ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಲಪಂಥೀಯ ಸಂಘಟನೆಗಳ ವಿರೋಧ: ನಾಸಿರುದ್ದೀನ್ ಶಾ ಕಾರ್ಯಕ್ರಮ ರದ್ದು

|
Google Oneindia Kannada News

ಅಜ್ಮೀರ್, ಡಿಸೆಂಬರ್ 21: ರಾಜಸ್ಥಾನದ ಅಜ್ಮೀರ್‌ದಲ್ಲಿ ಹಿರಿಯ ನಟ ನಾಸಿರುದ್ದೀನ್ ಶಾ ಪ್ರಮುಖ ಭಾಷಣ ಮಾಡಬೇಕಿದ್ದ ಸಾಹಿತ್ಯ ಉತ್ಸವ ಕಾರ್ಯಕ್ರಮವನ್ನು ಬಲಪಂಥೀಯ ಸಂಘಟನೆಗಳ ಭಾರಿ ವಿರೋಧದ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದೆ.

ಬುಲಂದ್ ಶಹರ್ ಪ್ರಕರಣ: ಉನ್ನತ ಪೊಲೀಸ್ ಅಧಿಕಾರಿ ವರ್ಗಾವಣೆಬುಲಂದ್ ಶಹರ್ ಪ್ರಕರಣ: ಉನ್ನತ ಪೊಲೀಸ್ ಅಧಿಕಾರಿ ವರ್ಗಾವಣೆ

ಭಾರತೀಯ ಜನತಾ ಯುವ ಮೋರ್ಚಾ ಮತ್ತು ಇತರೆ ಬಲಪಂಥೀಯ ಸಂಘಟನೆಗಳು ಉತ್ಸವ ನಡೆಸುವ ಸ್ಥಳದಲ್ಲಿ ನಾಸಿರುದ್ದೀನ್ ಶಾ ವಿರುದ್ಧ ಘೋಷಣೆಗಳನ್ನು ಕೂಗಿದರು. ನಾಸಿರುದ್ದೀನ್ ಹಾಗೂ ಸ್ಥಳದ ಭದ್ರತೆ ಮತ್ತು ಸುರಕ್ಷತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ಅಜ್ಮೀರದ ಜನರ ಭಾವನೆಗಳಿಗೂ ಗೌರವ ನೀಡಲಾಗಿದೆ ಎಂದು ಸಾಹಿತ್ಯ ಸಮಿತಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.

ಬುಲಂದ್ ಶಹರ್ ಪೊಲೀಸ್ ಅಧಿಕಾರಿ ಹತ್ಯೆ ಕೇಸ್: ಶಂಕಿತನ ಬಂಧನ ಬುಲಂದ್ ಶಹರ್ ಪೊಲೀಸ್ ಅಧಿಕಾರಿ ಹತ್ಯೆ ಕೇಸ್: ಶಂಕಿತನ ಬಂಧನ

ಉತ್ತರ ಪ್ರದೇಶದ ಬುಲಂದ್ ಶಹರ್‌ನಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ನಾಸಿರುದ್ದೀನ್ ಶಾ ನೀಡಿದ ಹೇಳಿಕೆ ಬಲಪಂಥೀಯರಲ್ಲಿ ಆಕ್ರೋಶ ಮೂಡಿಸಿತ್ತು.

naseeruddin shahs ajmer literature event cancelled after right wing protest

ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಾಸಿರುದ್ದೀನ್, ಪೊಲೀಸ್ ವ್ಯಕ್ತಿಯ ಪ್ರಾಣಕ್ಕಿಂತಲೂ ನಮ್ಮ ದೇಶದಲ್ಲಿ ಹಸುಗಳ ಸಾವಿಗೆ ಹೆಚ್ಚು ಮಾನ್ಯತೆ ನೀಡಲಾಗುತ್ತಿದೆ ಎಂದಿದ್ದರು.

English summary
An event at Literature Festival in Ajmer was cancelled amid protest by right wing goups. The event was to attended by Senior actor Naseeruddin Shah where he was to deliver a keynote.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X