ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿರಾಜ್ ಯಶಸ್ವಿ ಕಾರ್ಯಾಚರಣೆ ಸ್ಮರಿಸಲು ಮಗುವಿಗೆ ಅದೇ ಹೆಸರಿಟ್ರು

|
Google Oneindia Kannada News

Recommended Video

Surgical Strike 2 : ಮಿರಾಜ್ ಯಶಸ್ವಿ ಕಾರ್ಯಾಚರಣೆ ಸ್ಮರಿಸಲು ಮಗುವಿಗೆ ಅದೇ ಹೆಸರಿಟ್ರು..! | Oneindia Kannada

ಜೈಪುರ, ಫೆಬ್ರವರಿ 28: ಪುಲ್ವಾಮಾದಲ್ಲಿ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಸೇನೆ ನಡೆಸಿದ ವೈಮಾನಿಕ ದಾಳಿಗೆ ಎಲ್ಲೆಡೆಯಿಂದ ಪ್ರಶಂಸೆಗಳು ಕೇಳಿ ಬಂದಿವೆ. ಜೈಷೆ ಉಗ್ರರ ಮೂರು ಅಡಗುತಾಣಗಳನ್ನು ಧ್ವಂಸಗೊಳಿಸಲು ಬಳಸಿದ ಮಿರಾಜ್ ಯುದ್ಧ ವಿಮಾನ ಈಗ ಮಗುವಿನ ಹೆಸರಾಗಿದೆ.

ಮಂಗಳವಾರ ಬೆಳಗ್ಗೆ 3 ಗಂಟೆಯಿಂದ 21 ನಿಮಿಷಗಳ 12ಕ್ಕೂ ಅಧಿಕ ಮಿರಾಜ್ ಯುದ್ಧ ವಿಮಾನಗಳು ನಡೆಸಿದ ಕಾರ್ಯಾಚರಣೆಯನ್ನು ಅವಿಸ್ಮರಣೀಯವಾಗಿಸುವ ನಿಟ್ಟಿನಲ್ಲಿ ರಾಜಸ್ಥಾನದ ದಂಪತಿಗಳು ಅಂದು ಜನಿಸಿದ ತಮ್ಮ ಮಗುವಿಗೆ 'ಮಿರಾಜ್' ಎಂದು ಹೆಸರಿಟ್ಟಿದ್ದಾರೆ.

ಉಗ್ರರ ಮೇಲಿನ ದಾಳಿಗೆ ಎಂಥ ಸಿದ್ಧತೆ, ಎಂಥೆಂಥ ವಿಮಾನ, ಅದೆಂಥ ತಂತ್ರಜ್ಞಾನ?ಉಗ್ರರ ಮೇಲಿನ ದಾಳಿಗೆ ಎಂಥ ಸಿದ್ಧತೆ, ಎಂಥೆಂಥ ವಿಮಾನ, ಅದೆಂಥ ತಂತ್ರಜ್ಞಾನ?

ಪಾಕ್ ಆಕ್ರಮಿತ ಕಾಶ್ಮೀರದ ಬಾಲಕೋಟ್, ಗಡಿ ನಿಯಂತ್ರಣ ರೇಖೆ ಬಳಿ ಇರುವ ಮುಜಾಫರ್ ಬಾದ್ ಹಾಗೂ ಚಕೋತಿಯಲ್ಲಿದ್ದ ಜೈಷೆ ಉಗ್ರರ ನೆಲೆಯನ್ನು ಧ್ವಂಸಗೊಳಿಸಿದ್ದು ಮಿರಾಜ್ ಯುದ್ಧ ವಿಮಾನದಿಂದ ಹಾಕಿದ ಭಾರಿ ಗಾತ್ರದ ಬಾಂಬ್. ಆ ಬಾಂಬ್ ಸುಮಾರು 7 ಎಕರೆ ಅಧಿಕ ಪ್ರದೇಶ ಸುಟ್ಟು ಬೂದಿ ಮಾಡಿತ್ತು. ಮಿರಾಜ್​ನ ಶಕ್ತಿ, ಪರಾಕ್ರಮಗಳು ವಿಶ್ವದೆಲ್ಲೆಡೆ ಪ್ರಶಂಸೆಗೊಳಗಾಗಿದೆ.

Newborn named Miraj to eternise Balakot bombing by Mirage 2000

ಉಗ್ರರ ಕ್ಯಾಂಪ್ ಧ್ವಂಸಗೊಂಡ ಕೆಲ ಹೊತ್ತಿನಲ್ಲೇ ರಾಜಸ್ಥಾನದ ನಾಗೌರದ ದಡ್ಬ್ರಾಗ್ರಾಮದ ಮಹಾವೀರ್​ ಸಿಂಗ್​ಹಾಗೂ ಸೋನಂ ಕನ್ವರ್ ಅವರಿಗೆ ಗಂಡು ಮಗು ಜನಿಸಿದೆ. ಮಗುವಿಗೆ ಮಿರಾಕಜ್ ಸಿಂಗ್ ರಾಥೋರ್ ಎಂದು ಹೆಸರಿಟ್ಟಿದ್ದಾರೆ.

ದಿನದ ಮುಖ್ಯ ಸುದ್ದಿ: ಭಾರತದ ಪ್ರತೀಕಾರ ಹೇಗಿತ್ತು? ಪಾಕ್ ಪ್ರತಿಕ್ರಿಯೆ ಹೇಗಿತ್ತು?ದಿನದ ಮುಖ್ಯ ಸುದ್ದಿ: ಭಾರತದ ಪ್ರತೀಕಾರ ಹೇಗಿತ್ತು? ಪಾಕ್ ಪ್ರತಿಕ್ರಿಯೆ ಹೇಗಿತ್ತು?

ಮಹಾವೀರ್​ಸಿಂಗ್ ಅವರ ಸೋದರರಿಬ್ಬರು ಸೇನಾ ಸೇವೆಯಲ್ಲಿದ್ದಾರೆ. ಸೋದರ ಭೂಪೇಂದ್ರ ಸಿಂಗ್​ ಭಾರತೀಯ ವಾಯುಪಡೆಯಲ್ಲಿದ್ದರೆ. ಮತೊಬ್ಬರು ಶ್ರವಣಸಿಂಗ್ ಸಹ ಭೂಸೇನೆಯಲ್ಲಿದ್ದವರು. ಭಾರತದ ಯುದ್ಧ ವಿಮಾನ ತೋರಿದ ಪರಾಕ್ರಮವನ್ನು ಸ್ಮರಣೀಯವಾಗಿಸಲು ಮಗುವಿಗೆ ಮಿರಾಜ್ ಹೆಸರಿಟ್ಟಿರುವುದಾಗಿ ಹೇಳಿದ್ದಾರೆ.

English summary
Indian fighter jets Mirage 2000, which pounded a JeM terror facility at Balakot in Khyber Pakhtunkhwa province of Pakistan was eternised by a village family here, which named a newborn baby after the lethal jet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X