• search
  • Live TV
ಜೈಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜೈಪುರ; ಬಿಜೆಪಿ ಶಾಸಕಿ ಕೋವಿಡ್‌ಗೆ ಬಲಿ

|

ಜೈಪುರ, ನವೆಂಬರ್ 30 : ರಾಜಸ್ಥಾನದ ಬಿಜೆಪಿ ನಾಯಕಿ ಮತ್ತು ಶಾಸಕಿ ಕಿರಣ್ ಮಹೇಶ್ವರಿ ಮೃತಪಟ್ಟಿದ್ದಾರೆ. ಕೋವಿಡ್ ಪಾಸಿಟಿವ್ ಬಂದ ಬಳಿಕ ಅವರು ಹರ್ಯಾಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ರಾಜಸ್ಥಾನದ ರಾಜ್‌ಸಮಂಧ್ ಕ್ಷೇತ್ರದ ಬಿಜೆಪಿ ಶಾಸಕಿ ಕಿರಣ್ ಮಹೇಶ್ವರಿ ಸೋಮವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಗುರುಗಾಂವ್‌ ಸಮೀಪದ ಮೇದಾಂತ ಆಸ್ಪತ್ರೆಗೆ ಅವರನ್ನು ದಾಖಲು ಮಾಡಲಾಗಿತ್ತು.

ಭಾರತ; 24 ಗಂಟೆಯಲ್ಲಿ 41,810 ಕೋವಿಡ್ ಪ್ರಕರಣ

ಕಿರಣ್ ಮಹೇಶ್ವರಿ 2018ರ ಚುನಾವಣೆಯಲ್ಲಿ 89,709 ಮತಗಳನ್ನು ಪಡೆದು ಕಾಂಗ್ರೆಸ್‌ನ ನಾರಾಯಣ್ ಸಿಂಗ್ ಅವರನ್ನು ಸೋಲಿಸಿ ವಿಧಾನಸಭೆ ಪ್ರವೇಶಿಸಿದ್ದರು. ಕೆಲವು ದಿನಗಳ ಹಿಂದೆ ಅವರಿಗೆ ಕೋವಿಡ್ ಸೋಂಕು ತಗುಲಿತ್ತು.

ಶಬರಿಮಲೆ: ಮೂವರು ಪೊಲೀಸರಲ್ಲಿ ಕೋವಿಡ್ ಪಾಸಿಟಿವ್, ತೀವ್ರ ಕಟ್ಟೆಚ್ಚರ

ರಾಜಸ್ಥಾನದಲ್ಲಿ ಇದುವರೆಗೂ ಕೋವಿಡ್‌ನಿಂದಾಗಿ ಮೃತಪಟ್ಟವರ ಸಂಖ್ಯೆ 2,292. ಭಾನುವಾರ ರಾಜ್ಯದಲ್ಲಿ 2,581 ಹೊಸ ಕೋವಿಡ್ ಪ್ರಕರಣ ದಾಖಲಾಗಿದ್ದು, 18 ಜನರು ಮೃತಪಟ್ಟಿದ್ದಾರೆ.

ಜಗತ್ತಿನಾದ್ಯಂತ ಸಿದ್ಧವಾಗುತ್ತಿವೆ 200ಕ್ಕೂ ಹೆಚ್ಚು ಕೋವಿಡ್ ಲಸಿಕೆಗಳು

ನವೆಂಬರ್ 29ರಂದು 2,556 ಜನರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 28,758 ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಒಟ್ಟು ಪ್ರಕರಣಗಳು 2,65,386. ಇದುವರೆಗೂ ರಾಜ್ಯದಲ್ಲಿ 2,34,336 ಜನರು ಡಿಸ್ಚಾರ್ಜ್ ಆಗಿದ್ದಾರೆ.

ಪ್ರಧಾನಿ ಮೋದಿ ಸಂತಾಪ

English summary
Rajasthan BJP leader and MLA of Rajsamand, Kiran Maheshwari died in Medanta hospital in Haryana. Kiran Maheshwari under treatment after tested positive for COVID 19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X