ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದಯಪುರ ಟೈಲರ್‌ನ ಹಂತಕರಿಗೆ ಪಾಕ್‌ ಉಗ್ರಗಾಮಿ ಗುಂಪಿನ ಜೊತೆ ಸಂಪರ್ಕ?

|
Google Oneindia Kannada News

ಜೈಪುರ, ಜೂ.29: ಮಂಗಳವಾರ ರಾಜಸ್ಥಾನದ ಉದಯಪುರದಲ್ಲಿ ಕನ್ಹಯ್ಯಾ ಲಾಲ್ ಎಂಬ ಟೈಲರ್‌ನನ್ನು ಇಬ್ಬರು ವ್ಯಕ್ತಿಗಳು ಹತ್ಯೆ ಮಾಡಿದ್ದಾರೆ. ಈ ಭೀಕರ ಹತ್ಯೆಯು ಮರುಭೂಮಿ ರಾಜ್ಯ ರಾಜಸ್ತಾನದಲ್ಲಿ ಕೋಮು ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಹೀಗಾಗಿ ಅಲ್ಲಿ ಶಾಂತಿಯನ್ನು ಕಾಪಾಡಲು ಒಂದು ತಿಂಗಳ ಕಾಲ ನಿಷೇಧಾಜ್ಞೆಗಳನ್ನು ವಿಧಿಸಲಾಗಿದೆ.

Recommended Video

ಟೈಲರ್ ಶಿರಚ್ಛೇದ: ರಾಜಸ್ಥಾನದಲ್ಲಿ ನಿಷೇಧಾಜ್ಞೆ ಜಾರಿ, ಇಂಟರ್ನೆಟ್ ಸೇವೆ ಸ್ಥಗಿತ | *India | OneIndia Kannada

ಮೊಹಮ್ಮದ್ ರಿಯಾಜ್ ಮತ್ತು ಘೌಸ್ ಮೊಹಮ್ಮದ್ ಎಂದು ಗುರುತಿಸಲಾದ ಇಬ್ಬರು ವ್ಯಕ್ತಿಗಳು ಈ ಕೃತ್ಯ ಎಸಗಿದ್ದವರಾಗದ್ದಾರೆ. ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಟೈಲರ್‌ ಮಾಡಿದ್ದರು. ನಂತರ ಇಸ್ಲಾಂ ಧರ್ಮಕ್ಕೆ ಮಾಡಿದ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಬಿಜೆಪಿ ವಕ್ತಾರೆ ನೂಪೂರ್‌ ಶರ್ಮಾ ಪ್ರವಾದಿ ಮುಹಮ್ಮದ್ ಅವರ ಹೇಳಿಕೆಗಳಿಗಾಗಿ ಅಮಾನತಿನಲ್ಲಿದ್ದಾರೆ.

ಉದಯ್‌ಪುರ ಪ್ರಕರಣ: ಕನ್ಹಯ್ಯಾ ಲಾಲ್‌ ಅಂತಿಮ ಸಂಸ್ಕಾರಕ್ಕೆ ಜನಸ್ತೋಮ- ಬಿಗಿ ಭದ್ರತೆಉದಯ್‌ಪುರ ಪ್ರಕರಣ: ಕನ್ಹಯ್ಯಾ ಲಾಲ್‌ ಅಂತಿಮ ಸಂಸ್ಕಾರಕ್ಕೆ ಜನಸ್ತೋಮ- ಬಿಗಿ ಭದ್ರತೆ

ಅಪರಾಧವನ್ನು ಒಪ್ಪಿಕೊಳ್ಳುವ ವೀಡಿಯೊಗಳನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ನಂತರ ಬಂಧಿಸಲಾದ ಇಬ್ಬರೂ ಆರೋಪಿಗಳು ಪಾಕಿಸ್ತಾನ ಮೂಲದ ದಾವತ್-ಎ-ಇಸ್ಲಾಮಿನೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ತನಿಖಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಸುನ್ನಿ ಮುಸ್ಲಿಂ ಸಂಘಟನೆಯಾದ ದಾವತ್-ಎ-ಇಸ್ಲಾಮಿ ಪ್ರವಾದಿ ಮುಹಮ್ಮದ್ ಅವರ ಸಂದೇಶವನ್ನು ಪ್ರಚಾರ ಮಾಡುವ ಲಾಭರಹಿತ ಸಂಸ್ಥೆ ಎಂದು ಹೇಳಿಕೊಳ್ಳುತ್ತದೆ. ಇದು ಇಸ್ಲಾಮಿಕ್ ಅಧ್ಯಯನಗಳಲ್ಲಿ ಆನ್‌ಲೈನ್ ಕೋರ್ಸ್‌ಗಳನ್ನು ನೀಡುತ್ತದೆ ಮತ್ತು ದೂರದರ್ಶನ ಚಾನೆಲ್ ಅನ್ನು ಸಹ ನಡೆಸುತ್ತದೆ.

ದಾವತ್ ಎ ಇಸ್ಲಾಮಿಯನ್ನು ಮೌಲಾನಾ ಇಲ್ಯಾಸ್ ಅಟ್ಟಾರಿ ಎಂಬಾತ 1981ರಲ್ಲಿ ಪಾಕಿಸ್ತಾನದ ಕರಾಚಿಯಲ್ಲಿ ಸ್ಥಾಪಿಸಿದ್ದರು. ಅಂದಿನಿಂದ ಇದು ಪ್ರಪಂಚದಾದ್ಯಂತ ಸುಮಾರು 194 ದೇಶಗಳಿಗೆ ಹರಡಿತು. ಅದರ ಸಂಸ್ಥಾಪಕರ ಹೆಸರಿನ ಕಾರಣದಿಂದಾಗಿ ಸಂಸ್ಥೆಯೊಂದಿಗೆ ಸಂಬಂಧ ಹೊಂದಿರುವವರು ತಮ್ಮ ಹೆಸರುಗಳಿಗೆ ಅಟ್ಟಾರಿ ಅನ್ನು ಕೂಡ ಸೇರಿಸಿ ಹೇಳುವುದು ರೂಢಿಯಾಗಿದೆ. ಮುಖ್ಯವಾಗಿ ಉದಯಪುರ ಘಟನೆಯ ಆರೋಪಿಗಳಲ್ಲಿ ಒಬ್ಬರಾದ ಮೊಹಮ್ಮದ್ ರಿಯಾಜ್ ಅವರ ಹೆಸರಿನಲ್ಲಿ ಅಟ್ಟಾರಿ ಎಂಬ ಉಪನಾಮವನ್ನು ಸಹ ಬಳಸುವುದು ಕಂಡು ಬಂದಿದೆ.

 1989ರಲ್ಲಿ ಪಾಕಿಸ್ತಾನದಿಂದ ಉಲೇಮಾ ನಿಯೋಗ

1989ರಲ್ಲಿ ಪಾಕಿಸ್ತಾನದಿಂದ ಉಲೇಮಾ ನಿಯೋಗ

1989ರಲ್ಲಿ ಪಾಕಿಸ್ತಾನದಿಂದ ಉಲೇಮಾ (ವಿದ್ವಾಂಸರು) ನಿಯೋಗ ಭಾರತಕ್ಕೆ ಬಂದಿತು. ಚರ್ಚೆಗಳ ನಂತರ, ದಾವತ್-ಎ-ಇಸ್ಲಾಮಿ ಕೂಡ ದೆಹಲಿ ಮತ್ತು ಮುಂಬೈನಲ್ಲಿ ಅದರ ಕೇಂದ್ರ ಕಚೇರಿಯೊಂದಿಗೆ ಇಲ್ಲಿ ಸ್ಥಾಪಿಸಲಾಯಿತು ಎನ್ನಲಾಗಿದೆ. ಸಯದ್ ಆರಿಫ್ ಅಲಿ ಅಟ್ಟಾರಿಯ ಉನ್ನತ ಕಾರ್ಯನಿರ್ವಹಣಾಧಿಕಾರಿ, ಭಾರತದಲ್ಲಿ ಸಂಸ್ಥೆಯನ್ನು ಮತ್ತಷ್ಟು ವಿಸ್ತರಿಸಲು ಕೆಲಸ ಮಾಡುತ್ತಿದ್ದಾರೆ.

ರಾಜಸ್ಥಾನದಲ್ಲಿ ತಾಲಿಬಾನ್ ಶೈಲಿಯಲ್ಲಿ ಹತ್ಯೆ: ಭಯೋತ್ಪಾದನೆ ಪ್ರಕರಣವಾಗಿ ಪರಿಗಣಿಸಿದ ಕೇಂದ್ರ ಸರಕಾರರಾಜಸ್ಥಾನದಲ್ಲಿ ತಾಲಿಬಾನ್ ಶೈಲಿಯಲ್ಲಿ ಹತ್ಯೆ: ಭಯೋತ್ಪಾದನೆ ಪ್ರಕರಣವಾಗಿ ಪರಿಗಣಿಸಿದ ಕೇಂದ್ರ ಸರಕಾರ

 ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಮೆರವಣಿಗೆ

ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಮೆರವಣಿಗೆ

ದಾವತ್ ಎ ಇಸ್ಲಾಮಿ ತಬ್ಲೀಘಿ ಜಮಾತ್‌ನಂತೆ, ದಾವತ್-ಎ-ಇಸ್ಲಾಮಿ ಸದಸ್ಯರು ಇಸ್ಲಾಂ ಮತ್ತು ಪ್ರವಾದಿಯ ಸಂದೇಶವನ್ನು ಪ್ರಸಾರ ಮಾಡಲು ನಿರ್ದಿಷ್ಟ ದಿನಗಳಲ್ಲಿ ಪ್ರಯಾಣಿಸುತ್ತಾರೆ. ಬರವಾಫತ್ (ಪ್ರವಾದಿಯವರ ಜನ್ಮದಿನ) ಸಂದರ್ಭದಲ್ಲಿ ಸಂಘಟನೆಯು ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಮೆರವಣಿಗೆಗಳನ್ನು ಇದು ನಡೆಸುತ್ತದೆ.

 ಷರಿಯಾವನ್ನು ಪ್ರಚಾರ ಮುಖ್ಯ ಉದ್ದೇಶ

ಷರಿಯಾವನ್ನು ಪ್ರಚಾರ ಮುಖ್ಯ ಉದ್ದೇಶ

ಭಾರತದಲ್ಲಿ ತನ್ನ ಮೂರು ದಶಕಗಳ ಸುದೀರ್ಘ ದಾಖಲೆಯಲ್ಲಿ ದಾವತ್ ಎ ಇಸ್ಲಾಮಿ ಹಲವಾರು ಸಂದರ್ಭಗಳಲ್ಲಿ ಧಾರ್ಮಿಕ ಮತಾಂತರದ ಆರೋಪವನ್ನು ಎದುರಿಸುತ್ತಿದೆ. ಷರಿಯಾವನ್ನು ಪ್ರಚಾರ ಮಾಡುವುದು ಇದರ ಮುಖ್ಯ ಉದ್ದೇಶವಾಗಿರುವುದರಿಂದ ಸಂಸ್ಥೆಯು ಆನ್‌ಲೈನ್‌ನಲ್ಲಿ ತೆಗೆದುಕೊಳ್ಳಬಹುದಾದ 32 ಇಸ್ಲಾಮಿಕ್ ಕೋರ್ಸ್‌ಗಳನ್ನು ನಡೆಸುತ್ತದೆ.

 ಮೂಲಭೂತವಾದಿಗಳನ್ನಾಗಿಸಲು ವಿಶೇಷ ತರಬೇತಿ

ಮೂಲಭೂತವಾದಿಗಳನ್ನಾಗಿಸಲು ವಿಶೇಷ ತರಬೇತಿ

ದಾವತ್ ಎ ಇಸ್ಲಾಮಿಯು ದಾವಾ (ಇಸ್ಲಾಂಗೆ ಆಹ್ವಾನ), ಆನ್‌ಲೈನ್ ಕೋರ್ಸ್‌ಗಳ ಮೂಲಕ ಜನರನ್ನು ಮತಾಂತರ ಮಾಡಲು ಮತ್ತು ಮೂಲಭೂತವಾದಿಗಳನ್ನಾಗಿಸಲು ವಿಶೇಷ ತರಬೇತಿಯನ್ನು ನೀಡುತ್ತದೆ. ಬಲ್ಲ ಮೂಲಗಳ ಪ್ರಕಾರ ಇಬ್ಬರು ಆರೋಪಿಗಳನ್ನು ಸಂಘಟನೆಯು ಕಠಿಣ ಇಸ್ಲಾಮಿಸಂಗೆ ಪ್ರೇರೇಪಿಸಿದೆಯೇ ಎಂದು ತನಿಖಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಹತ್ಯೆಯ ನಂತರ ಇಬ್ಬರೂ ಆರೋಪಿಗಳು ಅಜ್ಮೀರ್ ಷರೀಫ್‌ಗೆ ತೆರಳುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ರಾಜಸ್ಥಾನ ಪೊಲೀಸ್‌ನ ಎಸ್‌ಐಟಿ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ ಇದೀಗ ಉಗ್ರರ ಜಾಲದ ಭಾಗವೇ ಎಂಬುದನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದೆ.

English summary
Kanhaiya Lal, a Udaipur tailor was killed by two men in Udaipur Rajasthan on Tuesday. This horrific murder has heightened communal tensions in the desert state of Rajasthan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X