• search
  • Live TV
ಜೈಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗುಂಪು ಹತ್ಯೆಯಲ್ಲಿ ಬಲಿಯಾದವನ ವಿರುದ್ಧ ದೋಷಾರೋಪ ಪಟ್ಟಿ!

|
Google Oneindia Kannada News

ಜೈಪುರ, ಜೂನ್ 29: ಗೋ ರಕ್ಷಕರಿಂದ ಹಲ್ಲೆಗೊಳಗಾಗಿ ಹತ್ಯೆಯಾದವನ ಮೇಲೆಯೇ ಪೊಲೀಸರು ದೋಷಾರೋಪ ಪಟ್ಟಿ ಹೊರಿಸಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

2017 ರ ಏಪ್ರಿಲ್‌ನಲ್ಲಿ ರೈತ ಪೆಹ್ಲು ಖಾನ್‌ ಮತ್ತು ಅವರ ಮಗ ಹಸುಗಳೊಂದಿಗೆ ಜೈಪುರದ ಹಸುಗಳ ಜಾತ್ರೆಗೆ ಹೋಗಿ ಅಲ್ಲಿಂದ ವಾಪಸ್ ಹರಿಯಾಣಕ್ಕೆ ತೆರಳುತ್ತಿದ್ದರು, ಆಗ ಗೋ ರಕ್ಷಕರ ಕೈಗೆ ಸಿಕ್ಕಿ ಥಳಿತಕ್ಕೊಳಗಾಗಿ ಪೆಹ್ಲು ಖಾನ್ ಹತರಾಗಿದ್ದರು.

ಭಾರತಕ್ಕೆ ಪರೋಕ್ಷ ಎಚ್ಚರಿಕೆ ನೀಡಿದರೇ ಅಮೆರಿಕ ವಿದೇಶಾಂಗ ಕಾರ್ಯದರ್ಶಿ? ಭಾರತಕ್ಕೆ ಪರೋಕ್ಷ ಎಚ್ಚರಿಕೆ ನೀಡಿದರೇ ಅಮೆರಿಕ ವಿದೇಶಾಂಗ ಕಾರ್ಯದರ್ಶಿ?

ಪ್ರಕರಣದ ಹಲ್ಲೆ ಆರೋಪದಡಿ ಎಂಟು ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಜೊತೆಗೆ ಹಸುಗಳನ್ನು ನಿಯಮಬಾಹಿರ ರೀತಿಯಲ್ಲಿ ಸಾಗಾಟ ಮಾಡುತ್ತಿದ್ದಿದ್ದಕ್ಕೆ ಪೆಹ್ಲು ಖಾನ್ ಮತ್ತು ಆತನ ಮಗನ ವಿರುದ್ಧವೂ ಪ್ರಕರಣ ದಾಖಲಾಗಿತ್ತು.

ಈಗ ಪೆಹ್ಲು ಖಾನ್ ಮತ್ತು ಆತನ ಮಗನ ವಿರುದ್ಧ ರಾಜಸ್ಥಾನ ಪೊಲೀಸರು ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಗುಂಪು ಹತ್ಯೆ ಪ್ರಕರಣದ ವಿಚಾರಣೆಯೂ ನಡೆಯುತ್ತಿದ್ದು, ಎಂಟರಲ್ಲಿ ಆರು ಮಂದಿ ಜಾಮೀನಿನ ಮೇಲೆ ಹೊರಗಿದ್ದರೆ, ಉಳಿದ ಇಬ್ಬರು ಈವರೆಗೆ ಪೊಲೀಸರ ಕೈಗೆ ಸಿಕ್ಕಿಲ್ಲ.

English summary
Pehlu Khan died in mob lynching by cow vigilantes in Rajasthan. Police submit charge sheet against dead Pehlu Khan now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X