ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಸ್ಥಾನದ ಈ ನಗರದಲ್ಲಿ ಪಾರಿವಾಳಗಳೇ ಕೋಟ್ಯಧಿಪತಿ

|
Google Oneindia Kannada News

ಜೈಪುರ ಜನವರಿ 11: ಕೋಟ್ಯಧಿಪತಿಗಳು ಮತ್ತು ದೊಡ್ಡ ಕೈಗಾರಿಕೋದ್ಯಮಿಗಳ ನೂರಾರು ಕಥೆಗಳನ್ನು ನೀವು ಕೇಳಿರಬಹುದು. ಇಂತಹ ಸುದ್ದಿಗಳನ್ನು ನಾವು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಓದುತ್ತಿರುತ್ತೇವೆ. ಆದರೆ ಪಕ್ಷಿ-ಪ್ರಾಣಿಗಳ ಹೆಸರಲ್ಲಿಯೂ ಕೋಟಿಗಟ್ಟಲೆ ಆಸ್ತಿ ಇರಬಹುದೆಂಬುದನ್ನು ನೀವು ಕೇಳಿದ್ದೀರಾ? ಕೇಳಲು ಆಶ್ಚರ್ಯ ಅನಿಸಿದರೂ ಇದು ನಿಜ. ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿರುವ ಜಸ್ನಗರ ಎಂಬ ಸಣ್ಣ ಪಟ್ಟಣದಲ್ಲಿ ಪಾರಿವಾಳಗಳು ಸಹ ಕೋಟ್ಯಧಿಪತಿಗಳು. ಹೌದು, ರಾಜಸ್ಥಾನದ ಜಸ್ನಗರ ನಗರದಲ್ಲಿ ಪಾರಿವಾಳಗಳು ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಹೊಂದಿವೆ. ಈ ಪಾರಿವಾಳಗಳನ್ನು "ಮಲ್ಟಿ-ಮಿಲಿಯನೇರ್" ಪಾರಿವಾಳಗಳು ಎಂದು ಕರೆಯಲಾಗುತ್ತದೆ. ಈ ಪಾರಿವಾಳಗಳಿಗೆ ಇಷ್ಟೊಂದು ಸಂಪತ್ತು ಎಲ್ಲಿಂದ ಬಂತು ಮತ್ತು ಹೇಗೆ ಲಕ್ಷಾಧಿಪತಿಗಳಾದವು ಎಂಬುದನ್ನು ನೋಡೋಣ.

ಇಲ್ಲಿ ಪಾರಿವಾಳಗಳು ಕೋಟ್ಯಧಿಪತಿಗಳು

ಇಲ್ಲಿ ಪಾರಿವಾಳಗಳು ಕೋಟ್ಯಧಿಪತಿಗಳು

ಮಾಧ್ಯಮ ವರದಿಗಳ ಪ್ರಕಾರ, ಈ ಪಾರಿವಾಳಗಳು ಅನೇಕ ಅಂಗಡಿಗಳ ಮಾಲೀಕರಾಗಿವೆ. ಇವುಗಳ ಹೆಸರಿನಲ್ಲಿ ಅಪಾರ ಭೂಮಿ ಇದೆ. ಮಾತ್ರವಲ್ಲದೆ ಇವುಗಳ ಹೆಸರಿನಲ್ಲಿ ನಗದು ಹಣವನ್ನು ಸಹ ಠೇವಣಿ ಮಾಡಲಾಗುತ್ತದೆ. ಹೌದು... ರಾಜಸ್ಥಾನದ ಜನ ಪಕ್ಷಿ ಪ್ರಿಯರು ಪಾರಿವಾಳಗಳನ್ನು ಹೆಚ್ಚು ಪ್ರೀತಿಸುತ್ತಾರೆ. ಹೀಗಾಗಿ ಇವರು ಪಾರಿವಾಳಗಳ ಹೆಸರಿನಿಂದಲೇ ಅಂಗಡಿಗಳನ್ನು ತೆರೆಯುತ್ತಾರೆ. ಜೊತೆಗೆ ಭೂಮಿಯನ್ನೂ ಪಾರಿವಾಳಗಳ ಹೆಸರಿನಲ್ಲೇ ಖರೀದಿ ಮಾಡುತ್ತಾರೆ. ಹೀಗಾಗಿ 27 ಅಂಗಡಿಗಳಿಗೆ ಪಾರಿವಾಳಗಳ ಹೆಸರುಗಳನ್ನು ಇಡಲಾಗಿದೆ. ಈ ಪಾರಿವಾಳಗಳು 126 ಭೂಮಿಯ ಮಾಲೀಕರೂ ಆಗಿವೆ. ಜಾಸ್ನಗರದ ಕೋಟ್ಯಧಿಪತಿ ಪಾರಿವಾಳಗಳ ಹೆಸರಿನಲ್ಲಿ 400ಕ್ಕೂ ಹೆಚ್ಚು ಗೋಶಾಲೆಗಳನ್ನು ತೆರೆಯಲಾಗಿದೆ. ಈ ಗೋಶಾಲೆಗಳು 10 ಬಿಘಾ ಭೂಮಿಯಲ್ಲಿಯೂ ಕಾರ್ಯನಿರ್ವಹಿಸುತ್ತವೆ.

ಕಬೂತರ್ ಟ್ರಸ್ಟ್ ಸ್ಥಾಪನೆ

ಕಬೂತರ್ ಟ್ರಸ್ಟ್ ಸ್ಥಾಪನೆ

ನಾಲ್ಕು ದಶಕಗಳ ಹಿಂದೆ ಅಂದರೆ 40 ವರ್ಷಗಳ ಹಿಂದೆ ಇಲ್ಲಿ ಹೊಸ ಕೈಗಾರಿಕೋದ್ಯಮಿಯೊಬ್ಬರು ಕಬೂತರ್ ಟ್ರಸ್ಟ್ ಸ್ಥಾಪಿಸಿದ್ದರು. IANS ವರದಿಯ ಪ್ರಕಾರ, ಕಬೂತರನ್ ಟ್ರಸ್ಟ್ ಅನ್ನು 40 ವರ್ಷಗಳ ಹಿಂದೆ ವಲಸಿಗ ಕೈಗಾರಿಕೋದ್ಯಮಿಗಳಾದ ದಿವಂಗತ ಸಜ್ಜನರಾಜ್ ಜೈನ್ ಮತ್ತು ಪ್ರಭುಸಿಂಹ ರಾಜಪುರೋಹಿತ್ ಅವರು ಮಾಜಿ ಸರಪಂಚ್ ರಾಮ್‌ದಿನ್ ಚೋಟಿಯಾ ಅವರ ಸೂಚನೆಯ ಮೇರೆಗೆ ಮತ್ತು ಅವರ ಮಾರ್ಗದರ್ಶಕ ಮರುಧರ್ ಕೇಸರಿ ಅವರಿಂದ ಪ್ರೇರಿತರಾಗಿ ಸ್ಥಾಪಿಸಿದರು. ಈ ಜನರು ಪಾರಿವಾಳಗಳ ರಕ್ಷಣೆ ಮತ್ತು ನಿತ್ಯ ಅವುಗಳ ಕಾಳಜಿಗಾಗಿ ನಗರದಲ್ಲಿ 27 ಅಂಗಡಿಗಳನ್ನು ನಿರ್ಮಿಸಿ ಪಾರಿವಾಳ ಎಂದು ಹೆಸರಿಸಿದ್ದಾರೆ.

ಕಬೂತರ್ ಟ್ರಸ್ಟ್ಗೆ ಹರಿದುಬಂದ ಹಣ

ಕಬೂತರ್ ಟ್ರಸ್ಟ್ಗೆ ಹರಿದುಬಂದ ಹಣ

ಸುಕಬೂತರ್ ಟ್ರಸ್ಟ್ ಸ್ಥಾಪನೆಮಾರು ನಾಲ್ಕು ದಶಕಗಳ ಹಿಂದೆ ಇಲ್ಲಿ ಹೊಸ ಕೈಗಾರಿಕೋದ್ಯಮಿಯೊಬ್ಬರು ಕಬೂತರಣ ಟ್ರಸ್ಟ್ ಸ್ಥಾಪಿಸಿದ್ದರು. ನಮ್ಮ ಪೂರ್ವಜರು ಹಾಗೂ ಮಾಜಿ ಸರಪಂಚ್ ರಾಮದಿನ್ ಚೋಟಿಯಾ ಮತ್ತು ಅವರ ಗುರು ಮರುಧರ್ ಕೇಸರಿ ಅವರಿಂದ ಸ್ಫೂರ್ತಿ ಪಡೆದು ಈ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಪ್ರಭುಸಿಂಹ ರಾಜಪುರೋಹಿತ್ ಹೇಳಿದರು. ಮೂಕ ಪಕ್ಷಿಗಳಿಗೆ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡಲು ನಾವು ಈ ಟ್ರಸ್ಟ್ ಮೂಲಕ ಸ್ಫೂರ್ತಿ ಪಡೆದಿದ್ದೇವೆ. ಈಗ ಈ ಟ್ರಸ್ಟ್‌ನ ಗಳಿಕೆಯಿಂದ ಕಳೆದ 30 ವರ್ಷಗಳಿಂದ ದಿನಕ್ಕೆ ಮೂರು ಚೀಲ ಆಹಾರ ಧಾನ್ಯಗಳನ್ನು ವ್ಯವಸ್ಥೆ ಮಾಡಲಾಗಿದೆ. ಈ ಯೋಜನೆಯಲ್ಲಿ ಕೈಗಾರಿಕೋದ್ಯಮಿ ಸಜ್ಜನರಾಜ್ ಜೈನ್ ಪ್ರವರ್ತಕರಾಗಿದ್ದಾರೆ ಎಂದು ಅವರು ಹೇಳಿದರು.

ಕಬೂತರ್ ಟ್ರಸ್ಟ್ ಮೂಲಕ ಪಾರಿವಾಳಗಳ ಪಾಲನೆ

ಕಬೂತರ್ ಟ್ರಸ್ಟ್ ಮೂಲಕ ಪಾರಿವಾಳಗಳ ಪಾಲನೆ

ವರದಿ ಪ್ರಕಾರ, ಟ್ರಸ್ಟ್ ಪಾರಿವಾಳಗಳಿಗೆ ಪ್ರತಿ ದಿನ ಮೂರು ಚೀಲ ಭತ್ತವನ್ನು ನೀಡಲಾಗುತ್ತದೆ. ಇದಕ್ಕೆ 4,000 ರೂಪಾಯಿ ಹಣ ಖರ್ಚಾಗುತ್ತದೆ. ಈ ಟ್ರಸ್ಟ್ ನಡೆಸುತ್ತಿರುವ ಗೋಶಾಲೆಯಲ್ಲಿ 470 ಹಸುಗಳು ವಾಸಿಸುತ್ತವೆ. ಈ ಹಸುಗಳಿಗೆ ಮೇವು ಮತ್ತು ನೀರಿನ ವ್ಯವಸ್ಥೆಯನ್ನು ಸಹ ಟ್ರಸ್ಟ್‌ನಿಂದಲೇ ಮಾಡಲಾಗುತ್ತದೆ. 27 ಅಂಗಡಿಗಳಿಂದ ಪ್ರತಿ ತಿಂಗಳು ಸಿಗುವ ಬಾಡಿಗೆ 80 ಸಾವಿರ ರೂಪಾಯಿ ಇದೆ. 126 ಬಿಘಾ ಭೂಮಿ ಸ್ಥಿರ ಆಸ್ತಿಯಿದೆ. ಟ್ರಸ್ಟ್ ಗಳಿಸಿದ ಹಣವೇನಿದ್ದರೂ ಅದನ್ನು ಪಾರಿವಾಳಗಳ ನಿರ್ವಹಣೆಗೆ ಬಳಸುತ್ತಾರೆ. ಉಳಿದ ಹಣವನ್ನು ಗ್ರಾಮದ ಬ್ಯಾಂಕ್‌ಗೆ ಜಮಾ ಮಾಡುತ್ತಾರೆ. ಬ್ಯಾಂಕ್‌ನಲ್ಲಿ ಇಟ್ಟಿದ್ದ ಹಣವೇ 30 ಲಕ್ಷ ರೂಪಾಯಿ ಆಗಿದೆ. ಇದನ್ನು ಪಾರಿವಾಳಗಳ ಹೆಸರಿನಲ್ಲೇ ಇಡಲಾಗಿದೆ.

ಟ್ರಸ್ಟ್ ನಿಂದಲೇ ಪಾರಿವಾಳಗಳ ರಕ್ಷಣೆ

ಟ್ರಸ್ಟ್ ನಿಂದಲೇ ಪಾರಿವಾಳಗಳ ರಕ್ಷಣೆ

ಕಬೂತರ್ ಟ್ರಸ್ಟ್‌ನ ಕಾರ್ಯದರ್ಶಿ ಪ್ರಭುಸಿಂಹ ರಾಜಪುರೋಹಿತ್ ಪ್ರಕಾರ ಜನರು ಜಾಸ್‌ನಗರದ ಪಾರಿವಾಳಗಳಿಗೆ ದೇಣಿಗೆ ನೀಡುತ್ತಾರೆ. ಪ್ರತಿ ತಿಂಗಳು ಅನೇಕ ಜನರಿಂದ ದೇಣಿಗೆ ಪಡೆಯಲಾಗುತ್ತದೆ. ಪಾರಿವಾಳಕ್ಕಾಗಿ ತೆರೆದಿರುವ 27 ಅಂಗಡಿಗಳಿಂದ ವಾರ್ಷಿಕ ಆದಾಯ 9 ಲಕ್ಷ ರೂಪಾಯಿ ಇದೆ.

English summary
very few of you must have heard that even in the name of birds and animals, there can be a property worth crores. But this is true.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X