• search
  • Live TV
ಜೈಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದುಬಾರಿ ಪೆಟ್ರೋಲ್‌; ಹಣ ಉಳಿಸಲು ಪಂಜಾಬ್‌ನತ್ತ ರಾಜಸ್ತಾನ ಜನ...

|

ಜೈಪುರ, ಫೆಬ್ರವರಿ 18: ಸತತ ಹತ್ತನೇ ದಿನ ತೈಲ ಬೆಲೆ ಏರಿಕೆಯಾಗಿದ್ದು, ಪೆಟ್ರೋಲ್, ಡೀಸೆಲ್ ಬೆಲೆ ಸಾರ್ವಕಾಲಿಕ ದಾಖಲೆ ತಲುಪಿದೆ. ದೆಹಲಿಯಲ್ಲಿ ಪೆಟ್ರೋಲ್‌ ಬೆಲೆ 89.88 ರೂಗೆ ತಲುಪಿದ್ದು, ಡೀಸೆಲ್ ದರ 80.27 ರೂ ದರ ಮುಟ್ಟಿದೆ.

ರಾಜಸ್ತಾನದಲ್ಲಿ ಪೆಟ್ರೋಲ್ ಬೆಲೆ ಶತಕ ದಾಟಿದ್ದು, ಸಾಮಾನ್ಯ ಜನರಿಗೆ ಸಂಕಷ್ಟ ತಂದೊಡ್ಡಿದೆ. ಜೊತೆಗೆ ರಾಜಸ್ತಾನದ ಪೆಟ್ರೋಲ್ ಡೀಲರ್‌ಗಳಿಗೂ ಬೆಲೆ ಏರಿಕೆ ಸಮಸ್ಯೆ ತಂದೊಡ್ಡಿದೆ. ಬೆಲೆ ಏರಿಕೆ ನಡುವೆ ವ್ಯಾಪಾರವಿಲ್ಲದೇ ಕೂರುವ ಪರಿಸ್ಥಿತಿ ಎದುರಾಗಿದೆ. ಪೆಟ್ರೋಲ್, ಡೀಸೆಲ್ ಬೆಲೆ ಅತಿಯಾದ ಏರಿಕೆ ಕಂಡಿರುವುದರಿಂದ ಇಂಧನ ಖರೀದಿಗೆ ಜನರು ಪಕ್ಕದ ರಾಜ್ಯ ಪಂಜಾಬ್‌ಗೆ ಹೋಗುತ್ತಿರುವುದು ಕಂಡುಬರುತ್ತಿದೆ. ಮುಂದೆ ಓದಿ...

ಶತಕ ಮುಟ್ಟಿದ ಪೆಟ್ರೋಲ್ ಬೆಲೆ; ವೈರಲ್ ಆಯ್ತು ಈ ಫೋಟೊ...

 ಪ್ರತಿನಿತ್ಯ ಪಂಜಾಬ್‌ಗೆ ಹೋಗುತ್ತಿರುವ ರಾಜಸ್ತಾನ ಜನ

ಪ್ರತಿನಿತ್ಯ ಪಂಜಾಬ್‌ಗೆ ಹೋಗುತ್ತಿರುವ ರಾಜಸ್ತಾನ ಜನ

ರಾಜಸ್ತಾನದ ಟ್ಯಾಕ್ಸಿ, ಟ್ರಕ್ ಚಾಲಕರು ಹಾಗೂ ಜನರು ಇಂಧನ ಖರೀದಿಗೆ ಪಂಜಾಬ್‌ಗೆ ಪ್ರತಿನಿತ್ಯ ಹೋಗುತ್ತಿದ್ದಾರೆ. ರಾಜಸ್ತಾನದ ಶ್ರೀಗಂಗಾನಗರಕ್ಕೆ ಹೋಲಿಸಿದರೆ ಪಂಜಾಬ್‌ನ ಅಬೊಹಾರ್‌ನಲ್ಲಿ ತೈಲ ಬೆಲೆ ಕಡಿಮೆ ಇರುವ ಕಾರಣ ಪೆಟ್ರೋಲ್ ಖರೀದಿಗೆ ಇಲ್ಲಿನವರು ಅಲ್ಲಿಗೆ ತೆರಳುತ್ತಿರುವುದು ಕಂಡುಬಂದಿದೆ. ರಾಜಸ್ತಾನದ ಶ್ರೀಗಂಗಾನಗರಕ್ಕೂ, ಪಂಜಾಬ್‌ನ ಅಬೊಹಾರ್‌ನಲ್ಲಿನ ಪೆಟ್ರೋಲ್‌ ಬೆಲೆಗೆ 10ರೂ ವ್ಯತ್ಯಾಸವಿದ್ದು, ಕಡಿಮೆ ಬೆಲೆ ಇರುವ ಪಂಜಾಬ್‌ನಲ್ಲಿ ಜನರು ತೈಲ ಖರೀದಿಗೆ ತೆರಳುತ್ತಿದ್ದಾರೆ.

 ರಾಜಸ್ತಾನದ ಶ್ರೀಗಂಗಾನಗರದಲ್ಲಿ ಪೆಟ್ರೋಲ್ ಬೆಲೆ 100.7ರೂ

ರಾಜಸ್ತಾನದ ಶ್ರೀಗಂಗಾನಗರದಲ್ಲಿ ಪೆಟ್ರೋಲ್ ಬೆಲೆ 100.7ರೂ

ಶ್ರೀಗಂಗಾನಗರದಲ್ಲಿ ಬುಧವಾರ ಪೆಟ್ರೋಲನ್ನು ಲೀಟರಿಗೆ 100.7ರೂಗೆ ಮಾರಾಟ ಮಾಡಲಾಗುತ್ತಿತ್ತು. ಆದರೆ ಇದರ ಬೆಲೆ ಪಂಜಾಬ್‌ನ ಅಬೋಹಾರ್‌ನಲ್ಲಿ 91.15ರೂ ಇತ್ತು. ಡೀಸೆಲ್ ಬೆಲೆ 92.7 ಇದ್ದರೆ, ಪಂಜಾಬ್‌ನಲ್ಲಿ 82.22 ರೂ ಇದೆ. ಹೀಗಾಗಿ ಹಣ ಉಳಿಸುವ ಕಾರಣ ಪ್ರತಿನಿತ್ಯ ಜನರು ಅಲ್ಲಿಗೆ ಹೋಗುತ್ತಿದ್ದಾರೆ.

ಸತತ 10ನೇ ದಿನ ಕೂಡಾ ಪೆಟ್ರೋಲ್, ಡೀಸೆಲ್ ದರ ಏರಿಕೆ

 ರಾಜಸ್ತಾನ ಗಡಿಯಿಂದ ಪಂಜಾಬ್‌ಗೆ ಐದು ಕಿ.ಮೀ.

ರಾಜಸ್ತಾನ ಗಡಿಯಿಂದ ಪಂಜಾಬ್‌ಗೆ ಐದು ಕಿ.ಮೀ.

ಶ್ರೀಗಂಗಾನಗರ ರಾಜಸ್ತಾದ ಗಡಿ ಜಿಲ್ಲೆಯಾಗಿದ್ದು, ಒಂದೆಡೆ ಪಾಕಿಸ್ತಾನದ ಗಡಿ ಹೊಂದಿದ್ದರೆ, ಪಂಜಾಬ್ ನೆರೆ ರಾಜ್ಯವಾಗಿದೆ. ಶ್ರೀಗಂಗಾನಗರದಿಂದ ಅಬೋಹಾರ್ ಐದು ಕಿಲೋ ಮೀಟರ್ ದೂರದಲ್ಲಿದೆ. ಹೀಗಾಗಿ ಜನರು ಐದು ಕಿಲೋ ಮೀಟರ್ ಕ್ರಮಿಸಿ ಪಂಜಾಬ್‌ಗೆ ಹೋಗಿ ಅಲ್ಲಿಂದ ಇಂಧನ ಖರೀದಿ ಮಾಡುತ್ತಿದ್ದಾರೆ.

 ಪೆಟ್ರೋಲ್ ಬಂಕ್ ಡೀಲರ್ ಗಳಿಗೆ ವ್ಯಾಪಾರವಿಲ್ಲ

ಪೆಟ್ರೋಲ್ ಬಂಕ್ ಡೀಲರ್ ಗಳಿಗೆ ವ್ಯಾಪಾರವಿಲ್ಲ

ಹೀಗೆ ಇಲ್ಇನ ಜನರು ಪಂಜಾಬ್‌ಗೆ ತೆರಳುತ್ತಿರುವುದು ರಾಜಸ್ತಾನದ ಪೆಟ್ರೋಲ್ ಬಂಕ್ ಡೀಲರ್‌ಗಳಿಗೆ ತಲೆನೋವಾಗಿದ್ದು, ವ್ಯಾಪಾರವಿಲ್ಲದ ಹಾಗಾಗಿದೆ. ಒಮ್ಮೆ ಹೋಗಿ ಫುಲ್ ಟ್ಯಾಂಕ್ ಪೆಟ್ರೋಲ್ ತುಂಬಿಸಿಕೊಂಡು ಬರುವುದರಿಂದ ಇಲ್ಲಿನ ಡೀಲರ್‌ಗಳಿಗೆ ನಷ್ಟವಾಗುತ್ತಿದೆ ಎನ್ನಲಾಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಕೆಯಾಗಿರುವುದೇ ತೈಲ ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ. ಕಚ್ಚಾತೈಲ ಬೆಲೆ ಬ್ಯಾರೆಲ್‌ಗೆ $ 60ರಷ್ಟು ಹೆಚ್ಚಾಗಿದ್ದು, ಬೇಡಿಕೆ ಹೆಚ್ಚಾದಂತೆ ಇಂಧನ ಬೆಲೆ ಇನ್ನಷ್ಟು ಹೆಚ್ಚಲಿದೆ ಎಂದು ತಿಳಿದುಬಂದಿದೆ.

English summary
Every day, a number of people including taxi, truck drivers and other commuters in rajastan drive to Abohar in Punjab to buy fuel,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X