ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

18 ತಿಂಗಳ ಮಗುವಿನಲ್ಲಿ ಬ್ಲ್ಯಾಕ್ ಫಂಗಸ್, ಮಕ್ಕಳಲ್ಲಿ ಮೊದಲ ಪ್ರಕರಣ

|
Google Oneindia Kannada News

ನವದೆಹಲಿ, ಮೇ 27: ದೇಶದಲ್ಲಿ ಕೊರೊನಾ ಸೋಂಕಿನಷ್ಟೇ ಕಪ್ಪು ಶಿಲೀಂಧ್ರ ಸೋಂಕು ಕೂಡ ಅಷ್ಟೇ ಆತಂಕವನ್ನು ಸೃಷ್ಟಿಸಿದೆ. ಆದರೆ ಮಗುವಿನಲ್ಲಿ ಮೊದಲ ಬಾರಿಗೆ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದ್ದು, ಮತ್ತಷ್ಟು ಆತಂಕ ಸೃಷ್ಟಿಯಾಗಿದೆ.

ರಾಜಸ್ಥಾನದ ಬಿಕಾನೇರ್‌ನಲ್ಲಿ 18 ತಿಂಗಳ ಮಗುವಿಗೆ ಅಪಾಯಕಾರಿ ಬ್ಲ್ಯಾಕ್ ಫಂಗಸ್ ಸೋಂಕು ತಗುಲಿದೆ, ಮಕ್ಕಳಲ್ಲಿ ಈ ಸೋಂಕು ತಗುಲಿದ ಮೊದಲ ಪ್ರಕರಣ ಇದಾಗಿದೆ.

Yellow Fungus : ಬ್ಲ್ಯಾಕ್‌, ವೈಟ್‌ ಬಳಿಕ ಕಾಣಿಸಿಕೊಂಡಿದೆ ಎಲ್ಲೋ ಫಂಗಸ್‌- ಇಲ್ಲಿದೆ ಬಹುಮುಖ್ಯ ಮಾಹಿತಿ Yellow Fungus : ಬ್ಲ್ಯಾಕ್‌, ವೈಟ್‌ ಬಳಿಕ ಕಾಣಿಸಿಕೊಂಡಿದೆ ಎಲ್ಲೋ ಫಂಗಸ್‌- ಇಲ್ಲಿದೆ ಬಹುಮುಖ್ಯ ಮಾಹಿತಿ

ಕೊರೊನಾ ಪ್ರಕರಣಗಳ ಜತೆಗೆ ಭಾರತದಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಕೊರೊನಾದಿಂದ ಗುಣಮುಖರಾದವರಲ್ಲಿ, ಸ್ಟೀರಾಯ್ಡ್ ಚಿಕಿತ್ಸೆ ಪಡೆದವರಲ್ಲಿ ಹೆಚ್ಚು ಕಂಡುಬರುತ್ತಿದ್ದು, ವೈದ್ಯಲೋಕಕ್ಕೆ ಸವಾಲೆಸೆದಿದೆ.

Mucormycosis:19 Month Old Child Infected With Black Fungus

ಕೊರೊನಾ, ಮಧುಮೇಹ, ಕಿಡ್ನಿ ಸಮಸ್ಯೆ, ಹೃದಯ ಅಥವಾ ಲಿವರ್ ಸಂಬಂಧಿಮತ್ತು ವಯೋಸಹಜ ಆರೋಗ್ಯ ಸಮಸ್ಯೆ ಹಾಗೂ ಸಂಧಿವಾತದಂತಹ ಸ್ವಯಂ-ಪ್ರತಿರಕ್ಷಣಾ ಕಾಯಿಲೆಗಳಿಗೆ ಔಷಧಗಳನ್ನು ಹೊಂದಿರುವ ಮತ್ತು ಇಮ್ಯುನಿಟಿ ಕಡಿಮೆ ಇರುವವರಿಗೆ ಸೋಂಕು ಬೇಗ ತಗುಲುತ್ತದೆ.

ಪಂಗಸ್ ಕಣ್ಣಿಗೆ ಹರಡಿದರೆ ಕಣ್ಣು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ, ಇದೀಗ 18 ತಿಂಗಳ ಮಗುವಿನಲ್ಲಿ ಸೋಂಕು ಕಾಣಿಸಿಕೊಂಡಿರುವುದು ಆಘಾತದ ಜತೆಗೆ ಆತಂಕವನ್ನು ಉಂಟು ಮಾಡಿದೆ, ಮಗುವಿಗೆ ಚಿಕಿತ್ಸೆ ಮುಂದುವರೆದಿದೆ.

ಮೂಗಿನಿಂದ ಹರಡುವ ಈ ಫಂಗಸ್ ಕಣ್ಣುಗಳು ಸೇರಿದಂತೆ ಮೆದುಳಿಗೂ ಕೂಡ ಘಾಸಿ ಮಾಡುತ್ತದೆ. ಇಂತಹ ರೋಗಿಗಳಿಗೆ ಪ್ರತಿರಕ್ಷೆಯ ಸ್ಟೀರಾಯ್ಡ್‌ಗಳನ್ನು ನೀಡಿದ ಬಳಿಕಿಮ್ಯುನಿಟಿ ಮತ್ತಷ್ಟು ದುರ್ಬಲಗೊಳ್ಳುತ್ತದೆ. ಇದು ಬ್ಲ್ಯಾಕ್ ಫಂಗಸ್ ಹರಡಲು ಕಾರಣವಾಗುತ್ತದೆ.

English summary
An 18-month-old child was infected with Mucormycosis or black fungus in Rajasthan’s Bikaner. This is the first reported case of black fungus in infants. India is witnessing a spike in Mucormycosis, a very rare phenomenon, now appearing as a post-COVID-19 complication.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X