ದಾರ್ ಪುರ ಕ್ಷೇತ್ರದಿಂದ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಸಚಿನ್ ಪೈಲೆಟ್ ಅವರಿಗೆ ಟಾಂಕ್ ಕ್ಷೇತ್ರದಿಂದ ಟಿಕೆಟ್ ದೊರೆತಿದೆ.

ಅಶೊಕ್ ಗೆಹ್ಲೋಟ್ ಹಠದ ಮುಂದೆ ಸೋತು ನಿಂತ ರಾಹುಲ್ ಗಾಂಧಿ!ಅಶೊಕ್ ಗೆಹ್ಲೋಟ್ ಹಠದ ಮುಂದೆ ಸೋತು ನಿಂತ ರಾಹುಲ್ ಗಾಂಧಿ!

ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲೆಟ್ ಅವರಿಗೆ ಈ ಬಾರಿ ಪಕ್ಷ ಟಿಕೆಟ್ ನೀಡುವುದಿಲ್ಲ, ಅವರು ಪಕ್ಷದ ಸಂಘಟನೆಯ ಬಗ್ಗೆ ಗಮನ ಹರಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಅಶೋಕ್ ಗೆಹ್ಲೋಟ್ ಅವರು ಸ್ಪರ್ಧೆಯಿಂದ ದೂರವುಳಿಯಲು ಒಪ್ಪದ ಕಾರಣಕ್ಕೆ ಇಬ್ಬರು ನಾಯಕರಿಗೂ ಟಿಕೆಟ್ ನೀಡಲಾಗಿದೆ. ತಾನು ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದಾಗಿ ಅಶೋಕ್ ಗೆಹ್ಲೋಟ್ ಅವರೇ ಇತ್ತೀಚೆಗೆ ದೆಹಲಿಯಲ್ಲಿ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಸಚಿನ್, ಗೆಹ್ಲೋಟ್ ಇಬ್ಬರೂ ರಾಜಸ್ತಾನ ವಿಧಾನಸಭಾ ಕಣದಲ್ಲಿ; 'ಕೈ' ಚತುರ ನಡೆಸಚಿನ್, ಗೆಹ್ಲೋಟ್ ಇಬ್ಬರೂ ರಾಜಸ್ತಾನ ವಿಧಾನಸಭಾ ಕಣದಲ್ಲಿ; 'ಕೈ' ಚತುರ ನಡೆ

ರಾಜಸ್ಥಾನದಲ್ಲಿ ಡಿಸೆಂಬರ್ 7 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 11 ರಂದು ಫಲಿತಾಂಶ ಹೊರಬೀಳಲಿದೆ. 200 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ರಾಜಸ್ಥಾನದಲ್ಲಿ ಪಕ್ಷವೊಂದು ಬಹುಮತ ಪಡೆಯಲು ಬೇಕಾದ ಮ್ಯಾಜಿಕ್ ನಂಬರ್ 101. ಪ್ರಸ್ತುತ ವಸುಂಧರಾ ರಾಜೆ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ.

English summary
The Congress has released its first list for the upcoming Rajasthan Assembly polls. The list of 152 candidates was out late on Thursday night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X