ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದೂ ವ್ಯಕ್ತಿಯ ಅಂತ್ಯಕ್ರಿಯೆಗೆ ಹೆಗಲು ಕೊಟ್ಟ ಮುಸ್ಲಿಂ ಬಾಂಧವರು

|
Google Oneindia Kannada News

ಜೈಪುರ, ಏಪ್ರಿಲ್.14: ವಿಶ್ವದ ಉದ್ದಗಲಕ್ಕೂ ವ್ಯಾಪಿಸಿದ ಕೊರೊನಾ ವೈರಸ್ ಮಹಾಮಾರಿ ಭಾರತದ ಪಾಲಿಗೂ ದೊಡ್ಡ ಸವಾಲಾಗಿ ಪರಿಣಮಿಸಿದೆ. ಮಾರಕ ಸೋಂಕು ಜನರಲ್ಲಿ ಮಾನವೀಯತೆ ಮತ್ತು ಸಹಾಯ, ಸಹಕಾರ ಮನೋಭಾವವನ್ನು ಹೆಚ್ಚಿಸುತ್ತದೆ. ಈ ಮಾತಿಗೆ ಸಾಕ್ಷಿ ಎನ್ನುವಂತಾ ಘಟನೆಯೊಂದು ರಾಜಸ್ಥಾನದಲ್ಲಿ ನಡೆದಿದೆ.

Recommended Video

ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟ ಕಮಿಷನರ್ ಭಾಸ್ಕರ್ ರಾವ್ | Bhaskar Rao | Bengaluru | Oneindia kannada

ರಾಜಸ್ಥಾನದ ಜೈಪುರ್ ನಲ್ಲಿ ಕ್ಯಾನ್ಸರ್ ನಿಂದ ಪ್ರಾಣ ಬಿಟ್ಟ ಹಿಂದೂ ವ್ಯಕ್ತಿಯ ಅಂತ್ಯಕ್ರಿಯೆಯನ್ನು ಮನೆಯ ಸುತ್ತಮುತ್ತಲಿದ್ದ ಮುಸ್ಲಿಂ ಬಾಂಧವರು ಮುಂದೆ ನಿಂತು ನೆರವೇರಿಸುವ ಮೂಲಕ ಮಾನವೀಯತೆ ಮರೆದಿದ್ದಾರೆ.

ಸಾಲ ಪರಿಹಾರ ಕೊಡಿ ಪ್ಲೀಸ್: ವಿಶ್ವದ ಎದುರು ಕೈವೊಡ್ಡಿದ ಪಾಕಿಸ್ತಾನ ಸಾಲ ಪರಿಹಾರ ಕೊಡಿ ಪ್ಲೀಸ್: ವಿಶ್ವದ ಎದುರು ಕೈವೊಡ್ಡಿದ ಪಾಕಿಸ್ತಾನ

ಜೈಪುರ್ ನ ಭಜರಂಗ್ ನಗರ್ ಭಟ್ಟಾ ಬಸ್ತಿ ಪ್ರದೇಶದಲ್ಲಿ ವಾಸವಾಗಿದ್ದ ರಾಜೇಂದ್ರ ಎಂಬುವವರು ಮಾರಕ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದರು. ಸೋಮವಾರ ಈ ವ್ಯಕ್ತಿ ಮೃತಪಟ್ಟಿದ್ದು ನೆರೆಹೊರೆಯಲ್ಲಿದ್ದ ಮುಸ್ಲಿಂ ಬಾಂಧವರೇ ಮುಂದೆ ನಿಂತು ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

Muslim Neighbours Help To Last Rights For Hindu Man During Lockdown In Rajastan

ಗಂಡು ದಿಕ್ಕಿಲ್ಲದ ಮನೆಗೆ ನೆರೆಹೊರೆಯವರ ಹೆಗಲು:

ಗಂಡು ಮಕ್ಕಳು ಇಲ್ಲದ ಮೃತ ರಾಜೇಂದ್ರ ನಿವಾಸದ ಸುತ್ತಮುತ್ತಲಿನಲ್ಲೂ ಯಾರೊಬ್ಬ ಹಿಂದೂಗಳೂ ಇರಲಿಲ್ಲ. ಭಾರತ ಲಾಕ್ ಡೌನ್ ನಿಂದ ಸಂಬಂಧಿಕರು ಕೂಡಾ ಜೈಪುರ್ ಗೆ ತೆರಳಲು ಆಗುತ್ತಿರಲಿಲ್ಲ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ನೆರೆಹೊರೆಯಲ್ಲಿದ್ದ ಮುಸ್ಲಿಂ ಬಾಂಧವರೇ ಸೇರಿಕೊಂಡು ಹಿಂದೂ ಧರ್ಮದ ಪ್ರಕಾರ ರಾಜೇಂದ್ರ ಅವರ ಅಂತ್ಯ ಸಂಸ್ಕಾರವನ್ನು ನೆರವೇರಿಸುವ ಮೂಲಕ ಬಡ ಕುಟುಂಬಕ್ಕೆ ಹೆಗಲು ಕೊಟ್ಟು ನಿಂತಿದ್ದಾರೆ.

English summary
Muslim Neighbours Help To Last Rights For Hindu Man During Lockdown In Rajastan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X