ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಸ್ಥಾನದ ಲೋಕಲ್ ವಾರ್ ನಲ್ಲಿ ಕೇಕೆ ಹಾಕಿದ ಕಾಂಗ್ರೆಸ್

|
Google Oneindia Kannada News

ಜೈಪುರ್, ನವೆಂಬರ್.19: ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣಕ್ಕೆ ಮುಂದಾಗಿರುವ ಕೇಸರಿ ಪಡೆಗೆ ಬಿಗ್ ಶಾಕ್ ಹೊಡೆದಿದೆ. ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಮುಂದಾಗಿದ್ದ ಬಿಜೆಪಿಗೆ ಮೂರು ದಶಕಗಳ ದೋಸ್ತಿ ಶಿವಸೇನೆ ಕೈ ಕೊಟ್ಟಿದೆ. ಅಲ್ಲಿ ಅಧಿಕಾರದಿಂದ ದೂರ ಉಳಿದಿರುವ ಬಿಜೆಪಿಗೆ ಲೋಕಲ್ ವಾರ್ ನಲ್ಲೂ ಭಾರಿ ಹಿನ್ನೆಡೆಯಾಗಿದೆ.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿದರೂ ಅಧಿಕಾರ ಗದ್ದುಗೆ ಏರಲು ಆಗಲಿಲ್ಲ. ಈ ಶಾಕ್ ನಿಂದ ಹೊರ ಬರುವುದರಲ್ಲೇ ಕಮಲ ಪಾಳಯಕ್ಕೆ ಲೋಕಲ್ ರಿಸಲ್ಟ್ ಪೆಟ್ಟು ಕೊಟ್ಟಿದೆ. ಆದರೆ, ಇದು ಮಹಾರಾಷ್ಟ್ರದ ಕಥೆಯಲ್ಲ. ಬದಲಿಗೆ ರಾಜಸ್ಥಾನದಲ್ಲಿ ನಡೆದಿರುವ ಸ್ಥಳೀಯ ಚುನಾವಣೆಯ ಫಲಿತಾಂಶ.

ಕಳೆದ ಲೋಕಸಭಾ ಚುನಾವಣೆ ವೇಳೆ ರಾಜಸ್ಥಾನದಲ್ಲಿ ಎಲ್ಲ 25 ಸ್ಥಾನಗಳಲ್ಲೂ ಜಯಭೇರಿ ಬಾರಿಸಿದ್ದ ಬಿಜೆಪಿ, ಕ್ಲೀನ್ ಸ್ವೀಪ್ ಮಾಡಿತ್ತು. ಆದರೆ, ನವೆಂಬರ್.16ರಂದು ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಗೆ ಕಾಂಗ್ರೆಸ್ ತಿರುಗೇಟು ಕೊಟ್ಟಿದೆ.

Rajastan municipal Election-2019: Congress Dominate Urban Bodies

'ಕೇಸರಿ'ಗಿಂತಲೂ 'ಕೈ' ಮೇಲು

ರಾಜಸ್ಥಾನದ 24 ಜಿಲ್ಲೆಗಳ 3 ನಗರಸಭೆ, 18 ನಗರ ಪರಿಷತ್, 28 ನಗರ ಪಾಲಿಕೆಗಳಿಗೆ ಚುನಾವಣೆ ನಡೆದಿತ್ತು. ನವೆಂಬರ್.16ರ ಶನಿವಾರ ಶೇ.71.59ರಷ್ಟು ಮತದಾನವಾಗಿತ್ತು. 49 ಸ್ಥಳೀಯ ಸಂಸ್ಥೆಗಳ ಒಟ್ಟು 2,105 ವಾರ್ಡ್ ಗಳಿಗೆ ಚುನಾವಣೆ ನಡೆದಿದ್ದು, ಈ ಪೈಕಿ ಬಿಜೆಪಿ 737 ವಾರ್ಡ್ ಗಳಲ್ಲಿ ಗೆಲುವು ದಾಖಲಿಸಿದರೆ, ಕಾಂಗ್ರೆಸ್ 961 ವಾರ್ಡ್ ಗಳಲ್ಲಿ ಜಯಭೇರಿ ಬಾರಿಸಿದೆ. ಉಳಿದಂತೆ 386 ಕ್ಷೇತ್ರಗಳು ಪಕ್ಷೇತರ ಅಭ್ಯರ್ಥಿಗಳ ಪಾಲಾಗಿದೆ.

English summary
Rajastan municipal Election-2019: The Congress Won nearly Half of the 2,105 Wards.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X