ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಹನದ ಮೇಲೆ ಜಾತಿ, ಧರ್ಮ ಸೂಚಕ ಸ್ಟಿಕರ್ ಇದ್ದರೆ ದಂಡ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 05: ವಾಹನಗಳ ಮೇಲೆ 'ಗೌಡ್ರ ಗೂಳಿ', 'ಕುಂತರೆ ಕುರುಬ, ನಿಂತರೆ ಕಿರುಬ', 'ತಿಗಳರ ಹುಡ್ಗ' ಇನ್ನೂ ಹಲವು ರೀತಿಯ ಜಾತಿ ಸೂಚಕ ಸ್ಟಿಟಕರ್‌ಗಳನ್ನು ಅಂಟಿಸಿಕೊಂಡಿರುವುದು ಸಾಮಾನ್ಯವಾಗಿ ಕಾಣುತ್ತದೆ ಆದರೆ ಇನ್ನು ಮುಂದೆ ಹೀಗೆ ಜಾತಿ ಸೂಚಕ ಸ್ಟಿಕರ್‌ಗಳನ್ನು ಅಂಟಿಸಿಕೊಳ್ಳುವುದಕ್ಕೆ ಬ್ರೇಕ್ ಬೀಳಲಿದೆ.

ಹೌದು, ಇನ್ನು ಮುಂದೆ ಕಾರು, ಬೈಕ್‌ ಗಳು ಸೇರಿದಂತೆ ಎಲ್ಲ ವಾಹನಗಳ ಮೇಲೆ ಜಾತಿ, ಧರ್ಮ ಸೂಚಕ ಸ್ಟಿಕರ್‌ಗಳನ್ನು ಹಾಕಿಕೊಳ್ಳುವುದನ್ನು ನಿಷೇಧಿಸುವ ಸಾಧ್ಯತೆ ಇದೆ. ಈಗಾಗಲೇ ರಾಜಸ್ಥಾನ ರಾಜ್ಯದಲ್ಲಿ ಇದು ಜಾರಿಗೆ ಬಂದಿದೆ.

ಡೀಸೆಲ್, ಪೆಟ್ರೋಲ್ ವಾಹನ ರದ್ದು ಮಾಡಲ್ಲ: ಕೇಂದ್ರ ಸಚಿವ ನಿತಿನ್ ಗಡ್ಕರಿಡೀಸೆಲ್, ಪೆಟ್ರೋಲ್ ವಾಹನ ರದ್ದು ಮಾಡಲ್ಲ: ಕೇಂದ್ರ ಸಚಿವ ನಿತಿನ್ ಗಡ್ಕರಿ

ರಾಜಸ್ಥಾನದಲ್ಲಿ, ಜಾತಿ, ಧರ್ಮ ಸೂಚಕ ಸ್ಟಿಕರ್‌ಗಳು ಮಾತ್ರವಲ್ಲದೆ, ವೃತ್ತಿ ಸೂಚಕ, ರಾಜಕೀಯ ಪಕ್ಷದ ಜೊತೆ ಸಂಬಂಧ ಗುರುತಿಸುವಂತಹಾ ಸ್ಟಿಕ್ಕರ್‌ಗಳನ್ನು ಸಹ ಹಾಕಿಕೊಳ್ಳುವಂತಿಲ್ಲ. ಸ್ಟಿಕ್ಕರ್‌ಗಳು ಹಾಕಿಕೊಂಡರೆ ದಂಡ ಕಟ್ಟುವ ಜೊತೆಗೆ ಸ್ಟಿಕ್ಕರ್ ಗಳನ್ನು ಕಿತ್ತು ಹಾಕಲಾಗುತ್ತದೆ.

No Caste or Religious Stickers On Vehicles

ಪ್ರಸ್ತುತ ರಾಜಸ್ಥಾನ ಸರ್ಕಾರ ಮಾತ್ರವೇ ಈ ನಿಯಮವನ್ನು ಜಾರಿಗೆ ತಂದಿದ್ದು, ದೇಶದಾದ್ಯಂತ ನಿಯಮ ಜಾರಿಗೆ ತರುವ ಸಾಧ್ಯತೆ ಇದೆ.

"ನಿತಿನ್ ಗಡ್ಕರಿ ಹೆಲ್ಮೆಟ್ ಇಲ್ದೆ ಗಾಡಿ ಓಡಿಸಿದ್ದಕ್ಕೆ ಫೈನ್ ಎಷ್ಟು?"

ನಿಯಮ ಜಾರಿಗೆ ಬಂದರೆ ಜಾತಿ ಸೂಚಕ, ಧರ್ಮ ಸೂಚಕ ಸ್ಟಿಕ್ಕರ್‌ಗಳನ್ನು ವಾಹನಗಳಿಂದ ತೆಗೆಯಬೇಕಾಗಿರುತ್ತದೆ. ವೀರಾಂಜನೇಯ ಸ್ಟಿಕ್ಕರ್‌ಗಳು ಧರ್ಮ ಸೂಚಕದ ಸ್ಟಿಕ್ಕರ್‌ಗಳ ವ್ಯಾಪ್ತಿಗೆ ಒಳಪಡುತ್ತದೆಯೋ ಎಂಬುದು ಕಾದು ನೋಡಬೇಕಿದೆ.

English summary
No Caste or Religious Stickers on Vehicles new rules in Rajastan. This rules may apply all over the India in future.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X