ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿನ್ ಪೈಲಟ್ ಲೆಕ್ಕಾಚಾರದಂತೆ ನಡೆದರೆ, ಕಾಂಗ್ರೆಸ್ ಸರಕಾರ ಪತನ ನಿಶ್ಚಿತ: ನಂಬರ್ ಗೇಂ ಹೀಗಿದೆ

|
Google Oneindia Kannada News

ಜೈಪುರ, ಜುಲೈ 14: ಉಪಮುಖ್ಯಮಂತ್ರಿ ಮತ್ತು ರಾಜ್ಯಾಧ್ಯಕ್ಷ ಹುದ್ದೆಯಿಂದ ಸಚಿನ್ ಪೈಲಟ್ ವಜಾಗೊಂಡ ನಂತರ, ರಾಜಸ್ಥಾನ ಸರಕಾರದ ಬಿಕ್ಕಟ್ಟು ನಿರ್ಣಾಯಕ ಹಂತ ತಲುಪಿದೆ.

Recommended Video

Yedyurappa Govt Negligent | Oneindia Kannada

ಸದ್ಯದ ಮಟ್ಟಿಗೆ ಸಿಎಂ ಅಶೋಕ್ ಗೆಹ್ಲೋಟ್ ಮೇಲುಗೈ ಸಾಧಿಸಿದಂತೆ ಕಂಡರೂ, ರಾಜ್ಯದಲ್ಲಿ ಅಷ್ಟೇ ಪ್ರಭಾವಿಯಾಗಿರುವ ಸಚಿನ್ ಪೈಲಟ್, ಹಣೆಯುವ ರಾಜಕೀಯ ತಂತ್ರದ ಮೇಲೆ, ಗೆಹ್ಲೋಟ್ ಸರಕಾರದ ಭವಿಷ್ಯ ನಿಂತಿದೆ.

ಸಚಿನ್ ಪೈಲಟ್ ವಜಾಗೊಂಡ ಬೆನ್ನಲ್ಲೇ ಬಂಡಾಯ ಶಾಸಕರ ಬಹಿರಂಗ ಸವಾಲುಸಚಿನ್ ಪೈಲಟ್ ವಜಾಗೊಂಡ ಬೆನ್ನಲ್ಲೇ ಬಂಡಾಯ ಶಾಸಕರ ಬಹಿರಂಗ ಸವಾಲು

ಎಲ್ಲಾ ಭಿನ್ನಮತವನ್ನು ಮರೆತು ಪಕ್ಷದಲ್ಲಿ ಸಕ್ರಿಯವಾಗಿರಲು ಸಚಿನ್ ಪೈಲಟ್ ಮತ್ತು ಅವರ ಬಣಕ್ಕೆ ಎರಡನೇ ಚಾನ್ಸ್ ನೀಡಲೆಂದೇ, ಎರಡು ಬಾರಿ ಸಿಎಲ್ಪಿ ಸಭೆಯನ್ನು ಕರೆಯಲಾಗಿತ್ತು. ಇದಕ್ಕೂ ಜಗ್ಗದಿದ್ದಾಗ, ಕಾಂಗ್ರೆಸ್ ನಿರ್ದಾಕ್ಷಿಣ್ಯ ಕ್ರಮವನ್ನು ತೆಗೆದುಕೊಂಡಿದೆ.

ಈ ಶಿಸ್ತುಕ್ರಮ ಸಚಿನ್ ಪೈಲಟ್ ಅವರ ಬೆಂಬಲಿಗರಿಗೆ ಬಿಸಿಮುಟ್ಟುತ್ತೋ ಅಥವಾ ಬಂಡಾಯದ ಕಾವು ಇನ್ನಷ್ಟು ಹೆಚ್ಚಾಗುತ್ತದೆಯೇ ಎಂದು ನೋಡಬೇಕಿದೆ. ಈ ಮಧ್ಯೆ, ಸಚಿನ್ ಪೈಲಟ್ ಪ್ರಕಾರ ಹೇಳುವ ಪ್ರಕಾರ, ಅವರ ಜೊತೆಗಿರುವ ಶಾಸಕರ ಸಂಖ್ಯೆ ಸರಿಯಾಗಿದ್ದೇ ಆದಲ್ಲಿ, ರಾಜಸ್ಥಾನದಲ್ಲಿ ಕಾಂಗ್ರೆಸ್ ಸರಕಾರ ಪತನ ನಿಶ್ಚಿತ. ಲೆಕ್ಕಾಚಾರ ಹೀಗಿದೆ

ರಾಜಸ್ಥಾನ: ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವದಿಂದ ಸಚಿನ್ ಪೈಲಟ್ ಉಚ್ಚಾಟನೆ?ರಾಜಸ್ಥಾನ: ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವದಿಂದ ಸಚಿನ್ ಪೈಲಟ್ ಉಚ್ಚಾಟನೆ?

ವಿಶ್ವೇಂದ್ರ ಸಿಂಗ್, ರಮೇಶ್ ಮೀನಾ

ವಿಶ್ವೇಂದ್ರ ಸಿಂಗ್, ರಮೇಶ್ ಮೀನಾ

ಸಚಿನ್ ಪೈಲಟ್ ಜೊತೆಗೆ ಅವರ ಬೆಂಬಲಿಗ ಕ್ಯಾಬಿನೆಟ್ ದರ್ಜೆಯ ಸಚಿವರಾಗಿರುವ ವಿಶ್ವೇಂದ್ರ ಸಿಂಗ್, ರಮೇಶ್ ಮೀನಾ ಅವರನ್ನು ಕೂಡಾ ವಜಾ ಮಾಡಲಾಗಿದೆ. ಪೈಲಟ್ ಅವರ ಮುಂದಿನ ನಡೆ ಏನು ಎನ್ನುವುದು ಸದ್ಯಕ್ಕೆ ಬಹಿರಂಗವಾಗಿಲ್ಲ. ಬಿಜೆಪಿ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗುತ್ತಾ ಎನ್ನುವುದೂ ಕುತೂಹಲಕ್ಕೀಡುಮಾಡಿದೆ. (ಚಿತ್ರದಲ್ಲಿ ರಮೇಶ್ ಮೀನಾ)

ರಾಜಸ್ಥಾನ ಅಸೆಂಬ್ಲಿ

ರಾಜಸ್ಥಾನ ಅಸೆಂಬ್ಲಿ

ಇನ್ನೂರು ಸಂಖ್ಯಾಬಲವನ್ನು ಹೊಂದಿರುವ ರಾಜಸ್ಥಾನ ಅಸೆಂಬ್ಲಿಯಲ್ಲಿ ಕಾಂಗ್ರೆಸ್ ಶಾಸಕರ ಸಂಖ್ಯೆ 100. ಇದರಲ್ಲಿ ಸಚಿನ್ ಪೈಲಟ್ ಬಣದ ಸಂಖ್ಯೆ ಸೇರಿದಂತೆ ಒಟ್ಟು ಬಲ 107. ಇನ್ನು, ಬಿಟಿಪಿ, ಸಿಪಿಐ(ಎಂ), ಆರ್ ಎಲ್ಡಿ, ಪಕ್ಷೇತರರು ಸೇರಿದಂತೆ ಎಲ್ಲವೂ ಸೇರಿದರೆ ಈ ಸಂಖ್ಯೆ 124.

ಗೆಹ್ಲೋಟ್ ಸರಕಾರಕ್ಕೆ ಕೊಟ್ಟ ಬೆಂಬಲ ವಾಪಸ್

ಗೆಹ್ಲೋಟ್ ಸರಕಾರಕ್ಕೆ ಕೊಟ್ಟ ಬೆಂಬಲ ವಾಪಸ್

ಇದರಲ್ಲಿ ಬಿಟಿಪಿ(ಭಾರತೀಯ ಟ್ರೈಬಲ್ ಪಾರ್ಟಿ) ಎರಡು ಶಾಸಕರನ್ನು ಹೊಂದಿದ್ದು, ಈಗಾಗಲೇ, ಗೆಹ್ಲೋಟ್ ಸರಕಾರಕ್ಕೆ ಕೊಟ್ಟ ಬೆಂಬಲ ವಾಪಸ್ ಪಡೆಯುವುದಾಗಿ ಹೇಳಿದೆ. ಹಾಗಾಗಿ, ಸರಕಾರಕ್ಕೆ ಅಧಿಕೃತವಾಗಿರುವ ಬಲ 122. ಸರಳ ಬಹುಮತಕ್ಕೆ ಬೇಕಾಗಿರುವ ಸಂಖ್ಯೆ 101. ಮೇಲ್ನೋಟಕ್ಕೆ ಇದು ಇದೆ, ಆದರೆ...

ಕಾಂಗ್ರೆಸ್ ಸರಕಾರ ಪತನ ನಿಶ್ಚಿತ: ಲೆಕ್ಕಾಚಾರ ಇಲ್ಲಿದೆ

ಕಾಂಗ್ರೆಸ್ ಸರಕಾರ ಪತನ ನಿಶ್ಚಿತ: ಲೆಕ್ಕಾಚಾರ ಇಲ್ಲಿದೆ

ಸಚಿನ್ ಪೈಲಟ್ ತನಗೆ ಮೂವತ್ತು ಶಾಸಕರ ಬೆಂಬಲವಿದೆ ಎಂದು ಹೇಳಿಕೊಂಡಿದ್ದಾರೆ. ಅದೆಲ್ಲಾ ಸುಳ್ಳು ಎಂದು ಗೆಹ್ಲೋಟ್ ಬೆಂಬಲಿಗರು ಹೇಳಿದ್ದಾರೆ. ಪೈಲಟ್ ಹೇಳಿದ್ದೇ ನಿಜವಾದಲ್ಲಿ ಗೆಹ್ಲೋಟ್ ಬಣದ ಸಂಖ್ಯೆ 92ಕ್ಕೆ ಇಳಿಯುತ್ತದೆ. ಬಿಜೆಪಿಗಿರುವ ಸಂಖ್ಯಾಬಲ 76. ಪೈಲಟ್ ಬಣದ 30 ಶಾಸಕರು ಬಿಜೆಪಿ ಜೊತೆ ಕೈಜೋಡಿಸಿದರೆ ಅದು 106ಕ್ಕೆ ಏರುತ್ತದೆ. ಈ ಎಲ್ಲಾ ಲೆಕ್ಕಾಚಾರ ನಡೆದಿದ್ದೇ ಆದಲ್ಲಿ, ಗೆಹ್ಲೋಟ್ ಸರಕಾರ ಪತನ ನಿಶ್ಚಿತ.

English summary
Rajasthan Assembly Party Strength: Numbers Sachin Pilot Gropu Has, He Can Topple The Ashok Gehlot Government,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X