• search
  • Live TV
ಜೈಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪೆಟ್ರೋಲ್ ಬೆಲೆ ಏರಿಕೆ; ವಿಡಿಯೋ ಮಾಡಿದ ಕಾಮಿಡಿಯನ್ ವಿರುದ್ಧ ದೂರು

|

ಜೈಪುರ, ಫೆಬ್ರವರಿ 21; ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಏರುತ್ತಲೇ ಸಾಗಿವೆ. ಕೆಲವು ರಾಜ್ಯಗಳಲ್ಲಿ ಲೀಟರ್ ಪೆಟ್ರೋಲ್ ಬೆಲೆ 100 ರೂ. ಆಗಿದೆ. ರಾಜಸ್ಥಾನದಲ್ಲಿ ಪೆಟ್ರೋಲ್ ಬೆಲೆ ಕುರಿತು ವ್ಯಂಗ್ಯ ಮಾಡಿದ ಕಾಮಿಡಿಯನ್ ವಿರುದ್ಧ ಬಂಕ್ ಮಾಲೀಕರು ದೂರು ನೀಡಿದ್ದಾರೆ.

ಕಾಮಿಡಿಯನ್ ಶ್ಯಾಂ ರಂಗೀಲ ಪೆಟ್ರೋಲ್ ಬೆಲೆ ಕುರಿತು ವಿಡಿಯೋ ಮಾಡಿ ಟ್ವೀಟ್‌ನಲ್ಲಿ ಹಾಕಿದ್ದರು. ಪ್ರಧಾನಿ ನರೇಂದ್ರ ಮೋದಿ ರೀತಿಯಲ್ಲಿ ಮಾತನಾಡಿದ ಇಂಧನದ ಬೆಲೆ ಏರಿಕೆ ಬಗ್ಗೆ ವಿಡಿಯೋ ಮಾಡಿದ್ದರು. ಈಗ ಬಂಕ್ ಮಾಲೀಕರು ಶ್ಯಾಂ ವಿರುದ್ಧ ದೂರು ಕೊಟ್ಟಿದ್ದಾರೆ.

Infographics: ರಾಜ್ಯದ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ?Infographics: ರಾಜ್ಯದ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ?

ಫೆಬ್ರವರಿ 16ರಂದು ಶ್ಯಾಂ ರಂಗೀಲ ಈ ವಿಡಿಯೋ ಮಾಡಿದ್ದರು. ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಯೂಟ್ಯೂಬ್‌ಬಲ್ಲಿ 42 ಸಾವಿರಕ್ಕೂ ಅಧಿಕ ಲೈಕ್ ಬಂದಿದೆ. ಟ್ವಿಟರ್, ಫೇಸ್‌ ಬುಕ್‌ಗಳಲ್ಲಿ ವಿಡಿಯೋ ವೈರಲ್ ಆಗಿದೆ.

ಇಡೀ ದೇಶದಲ್ಲಿಯೇ ಈ ರಾಜ್ಯದಲ್ಲಿ ಪೆಟ್ರೋಲ್ ದರ ಕಡಿಮೆ: ಕಾರಣ ಏನು ಗೊತ್ತೇ?ಇಡೀ ದೇಶದಲ್ಲಿಯೇ ಈ ರಾಜ್ಯದಲ್ಲಿ ಪೆಟ್ರೋಲ್ ದರ ಕಡಿಮೆ: ಕಾರಣ ಏನು ಗೊತ್ತೇ?

ತಾನೊಬ್ಬ ಪತ್ರಕರ್ತ ಎಂದು ಹೇಳಿಕೊಂಡು ಪೆಟ್ರೋಲ್ ಬಂಕ್‌ನಲ್ಲಿ ಶ್ಯಾಂ ರಂಗೀಲ ವಿಡಿಯೋ ಮಾಡಿದ್ದಾನೆ. ಆತನ ವಿರುದ್ಧ ದೂರು ನೀಡುವಂತೆ ಇಂಧನ ಸರಬರಾಜು ಮಾಡುವ ಕಂಪನಿ ಸೂಚನೆ ನೀಡಿತ್ತು. ಇಲ್ಲವಾದಲ್ಲಿ ಪೆಟ್ರೋಲ್ ಪೂರೈಕೆ ಸ್ಥಗಿತಗೊಳಿಸುವುದಾಗಿ ಬಂಕ್ ಮಾಲೀಕ ಸುರೇಂದ್ರ ಅಗರ್‌ವಾಲ್‌ ಅವರಿಗೆ ಹೇಳಿತ್ತು.

ತೈಲ ಬೆಲೆ ಏರಿಕೆ: ಪೆಟ್ರೋಲ್ ಬಂಕ್ ನಲ್ಲಿ ವಿಶಿಷ್ಟ ಫೋಸ್ ಕೊಟ್ಟು ವ್ಯಕ್ತಿಯ ಪ್ರತಿಭಟನೆ ತೈಲ ಬೆಲೆ ಏರಿಕೆ: ಪೆಟ್ರೋಲ್ ಬಂಕ್ ನಲ್ಲಿ ವಿಶಿಷ್ಟ ಫೋಸ್ ಕೊಟ್ಟು ವ್ಯಕ್ತಿಯ ಪ್ರತಿಭಟನೆ

ವಿಡಿಯೋದಿಂದಾಗಿ ಯಾರ ಭಾವನೆಗಾದರೂ ಧಕ್ಕೆಯಾಗಿದ್ದರೆ ಕ್ಷಮೆ ಕೇಳುವೆ. ಕಂಪನಿ ಏಕೆ ನನ್ನ ವಿರುದ್ಧ ದೂರು ನೀಡಲು ಹೇಳಿದೆ? ಎಂಬುದು ತಿಳಿದಿಲ್ಲ ಎಂದು ಶ್ಯಾಂ ಹೇಳಿದ್ದಾರೆ.

"ನನ್ನ ಸೇಹ್ನಿತರೇ ಇದು ರಾಜಸ್ಥಾನಕ್ಕೆ ಗೌರವ ತರುವ ವಿಚಾರ. ರಾಜ್ಯದಲ್ಲಿ ಪೆಟ್ರೋಲ್ ಬೆಲೆ 100 ರೂ. ಆಗಿದೆ. ಹಿಂದಿನ ಯಾವುದೇ ಸರ್ಕಾರ ಪೆಟ್ರೋಲ್‌ಗೆ ಇಂತಹ ಮೌಲ್ಯವನ್ನು ಕೊಟ್ಟಿರಲಿಲ್ಲ" ಎಂದು ಪ್ರಧಾನಿ ನರೇಂದ್ರ ಮೋದಿ ರೀತಿ ವಿಡಿಯೋವನ್ನು ಶ್ಯಾಂ ಮಾಡಿದ್ದರು.

English summary
Complaint against comedian Shyam Rangeela who mimicked PM Narendra Modi and mocked the fuel price hike. Video was shot at petrol bunk now owner filed complaint.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X