• search
 • Live TV
ಜೈಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಜಸ್ಥಾನ ಬಿಜೆಪಿ ಸೋಲಿಗೆ ರೋಜ್ಗಾರೇಶ್ವರ ದೇವರ ಶಾಪ ಕಾರಣವೇ?

By ವಿನೋದ್ ಕುಮಾರ್ ಶುಕ್ಲಾ
|
   ರಾಜಸ್ಥಾನ ಬಿಜೆಪಿ ಸೋಲಿಗೆ ರೋಜ್ಗಾರೇಶ್ವರ ದೇವರ ಶಾಪ ಕಾರಣವೇ? | Oneindia Kannada

   ಜೈಪುರ, ಡಿಸೆಂಬರ್ 14: ರಾಜಸ್ಥಾನದ ಜೈಪುರದಲ್ಲಿದ್ದ ರೋಜ್ಗಾರೇಶ್ವರ ಮಹಾದೇವ ದೇವಾಲಯವನ್ನು ಕೆಡವಿದ್ದೇ ಬಿಜೆಪಿಯ ಸೋಲಿಗೆ ಕಾರಣವೇ? ರೋಜ್ಗಾರೇಶ್ವರ ದೇವರ ಶಾಪದಿಂದಲೇ ಬಿಜೆಪಿ ಸೋತಿದೆ ಎಂಬ ಮಾತು ಸದ್ಯಕ್ಕೆ ರಾಜಸ್ಥಾನದ ಬೀದಿ ಬೀದಿಯಲ್ಲೂ ಕೇಳಿಬರುತ್ತಿದೆ!

   ಅಧಿಕಾರದಲ್ಲಿದ್ದಾಗ ದುರಹಂಕಾರದಿಂದ ವರ್ತಿಸಿ, ದೇವಾಲಯವನ್ನು ಕೆಡವಿದ್ದೇ ಬಿಜೆಪಿಯ ಸೋಲಿಗೆ ಕಾರಣವಾಗಿದೆ ಎಂದು ಜನರು ದೂರುತ್ತಿದ್ದಾರೆ.

   ಚುನಾವಣೆ ಫಲಿತಾಂಶ, ಅಂಕಿ ಸಂಖ್ಯೆಗಳಲ್ಲಿ ಸಚಿತ್ರ ವಿವರ

   ರೋಜ್ಗಾರೇಶ್ವರ ದೇವಾಲಯದ ಮಹಾತ್ಮೆ ಗೊತ್ತಿದ್ದವರ್ಯಾರೂ ಇಂಥ ಕೆಲಸಕ್ಕೆ ಕೈಹಾಕುವುದಿಲ್ಲ. ಆದರೆ ಬಿಜೆಪಿ ಈ ದೇವಾಲಯದ ಇತಿಹಾಸ ತಿಳಿದೂ ದೇವಾಲಯ ನಾಶಕ್ಕೆ ಪ್ರಯತ್ನಿಸಿದ್ದು ಅದರ ಸೋಲಿಗೆ ಕಾರಣ ಎಂಬುದು ಜನರ ಅಂಬೋಣ.

   ದೇವಾಲಯ ಕೆಡವಿದ್ದ ಬಿಜೆಪಿ

   2015 ಮತ್ತು 2018 ರ ನಡುವೆ ಮೆಟ್ರೋ ರೈಲ್ ನಿರ್ಮಾಣಕ್ಕಾಗಿ ಮತ್ತು ಇತರ ಅಭಿವೃದ್ಧಿ ಕಾರ್ಯಗಳ ಕಾರಣ ನೀಡಿ ಈ ದೇವಾಲಯ ಸೇರಿದಂತೆ 12 ದೇವಾಲಯಗಳನ್ನು ಕೆಡವಲಾಗಿತ್ತು. ಆದರೆ ತಪ್ಪಿನ ಅರಿವಾಗಿ ಮತ್ತೆ ಆ ದೇವಾಲಯವನ್ನು ಕಟ್ತಲಾಗಿತ್ತು. ಆದರೆ ಸರ್ಕಾರ ಮಾತ್ರ ಮತ್ತೆ ಅಧಿಕಾರಕ್ಕೆ ಬರಲಿಲ್ಲ!

   ಪಂಚರಾಜ್ಯ ಫಲಿತಾಂಶ: ಬಿಜೆಪಿ ಧೂಳಿಪಟವಾಗೋಕೆ 5 ಕಾರಣ

   ದೇವಾಲಯಕ್ಕೆ ಮಹೋನ್ನತ ಇತಿಹಾಸವಿದೆ

   ರೋಜ್ಗಾರೇಶ್ವರ ಮಹದೇವ ದೇವಾಲಯವೆಂದರೆ ಜೈಪುರದ ಜನರಲ್ಲಿ ಅವ್ಯಕ್ತ ಭಕ್ತಿಯಿದೆ. ರಾಜರ ಆಳ್ವಿಕೆಯ ಕಾಲದಲ್ಲಿ ಜೈಪುರ ಪ್ರಾಂತ್ಯದ ಪ್ರಧಾನ ಮಂತ್ರಿಯಾಗಿದ್ದ ಮಿರ್ಜಾ ಇಸ್ಮಾಯಿಲ್ ರೋಜ್ಗಾರೇಶ್ವರಿ ದೇವಾಲಯವನ್ನು ಧ್ವಂಸ ಮಾಡುವಂತೆ ಆಜ್ಞಾಪಿಸಿದ್ದ. ಅದನ್ನು ಬ್ರಾಹ್ಮಣರು ಮತ್ತು ಹಲವು ಪಂಡಿತರು ವಿರೋಧಿಸಿದ್ದರು. ಆದರೆ ಅದ್ಯಾವುದಕ್ಕೂ ಕಿವಿಗೊಡದ ಇಸ್ಮಾಯಿಲ್ ಅಭಿವೃದ್ಧಿ ಕಾರ್ಯದ ನೆಪವೊಡ್ಡಿ ದೇವಾಲಯದ ಒಂದು ಭಾಗವನ್ನು ಕೆಡವಿದ್ದ. ಅದಾಗಿ ಕೆಲವೇ ದಿನಗಳಲ್ಲಿ ಮಿರ್ಜಾ ಇಸ್ಮಾಯಿಲ್ ಮಗ ತೀವ್ರ ಅನಾರೋಗ್ಯಕ್ಕೀಡಾದ. ಯಾವ ಚಿಕಿತ್ಸೆ ನೀಡಿದರೂ ಗುಣಮುಖವಾಗುತ್ತಿರಲಿಲ್ಲ. ಆಗ ಊರಿನ ಹಿರಿಯರೊಬ್ಬರು 'ಇದು ರೋಜ್ಗಾರೇಶ್ವರಿಯ ಶಾಪ' ಎಂದರು. ದೇವಾಲಯವನ್ನು ಮತ್ತೆ ಕಟ್ಟಿದ ಮೇಲೆ ಆತನ ಪುತ್ರನ ಕಾಯಿಲೆ ಪವಾಡದ ರೀತಿಯಲ್ಲಿ ವಾಸಿಯಾಗಿತ್ತು! ಆದರೆ ಕೆಲವೇ ದಿನಗಳಲ್ಲಿ ಆತ ತನ್ನ ಪ್ರಧಾನಿ ಪಟ್ಟವನ್ನು ಬಿಟ್ಟ, ಓಡಿಹೋಗಬೇಕಾಯ್ತು!

   ಪಂಚರಾಜ್ಯ ಫಲಿತಾಂಶ: ಬಿಜೆಪಿಗಷ್ಟೇ ಅಲ್ಲ, ಮಾಯಾವತಿಗೂ ಮುಖಭಂಗ!

   ದೇವಾಲಯದ ವಿಶೇಷತೆ ಏನು?

   ರಾಜರ ಆಳ್ವಿಕೆಯ ಸಮಯದಲ್ಲಿ ಶತ್ರುಸಂಹಾರಕ್ಕಾಗಿ ನಿರ್ಮಿಸಲಾಗುತ್ತಿದ್ದ ಸುರಂಗಗಳ ಮೇಲೆ ಅಲ್ಲಲ್ಲಿ ಇಂಥ ದೇವಾಲಯಗಳನ್ನು ನಿರ್ಮಿಸಲಾಗುತ್ತಿತ್ತು. ದೇವಾಲಯದ ಅಡಿಯಲ್ಲಿ ಸುರಂಗವಿರುವುದು ಸೇನೆಗೆ, ರಾಜರಿಗೆ, ಮಂತ್ರಿಗಳಿಗಲ್ಲದೆ ಜನಸಾಮಾನ್ಯರಿಗೆ ತಿಳಿಯುತ್ತಿರಲಿಲ್ಲ. ಸುರಂಗಕ್ಕೆ ಗಾಳಿ-ಬೆಳಕು ಬೇಕೆಂಬ ಕಾರಣಕ್ಕೆ ಸುರಂಗಗಳ ಮೇಲೆ ದೇವಾಲಯ ನಿರ್ಮಿಸಲಾಗುತ್ತಿತ್ತು. ಈ ದೇವಾಲಯಗಳಿಗೆ ಸಾಕಷ್ಟು ಶಕ್ತಿ ಇರುತ್ತದೆ ಎಂಬ ನಂಬಿಕೆ ಇದೆ. ಇಂಥ ದೇವಾಲಯಗಳಲ್ಲಿ ರೋಜ್ಗಾರೇಶ್ವರಿ ದೇವಾಲಯವೂ ಒಂದು. ಆದ್ದರಂದಲೇ ಈ ದೇವಾಲಯ ಕೆಡವಲು ಯಾರೆಲ್ಲ ಪ್ರಯತ್ನಿಸಿದ್ದಾರೊ ಅವರೆಲ್ಲರಿಗೂ ಸೋಲಾಗಿದೆ ಎಂಬುದು ಜನರ ಅಭಿಪ್ರಾಯ.

   ರಾಜಸ್ಥಾನವನ್ನು ಕಾಂಗ್ರೆಸ್ಸಿಗೆ ಬಿಟ್ಟುಕೊಟ್ಟ ಬಿಜೆಪಿ

   ರಾಜ ಪರಂಪರೆಯ ರಾಜಸ್ಥಾನದಲ್ಲಿ ಡಿಸೆಂಬರ್ 7 ರಂದು ನಡೆದ ಚುನಾವಣೆಯ ಫಲಿತಾಂಶ ಡಿಸೆಂಬರ್ 11 ರಂದು ಹೊರಬಿದ್ದಿತ್ತು. ಚುನಾವಣೆ ನಡೆದ ಒಟ್ಟು 199(200) ಕ್ಷೇತ್ರಗಳಲ್ಲಿ 99 ಕ್ಷೇತ್ರಗಳನ್ನು ಕಾಂಗ್ರೆಸ್ ಗೆದ್ದರೆ ಬಿಜೆಪಿ ಕೇವಲ 73 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಉಳಿದಂತೆ ಬಿಎಸ್ಪಿ 06 ಮತ್ತು ಇತರರು 21 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರು. ಇದೀಗ ಕಾಂಗ್ರೆಸ್ ಪಕ್ಷೇತರರ ಬೆಂಬಲದೊಂದಿಗೆ ಸರ್ಕಾರ ರಚಿಸುತ್ತಿದೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   Read in English: BJP is facing wrath of God
   English summary
   Demolition of Rojgareshwar Mahadev Temple in Jaipur has cost the Bharatiya Janata Party very dear at least this is what people of Jaipur say. The curse of the lord of the temple has been upon the BJP which was in arrogance of power.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more