ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಸ್ತಾನದಲ್ಲಿ ಮಿಗ್- 27 ಯುದ್ಧ ವಿಮಾನ ಪತನ

|
Google Oneindia Kannada News

ಜೋಧ್ ಪುರ್ (ರಾಜಸ್ತಾನ್), ಮಾರ್ಚ್ 31: ಭಾರತೀಯ ವಾಯು ಸೇನೆಗೆ ಸೇರಿದ ಮಿಗ್- 27 ಯುದ್ಧ ವಿಮಾನವು ದಕ್ಷಿಣ ರಾಜಸ್ತಾನದ ಸಿರೋಹಿ ಬಳಿ ಭಾನುವಾರ ಬೆಳಗ್ಗೆ ಪತನವಾಗಿದೆ. ಮಿಗ್ 27 ಯುಪಿಜಿ ವಿಮಾನವು ತನ್ನ ಮಾಮೂಲಿ ಕಾರ್ಯ ನಿರ್ವಹಣೆಯಲ್ಲಿ ತೊಡಗಿದ್ದಾಗ ಸಿರೋಹಿಯ ಶಿಯೋಗಂಜ್ ನ ಗೋದನದಲ್ಲಿ ಈ ಘಟನೆ ಸಂಭವಿಸಿದೆ.

ಈ ಸ್ಥಳವು ಜೋಧ್ ಪುರ್ ನಿಂದ 180 ಕಿಲೋಮೀಟರ್ ದೂರದಲ್ಲಿದೆ. ಮಿಗ್ 27 ಯುದ್ಧ ವಿಮಾನವು ಸೋವಿಯತ್ ರಷ್ಯಾ ಕಾಲಕ್ಕೆ ಸೇರಿದ್ದಾಗಿದ್ದು, 1980ರ ದಶಕದಲ್ಲಿ ಇದನ್ನು ಖರೀದಿಸಲಾಗಿತ್ತು. 1999ರಲ್ಲಿ ಪಾಕಿಸ್ತಾನದ ಜತೆಗೆ ನಡೆದ ಕಾರ್ಗಿಲ್ ಯುದ್ಧದಲ್ಲಿ ಇವುಗಳನ್ನು ವ್ಯಾಪಕವಾಗಿ ಬಳಸಲಾಗಿತ್ತು. ಬೆಟ್ಟ ಪ್ರದೇಶದಲ್ಲಿ ಅಡಗಿ ಕೂತಿದ್ದ ಶತ್ರುಗಳ ಮೇಲೆ ದಾಳಿ ನಡೆಸಲು ಇವುಗಳಿಂದ ಸಹಾಯ ಆಗಿತ್ತು.

MiG 27 UPG aircraft crashed in Jodhpur

ಈಗ ನಡೆದಿರುವ ಘಟನೆಯಲ್ಲಿ ಪೈಲಟ್ ಮಿಗ್ 27 ಯುದ್ಧ ವಿಮಾನದಿಂದ ಹೊರಗೆ ಬರಲು ಯಶಸ್ವಿಯಾಗಿ, ಅಪಾಯದಿಂದ ಪಾರಾಗಿದ್ದಾರೆ. ಆದರೆ ಇತ್ತೀಚೆಗೆ ಮಿಗ್ ವಿಮಾನ ದುರಂತ ಪ್ರಕರಣಗಳು ಹೆಚ್ಚಾಗಿವೆ. ಈ ವಿಮಾನವನ್ನು 'ಹಾರಾಡುವ ಶವಪೆಟ್ಟಿಗೆ' ಅಂತಲೇ ಕರೆಯಲಾಗುತ್ತದೆ. ಇವು ಎಷ್ಟು ಅಪಾಯಕಾರಿ ಎಂದು ಬಿಂಬಿಸಲು ಹೀಗೆ ಕರೆಯಲಾಗುತ್ತದೆ.

English summary
Sunday morning a MiG 27 UPG aircraft on a routine mission from Jodhpur, crashed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X