ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೆಹ್ಲೋಟ್‌ಗೆ ನೆಮ್ಮದಿ ತಂದ ಸುಪ್ರೀಂಕೋರ್ಟ್ ತೀರ್ಪು

|
Google Oneindia Kannada News

ಜೈಪುರ, ಆಗಸ್ಟ್ 13 : ಬಿಎಸ್‌ಪಿ ಶಾಸಕರು ಕಾಂಗ್ರೆಸ್‌ನೊಂದಿಗೆ ವಿಲೀನಗೊಂಡಿರುವುದನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನೆ ಮಾಡಲಾಗಿದೆ. ಈ ಅರ್ಜಿಯ ವಿಚಾರದಲ್ಲಿ ಮಧ್ಯಂತರ ಆದೇಶ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಗುರುವಾರ ಹೇಳಿದೆ.

Recommended Video

MLA Akhanda Srinivasamurtyಯನ್ನು ತರಾಟೆಗೆ ತೆಗೆದುಕೊಂಡ ಜನ | Oneindia Kannada

ಶುಕ್ರವಾರದಿಂದ ರಾಜಸ್ಥಾನ ವಿಧಾನಸಭೆ ಕಲಾಪ ಆರಂಭವಾಗಲಿದೆ. ಅದಕ್ಕೂ ಮೊದಲು ಸುಪ್ರೀಂಕೋರ್ಟ್ ತೀರ್ಪಿನಿಂದಾಗಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‌ಗೆ ತಾತ್ಕಾಲಿಕ ನೆಮ್ಮದಿ ಸಿಕ್ಕಿದೆ. ಒಂದು ವೇಳೆ ವಿಶ್ವಾಸಮತಯಾಚನೆ ನಡೆದರೆ ಬಿಎಸ್‌ಪಿ ಶಾಸಕರು ಸರ್ಕಾರದ ಪರವಾಗಿ ಮತದಾನ ಮಾಡಬಹುದಾಗಿದೆ.

ಅಶೋಕ್ ಗೆಹ್ಲೋಟ್ ಸರ್ಕಾರಕ್ಕೆ ಮತ್ತೆ ಸಂಕಷ್ಟ ತಂದ ಬಿಜೆಪಿ! ಅಶೋಕ್ ಗೆಹ್ಲೋಟ್ ಸರ್ಕಾರಕ್ಕೆ ಮತ್ತೆ ಸಂಕಷ್ಟ ತಂದ ಬಿಜೆಪಿ!

ಗುರುವಾರ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ನಡೆಯಿತು. ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಬಿ. ಆರ್. ಗವಾಯಿ ಮತ್ತು ಕೃಷ್ಣ ಮುರಾರಿ ಅವರ ಪೀಠ ಅರ್ಜಿಯ ಸಂಬಂಧ ಮಧ್ಯಂತರ ಆದೇಶ ನೀಡುವುದಿಲ್ಲ ಎಂದು ವಕೀಲ ಹರೀಶ್ ಸಾಳ್ವೆ ಅವರಿಗೆ ತಿಳಿಸಿತು.

ಸಚಿನ್ ಪೈಲೆಟ್ ಬಣದ ಇಬ್ಬರು ಶಾಸಕರ ಅಮಾನತು ವಾಪಸ್! ಸಚಿನ್ ಪೈಲೆಟ್ ಬಣದ ಇಬ್ಬರು ಶಾಸಕರ ಅಮಾನತು ವಾಪಸ್!

Merger Of BSP With Congress In Rajasthan SC Refused For Interim Order

2019ರ ಸೆಪ್ಟೆಂಬರ್ 18ರಂದು ರಾಜಸ್ಥಾನ ಸ್ಪೀಕರ್ ಬಿಎಸ್‌ಪಿಯ ಆರು ಶಾಸಕರು ಕಾಂಗ್ರೆಸ್ ಜೊತೆ ವಿಲೀನಗೊಳ್ಳುವುದಕ್ಕೆ ಒಪ್ಪಿಗೆ ನೀಡಿದ್ದರು. ಇದನ್ನು ಬಿಎಸ್‌ಪಿ ರಾಜಸ್ಥಾನ ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದೆ. ಸುಪ್ರೀಂಕೋರ್ಟ್‌ನಲ್ಲಿಯೂ ಅರ್ಜಿ ಸಲ್ಲಿಸಲಾಗಿದೆ.

ಜೈಪುರಕ್ಕೆ ಸಚಿನ್ ಪೈಲೆಟ್ ವಾಪಸ್; ಹೇಳಿದ್ದು ಒಂದೇ ಮಾತು! ಜೈಪುರಕ್ಕೆ ಸಚಿನ್ ಪೈಲೆಟ್ ವಾಪಸ್; ಹೇಳಿದ್ದು ಒಂದೇ ಮಾತು!

ಹೈಕೋರ್ಟ್‌ನಲ್ಲಿಯೂ ಅರ್ಜಿಯ ವಿಚಾರಣೆ ನಡೆಯುತ್ತಿದೆ. ಆದ್ದರಿಂದ ಯಾವುದೇ ಮಧ್ಯಂತರ ಆದೇಶ ನೀಡಲು ಬರುವುದಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿತು. ಬಿಜೆಪಿ ಶಾಸಕ ಮದನ್ ದಿಲ್ವಾರ್ ಸ್ಪೀಕರ್ ಆದೇಶಕ್ಕೆ ತಡೆ ನೀಡಬೇಕು ಎಂದು ಸಹ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಶುಕ್ರವಾರದಿಂದ ರಾಜಸ್ಥಾನ ವಿಧಾನಸಭೆ ಕಲಾಪ ಆರಂಭವಾಗಲಿದೆ. ಪ್ರತಿಪಕ್ಷ ಬಿಜೆಪಿ ಅಶೋಕ್ ಗೆಹ್ಲೋಟ್ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡುವುದಾಗಿ ಹೇಳಿದೆ. ವಿಶ್ವಾಸಮತ ಪ್ರಕ್ರಿಯೆ ನಡೆದರೆ ಬಿಎಸ್‌ಪಿ ಶಾಸಕರು ಸರ್ಕಾರದ ಪರವಾಗಿ ಮತದಾನ ಮಾಡಬಹುದಾಗಿದೆ.

English summary
Supreme court on refused to pass any interim order in the issue of merger of 6 BSP MLAs with Congress party in Rajasthan. State assembly session to start on August 14.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X