ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆರಿಗೆ ವೇಳೆ ಮಗುವನ್ನು ಭಾಗ ಮಾಡಿದ ಪ್ರಕರಣ: ವ್ಯಕ್ತಿ ಬಂಧನ

|
Google Oneindia Kannada News

ರಾಮಗರ್(ರಾಜಸ್ಥಾನ), ಜನವರಿ 12: ನರ್ಸ್ ವೊಬ್ಬರ ಅಚಾತುರ್ಯದಿಂದ ಹೆರಿಗೆಯ ಸಮಯದಲ್ಲಿ ಮಗುವಿನ ದೇಹ ತುಂಡಾಗಿ, ತಲೆ ತಾಯಿಯ ಗರ್ಭದಲ್ಲೇ ಉಳಿದ ಹೃದಯವಿದ್ರಾವಕ ಘಟನೆಯ ನಂತರ ವ್ಯಕ್ತಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಹೆರಿಗೆ ಸಮಯದಲ್ಲಿ ಗರ್ಭದಲ್ಲೇ ಉಳಿದ ಶಿಶುವಿನ ತಲೆ: ನರ್ಸ್ ಅಚಾತುರ್ಯ!ಹೆರಿಗೆ ಸಮಯದಲ್ಲಿ ಗರ್ಭದಲ್ಲೇ ಉಳಿದ ಶಿಶುವಿನ ತಲೆ: ನರ್ಸ್ ಅಚಾತುರ್ಯ!

ಅಮೃತ್ ಲಾಲ್ ಎಂಬ ನರ್ಸ ನನ್ನು ಪೊಲೀಸರು ಬಂಧಿದದ್ದು, ಈ ಘಟನೆಯನ್ನು ಮುಚ್ಚಿಹಾಕಲು ಪ್ರಯತ್ನಿಸಿದ ಝುಜಾರ್ ಸಿಂಗ್ ಎಂಬ ನರ್ಸ್ ನಾಪತ್ತೆಯಾಗಿದ್ದಾನೆ. ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ರಸ್ತೆಯಲ್ಲೇ ಹೆರಿಗೆ: ವಿಡಿಯೋವಾದರೂ ಅಧಿಕಾರಿಗಳ ಮನಕಲಕಲಿ! ರಸ್ತೆಯಲ್ಲೇ ಹೆರಿಗೆ: ವಿಡಿಯೋವಾದರೂ ಅಧಿಕಾರಿಗಳ ಮನಕಲಕಲಿ!

ಈ ಘಟನೆ ಜನವರಿ 6 ರಂದೇ ರಾಜಸ್ಥಾನದ ರಾಮಗರ್ ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿತ್ತು. ಗರ್ಭಿಣಿಯೊಬ್ಬರು ಹೆರಿಗೆಗೆಂದು ರಾಮಗರದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದರು. ಜನವರಿ 6 ರಂದು ಹೆರಿಗೆಯ ಸಮಯದಲ್ಲಿ ಮಗುವನ್ನು ತಾಯಿಯ ಗರ್ಭದಿಂದ ಹೊರತೆಗೆಯುವಾಗ ಪುರುಷ ನರ್ಸ್ ವೊಬ್ಬರು ತೀರಾ ಒರಟಾಗಿ ಮಗುವಿನ ದೇಹವನ್ನು ಎಳೆದ ಪರಿಣಾಮ ಮಗುವಿನ ತಲೆ ಮತ್ತು ಕತ್ತಿನ ಕೆಳಭಾಗಗಳು ಬೇರೆ ಬೇರೆಯಾಗಿ, ತಲೆ ತಾಯಿಯ ಗರ್ಭದಲ್ಲೇ ಉಳಿದುಕೊಂಡಿತ್ತು.

Rajasthan: After Babys Body Split Into 2 During Delivery Nurse Arrested

ನರ್ಸ್ ಮಾಡಿದ ಈ ಅಚಾತುರ್ಯ ಮತ್ತು ನಿರ್ಲಕ್ಷ್ಯದಿಂದಾಗಿ ಆಸ್ಪತ್ರೆ ವಿರುದ್ಧ ರಾಜ್ಯ ಮಾನವ ಹಕ್ಕು ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ.

ತನ್ನ ಹೆರಿಗೆಗೆ ಸೈಕಲ್ ಏರಿ ಆಸ್ಪತ್ರೆಗೆ ತೆರಳಿದ ಸಚಿವೆಯ ಸಾಹಸ ನೋಡಿ!ತನ್ನ ಹೆರಿಗೆಗೆ ಸೈಕಲ್ ಏರಿ ಆಸ್ಪತ್ರೆಗೆ ತೆರಳಿದ ಸಚಿವೆಯ ಸಾಹಸ ನೋಡಿ!

ಘಟನೆಯ ನಂತರ ಮಹಿಳೆ ಮತ್ತು ಆಕೆಯ ಕುಟುಂಬಸ್ಥರ ಬಳಿ ಬಂದು ಹೆಚ್ಚಿನ ಚಿಕಿತ್ಸೆಗೆಂದು ಜೈಶಲ್ಮೇರ್ ಗೆ ತೆರಳುವಂತೆ ಈ ನರ್ಸ್ ಹೇಳಿದ್ದಾರೆ. ಹೆರಿಗೆ ತಜ್ಞರ ಬಳಿ ಹೋಗಿ ಹೆರಿಗೆಯನ್ನು ಮುಗಿಸಿದ್ದೇವೆ ಎಂದು ಸಹ ಹೇಳಿಕೊಂಡಿದ್ದಾರೆ.

ಈ ಹೇಯಕೃತ್ಯಕ್ಕೆ ನರ್ಸ್ ಗೆ ಕಠಿಣ ಶಿಕ್ಷೆಯಾಗಬೇಕೆಂದು ಮಹಿಳೆಯ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

English summary
The male nurse Amrit Lal who botched the delivery in Rajasthan by splitting the baby's body into two was arrested on Friday evening. The other nurse Jhujhaar Singh who helped in the cover-up of the crime is on the run. Murder charges have been added to the criminal complaint against the two nurses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X