ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಸ್ಥಾನ ಸಮಾವೇಶದಲ್ಲಿ ಕರ್ನಾಟಕ ಸಿಎಂ ಹೇಳಿಕೆ ಖಂಡಿಸಿದ ಮೋದಿ

|
Google Oneindia Kannada News

Recommended Video

ಸೇನೆ ಬಗ್ಗೆ ಎಚ್ ಡಿ ಕುಮಾರಸ್ವಾಮಿ ಕೊಟ್ಟ ಹೇಳಿಕೆಯನ್ನ ಖಂಡಿಸಿದ ನರೇಂದ್ರ ಮೋದಿ |Oneindia Kannada

ಜೋಧ್‌ಪುರ, ಏಪ್ರಿಲ್ 22: ರಾಜಸ್ಥಾನದ ಜೋಧಪುರದಲ್ಲಿ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆಯೊಂದನ್ನು ಉಲ್ಲೇಖ ಮಾಡಿ ಕಾಂಗ್ರೆಸ್ ಮನಸ್ಥಿತಿಯನ್ನು ಟೀಕಿಸಿದ್ದಾರೆ.

ಸಮಾವೇಶದಲ್ಲಿ ಮಾತನಾಡಿದ ನರೇಂದ್ರ ಮೋದಿ, ಊಟಕ್ಕೆ ಗತಿಯಿಲ್ಲದವರು ಸೈನ್ಯಕ್ಕೆ ಸೇರುತ್ತಾರೆ, ಬಡತನವೇ ಸೇನೆಗೆ ಸೇರಲು ಕಾರಣ ಎಂದು ಕರ್ನಾಟಕದ ಸಿಎಂ ಹೇಳುತ್ತಾರೆ, ಅವರಿಗೆ ಕಾಂಗ್ರೆಸ್ ಬೆಂಬಲ ನೀಡಿದೆ ಎಂದು ಅವರು ಹೇಳಿದ್ದಾರೆ.

Narendra Modi condemn Karnataka CM statement about soldiers

ಅವರು ಎರಡು ಹೊತ್ತಿನ ಊಟ ಮಾಡಲು ಸೈನ್ಯಕ್ಕೆ ಸೇರುವುದಿಲ್ಲ, ವೀರತ್ವದಿಂದ ಹೋರಾಡಿ ಎದೆಗೆ ಗುಂಡು ಹೊಡೆಸಿಕೊಳ್ಳಲು ಸೇನೆಗೆ ಸೇರುತ್ತಾರೆ ಎಂಬುದು ಕಾಂಗ್ರೆಸ್ ನಾಯಕರಿಗೆ ಗೊತ್ತಿಲ್ಲ ಎಂದು ಮೋದಿ ವಾಗ್ದಾಳಿ ಮಾಡಿದ್ದಾರೆ.

ಮೋದಿ ಹೆಸರಲ್ಲಿ ಮತಯಾಚನೆ ಭವಿಷ್ಯದಲ್ಲಿ ಅಪಾಯಕಾರಿ: ಕಲ್ಲಡ್ಕಮೋದಿ ಹೆಸರಲ್ಲಿ ಮತಯಾಚನೆ ಭವಿಷ್ಯದಲ್ಲಿ ಅಪಾಯಕಾರಿ: ಕಲ್ಲಡ್ಕ

ಇದು ಕೇವಲ ಮುನಿಸಿಪಾಲಿಟಿ ಚುನಾವಣೆ ಅಲ್ಲ ಇದು ದೇಶಕ್ಕೆ ಹಾಗೂ ಅದರ ಭದ್ರತೆಗೆ ಸಂಬಂಧಿಸಿದ ಚುನಾವಣೆ, ದೇಶಕ್ಕೆ ಭದ್ರತೆ ನೀಡುವ ಬಿಜೆಪಿಗೆ ಮತ ನೀಡಿ ಎಂದು ಅವರು ಕರೆ ನೀಡಿದರು.

ಸಾಧ್ವಿ ಪ್ರಗ್ಯಾಗೆ ಟಿಕೆಟ್ ಕೊಟ್ಟಿದ್ದು ಏಕೆ?: ಪ್ರಧಾನಿ ಮೋದಿ ನೀಡಿದ ವಿವರಣೆಸಾಧ್ವಿ ಪ್ರಗ್ಯಾಗೆ ಟಿಕೆಟ್ ಕೊಟ್ಟಿದ್ದು ಏಕೆ?: ಪ್ರಧಾನಿ ಮೋದಿ ನೀಡಿದ ವಿವರಣೆ

ಕಾಂಗ್ರೆಸ್‌ನ 60 ವರ್ಷದ ಸಾಧನೆಯನ್ನು ಟೀಕಿಸಿದ ಅವರು, ಕಾಂಗ್ರೆಸ್ ಪಕ್ಷ ಇಷ್ಟು ವರ್ಷ ಆಡಳಿತ ನಡೆಸಿದ್ದರೂ ಸಹ ಈಗಲೂ ಬಡತನ ನಿರ್ಮೂಲನೆಯ ಮಾತನ್ನಾಡುತ್ತಿದೆ ಅದಕ್ಕೆ ನಿಜವಾಗಿಯೂ ಬಡಜನರ ಬಗ್ಗೆ ಕಾಳಜಿ ಇದ್ದಿದ್ದರೆ ಅವರಿಗಾಗಿ ಇಷ್ಟು ವರ್ಷ ಏನನ್ನೂ ಏಕೆ ಮಾಡಲಿಲ್ಲ ಎಂದು ಅವರು ಪ್ರಶ್ನಿಸಿದರು.

English summary
Narendra Modi condemn Karnataka CM HD Kumaraswamy's statement about soldiers in Rajastan rally today. He said 'Kumaraswamy said people join Army to earn food'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X