ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ನಾಗರಿಕರಿಗೆ 48 ಗಂಟೆಗಳ ಗಡುವು ಕೊಟ್ಟ ಜಿಲ್ಲಾಡಳಿತ!

|
Google Oneindia Kannada News

ಬಿಕನೇರ್, ಫೆಬ್ರವರಿ 19: ಬಿಕನೇರ್‌ನ ಜಿಲ್ಲಾ ಗಡಿಯೊಳಗಿರುವ ಎಲ್ಲಾ ಪಾಕ್ ನಾಗರಿಕರು ಮುಂದಿನ 48ಗಂಟೆಯೊಳಗೆ ಜಿಲ್ಲೆ ಬಿಟ್ಟು ತೆರಳುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಕುಮಾರ್ ಪಾಲ್ ಗೌತಮ್ ಆದೇಶಿಸಿದ್ದಾರೆ.

ಐಪಿಸಿ ಸೆಕ್ಷನ್ 144ರ ಅಡಿಯಲ್ಲಿ ಆದೇಶ ಹೊರಡಿಸಲಾಗಿದೆ. ಬಿಕನೇರ್ ಪಾಕಿಸ್ತಾನದ ಗಡಿ ಭಾಗದಲ್ಲಿದೆ. ಹೀಗಾಗಿ ಪಾಕ್ ನಾಗರಿಕರು ಇಲ್ಲಿದ್ದರೆ ಆಂತರಿಕ ಭದ್ರತೆಗೆ ಅಪಾಯ ಎದುರಾಗುವ ಸಾಧ್ಯತೆಗಳಿವೆ. ಹೀಗಾಗಿ ನಿಷೇಧ ಹೇರಲಾಗುತ್ತಿದೆ ಎಂದು ತಿಳಿಸಿದ್ದಾರೆ.

ನಾವೇ ದಾಳಿ ಮಾಡಿದ್ದು ಅನ್ನೋದಕ್ಕೆ ಸಾಕ್ಷ್ಯ ಕೊಡಿ ಎಂದ ಪಾಕ್! ನಾವೇ ದಾಳಿ ಮಾಡಿದ್ದು ಅನ್ನೋದಕ್ಕೆ ಸಾಕ್ಷ್ಯ ಕೊಡಿ ಎಂದ ಪಾಕ್!

ಆದೇಶದನ್ವಯ ಬಿಕನೇರ್ ನಲ್ಲಿರುವ ಯಾವುದೇ ಧರ್ಮಶಾಲೆ, ಹೋಟೆಲ್ ಹಾಗೂ ಆಸ್ಪತ್ರೆಗಳಲ್ಲಿರುವ ಪಾಕ್ ನಾಗರಿಕರಿಗೂ ಈ ನಿಷೇಧ ಅನ್ವಯಿಸುತ್ತದೆ. ಬಿಕನೇರ್ ನ ಭಾರತೀಯರಿಗೂ ಕೆಲ ನಿರ್ಬಂಧಗಳನ್ನು ಹೇರಲಾಗಿದ್ದು, ಇದರ ಅನ್ವಯ ಇಲ್ಲಿನ ಯಾವೊಬ್ಬ ಭಾರತೀಯ ಪ್ರಜೆಯೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪಾಕ್ ನಾಗರಿಕರೊಂದಿಗೆ ವ್ಯಾಪಾರ ಸಂಬಂಧ ಹಾಗೂ ಹಣಕಾಸು ವ್ವಹಾರ ಇಟ್ಟುಕೊಳ್ಳದಂತೆ ಆದೇಶಿಸಲಾಗಿದೆ.

ಪುಲ್ವಾಮಾ ದಾಳಿ ಬಳಿಕ Paytm ಗೂ ಶುರುವಾಯ್ತು ಸಂಕಷ್ಟ ಪುಲ್ವಾಮಾ ದಾಳಿ ಬಳಿಕ Paytm ಗೂ ಶುರುವಾಯ್ತು ಸಂಕಷ್ಟ

ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಫೆ. 14 ರಂದು ಭಾರತೀಯ ಸೇನೆಯ CRPF ಯೋಧರ ಮೇಲಿನ ದಾಳಿಯ ಬಳಿಕ ಬಿಕನೇರ್ ನಲ್ಲಿ ಪಾಕ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಈ ಆದೇಶ ನೀಡಿದ್ದಾರೆ.

Pulwama Attack: DM Orders Pak Citizens to Leave Bikaner in 48 hours

ಬಿಕನೇರ್ ನಿವಾಸಿಗರಿಗೆ ಸೈನ್ಯದ ಕುರಿತಾಗಿ ಅನಾಮಿಕರೊಂದಿಗೆ ಮಾತನಾಡದಂತೆಯೂ ಸೂಚಿಸಲಾಗಿದ್ದು, ಪಾಕ್ ನೋಂದಾಯಿತ ಸಿಮ್ ಗಳನ್ನು ಬಳಸದಂತೆಯೂ ಎಚ್ಚರಿಕೆ ನೀಡಲಾಗಿದೆ.

English summary
In the aftermath of the Pulwama terror attack that claimed the lives of 40 CRPF personnel on 14 February, Pakistani nationals living in Rajasthan’s Bikaner have been asked to leave the district within 48 hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X