• search
  • Live TV
ಜೈಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನೆಹರೂ ಕುಟುಂಬದ ಬಗ್ಗೆ ಟ್ವೀಟ್ ಮಾಡಿದ್ದಕ್ಕೆ ನಟಿ ಬಂಧನ

|

ಜೈಪುರ, ಡಿಸೆಂಬರ್ 15: ಹಿಂದಿ ಚಿತ್ರರಂಗದ ನಟಿ, ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಸ್ಪರ್ಧಿಯಾಗಿದ್ದ ಪಾಯಲ್ ರೋಹ್ಟಗಿ ಅವರನ್ನು ಭಾನುವಾರದಂದು ರಾಜಸ್ಥಾನದ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಪಾಯಲ್​ ಅವರು ಈ ಬಗ್ಗೆ ಟ್ವೀಟ್ ಮಾಡಿ ತಮ್ಮನ್ನು ಬಂಧಿಸಲಾಗಿದೆ ಎಂದಿದ್ದಾರೆ.

ಬುಂದಿ ಎಸ್​ಪಿ ಮಮತಾ ಗುಪ್ತಾ ಈ ಬಗ್ಗೆ ಪ್ರತಿಕ್ರಿಯಿಸಿ, ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನಟೀ ಪಾಯಲ್​ ರೋಹಟಗಿ ಅವರನ್ನು ಅಹಮದಾಬಾದ್​ನಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಸ್ವಾತಂತ್ರ್ಯ ಹೋರಾಟಗಾರ ಮೋತಿ ಲಾಲ್​ ನೆಹರೂ ಹಾಗೂ ಅವರ ಕುಟುಂಬದ ಬಗ್ಗೆ ಅವಹೇಳನಕಾರಿ ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಆರೋಪ ಅವರ ಮೇಲಿದೆ ಎಂದಿದ್ದಾರೆ.

2019ರ ಸೆಪ್ಟೆಂಬರ್​ 21ರಂದು ಪಾಯಲ್​ ರೋಹ್ಟಗಿ ಅವರು ಫೇಸ್ ಬುಕ್ ನಲ್ಲಿ ಮೋತಿಲಾಲ್​ ನೆಹರೂ ಕುಟುಂಬದ ಬಗ್ಗೆ ಮಾತನಾಡಿದ ವಿಡಿಯೋ ಪೋಸ್ಟ್​ ಮಾಡಿದ್ದರು. ವಿಡಿಯೋದಲ್ಲಿ ನೆಹರೂ ಕುಟುಂಬದ ಬಗ್ಗೆ ಆಕ್ಷೇಪಾರ್ಹ ಮಾತುಗಳನ್ನಾಡಿದ್ದರು ಎಂಬ ಆರೋಪವಿದೆ.

ಈ ಕುರಿತಂತೆ ಕಾಂಗ್ರೆಸ್​ ಮುಖಂಡ, ಸಾಮಾಜಿಕ ಕಾರ್ಯಕರ್ತ ಚಾರ್ಮೇಶ್​ ಶರ್ಮಾ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಬುಂದಿಯ ಸದರ್​ ಠಾಣೆ ಪೊಲೀಸರು ಐಪಿಸಿ ಸೆಕ್ಷನ್​ 66, 67 ನಡಿ ತನಿಖೆ ನಡೆಸಿ, ಹೆಚ್ಚಿನ ವಿಚಾರಣೆಗಾಗಿ ನಟಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

ಬಂಧನದ ಬಳಿಕ ಟ್ವೀಟ್ ಮಾಡಿರುವ ಪಾಯಲ್, ನಾನು ಮೋತಿಲಾಲ್​ ನೆಹರೂ ವಿರುದ್ಧ ಮಾತನಾಡಿ ವಿಡಿಯೋ ಮಾಡಿದ್ದಕ್ಕೆ ನನ್ನನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ. ಆದರೆ ವಿಡಿಯೋದ ಎಲ್ಲಾ ಮಾಹಿತಿಗಳನ್ನು ಗೂಗಲ್​ನಿಂದಲೇ ಪಡೆದಿದ್ದು, ಹಾಗಾದರೆ ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯ ಸುಮ್ಮನೆ ತಮಾಷೆಗಾಗಿ ಇದೆಯೇ ಎಂದು ಪ್ರಧಾನಮಂತ್ರಿ ಸಚಿವಾಲಯ, ಗೃಹಸಚಿವಾಲಯವನ್ನು ಟ್ಯಾಗ್​ ಮಾಡಿ ಪ್ರಶ್ನಿಸಿದ್ದಾರೆ.

English summary
Former Bigg Boss reality TV contestant Payal Rohtagi on Sunday was arrested by the Rajasthan Police for making a video on Motilal Nehru, father of India's first Prime Minister Jawaharlal Nehru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X