ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಸ್ಥಾನದಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲು ಹೊಸ ಕಾಯ್ದೆ

|
Google Oneindia Kannada News

ಜೈಪುರ್, ನವೆಂಬರ್.02: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆ ಸಾರ್ವಜನಿಕ ಪ್ರದೇಶಗಳಲ್ಲಿ ಮುಖಕ್ಕೆ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ರಾಜಸ್ಥಾನ ವಿಧಾನಸಭಾ ಕಲಾಪದಲ್ಲಿ ಈ ಸಂಬಂಧ ಮಂಡಿಸಿದ ಮಸೂದೆಯನ್ನು ಅಂಗೀಕಾರಗೊಳಿಸಲಾಗಿದೆ.

ರಾಜಸ್ಥಾನವು ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿ ಕಾಯ್ದೆ ಜಾರಿಗೆ ತಂದ ಭಾರತದ ಮೊದಲ ರಾಜ್ಯವಾಗಿದೆ. ಕಳೆದ ಅಕ್ಟೋಬರ್.31ರಂದೇ ವಿಧಾನಸಭೆಯಲ್ಲಿ "ರಾಜಸ್ಥಾನ ಸಾಂಕ್ರಾಮಿಕ ಪಿಡುಗು (ತಿದ್ದುಪಡಿ) ಕಾಯ್ದೆ 2020"ರ ಬಗ್ಗೆ ಸಂಸದೀಯ ವ್ಯವಹಾರಗಳ ಸಚಿವೆ ಶಾಂತಿ ಧಾರಿವಾಲಾ ಪ್ರಸ್ತಾಪಿಸಿದ್ದರು.

ಸಂತಸದ ಸುದ್ದಿ: ಕರ್ನಾಟಕದಲ್ಲಿ ಕೇವಲ 2576 ಕೊರೊನಾ ಸೋಂಕಿತರು ಪತ್ತೆ ಸಂತಸದ ಸುದ್ದಿ: ಕರ್ನಾಟಕದಲ್ಲಿ ಕೇವಲ 2576 ಕೊರೊನಾ ಸೋಂಕಿತರು ಪತ್ತೆ

ರಾಜಸ್ಥಾನ ಸಾಂಕ್ರಾಮಿಕ ವಿಪತ್ತು ಕಾಯ್ದೆ 2020ರ ಅಡಿಯಲ್ಲಿ ನಾಲ್ಕು ಅಂಶಗಳನ್ನು ಸೇರಿಸಲಾಗಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಮುಖ ಮತ್ತು ಮೂಗು ಮುಚ್ಚಿಕೊಳ್ಳುವಂತೆ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

Rajasthan Assembly Passes Bill To Make Wearing Face Mask Mandatory At Public Places

ಕೊರೊನಾವೈರಸ್ ಮಾರ್ಗಸೂಚಿ ಪಾಲನೆಗೆ ಮನವಿ:

ರಾಜಸ್ಥಾನದಲ್ಲಿ ಕೊರೊನಾವೈರಸ್ ಸೋಂಕನ್ನು ನಿಯಂತ್ರಿಸುವ ದೃಷ್ಟಿಯಿಂದ ಮಾರ್ಗಸೂಚಿಗಳನ್ನು ಪಾಲಿಸುವಂತೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮನವಿ ಮಾಡಿಕೊಂಡಿದ್ದಾರೆ. ಮುಖಕ್ಕೆ ಮಾಸ್ಕ್ ಧರಿಸುವುದರ ಜೊತೆಗೆ ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಮತ್ತು ಆಗಾಗ ಕೈಗಳನ್ನು ಶುದ್ಧವಾಗಿ ತೊಳೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ.

ರಾಜಸ್ಥಾನದಲ್ಲಿ ದೀಪಾವಳಿ ಪಟಾಕಿ ಮಾರಾಟಕ್ಕೆ ನಿರ್ಬಂಧ:

ಕೊರೊನಾವೈರಸ್ ಆತಂಕದ ಹಿನ್ನೆಲೆ ರಾಜಸ್ಥಾನದಲ್ಲಿ ದೀಪಾವಳಿ ಆಚರಣೆ ಸಂದರ್ಭದಲ್ಲಿ ಪಟಾಕಿ ಮಾರಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. ರಾಜಸ್ಥಾನದಲ್ಲಿ ಕೊವಿಡ್-19 ರೋಗವನ್ನು ನಿಯಂತ್ರಿಸುವ ಉದ್ದೇಶದಿಂದ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ. ರಾಜ್ಯದಲ್ಲಿನ ಸದ್ಯದ ಪರಿಸ್ಥಿತಿಯನ್ನು ಪರಿಶೀಲಿಸಿದಾಗ ಈ ಸವಾಲಿನ ಸಂದರ್ಭಗಳಲ್ಲಿ ಜನರ ಪ್ರಾಣವನ್ನು ರಕ್ಷಿಸಿವುದು ಸರ್ಕಾರಕ್ಕೆ ಮುಖ್ಯವಾಗುತ್ತದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

English summary
Rajasthan Assembly Passes Bill To Make Wearing Face Mask Mandatory At Public Places.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X