ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೂಪುರ್‌ ಶರ್ಮಾ ತಲೆಕಡಿಯಿರಿ ಎಂದವ ಪೊಲೀಸರ ಅತಿಥಿ!

|
Google Oneindia Kannada News

ಜೈಪುರ, ಜು.6: ಮಾಜಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ತಲೆಕಡಿದ ನೀಡುವುದಾಗಿ ಹೇಳಿದ್ದ ರಾಜಸ್ಥಾನದ ಅಜ್ಮೀರ್ ದರ್ಗಾದ ಧರ್ಮಗುರುವನ್ನು ಬಂಧಿಸಲಾಗಿದೆ.

ಸೋಮವಾರ ರಾತ್ರಿ ಮಾಡಿದ್ದ ವಿಡಿಯೋ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿದ ನಂತರ ರಾಜಸ್ಥಾನ ಪೊಲೀಸರು ಧರ್ಮಗುರು ಸಲ್ಮಾನ್ ಚಿಸ್ತಿಗಾಗಿ ಹುಡುಕುತ್ತಿದ್ದರು. ವಿಡಿಯೋದಲ್ಲಿ ನೂಪುರ್ ಶರ್ಮಾ ತಲೆಯನ್ನು ತನ್ನ ಬಳಿಗೆ ತರುವ ಯಾರಿಗಾದರೂ ತನ್ನ ಮನೆಯನ್ನು ನೀಡುವುದಾಗಿ ಧರ್ಮಗುರು ಹೇಳಿದ್ದನು. ಪ್ರವಾದಿಯನ್ನು ಅವಹೇಳನ ಮಾಡಿದ್ದಕ್ಕಾಗಿ ಆಕೆಯನ್ನು ಗುಂಡಿಕ್ಕಿ ಸಾಯಿಸುವುದಾಗಿ ಹೇಳಿದ್ದಾಗಿ ವಿಡಿಯೋದಲ್ಲಿ ತಿಳಿಸಲಾಗಿತ್ತು.

ನೂಪುರ್ ಶರ್ಮಾ ತಲೆಕಡಿಯಿರಿ ಮನೆ, ಆಸ್ತಿ ಬಹುಮಾನ ಪಡೆಯಿರಿ ಎಂದ ವ್ಯಕ್ತಿ: ವಿಡಿಯೋ ನೂಪುರ್ ಶರ್ಮಾ ತಲೆಕಡಿಯಿರಿ ಮನೆ, ಆಸ್ತಿ ಬಹುಮಾನ ಪಡೆಯಿರಿ ಎಂದ ವ್ಯಕ್ತಿ: ವಿಡಿಯೋ

ನೀವು ಎಲ್ಲಾ ಮುಸ್ಲಿಂ ದೇಶಗಳಿಗೆ ಉತ್ತರ ನೀಡಬೇಕು. ನಾನು ಇದನ್ನು ರಾಜಸ್ಥಾನದ ಅಜ್ಮೀರ್‌ನಿಂದ ಹೇಳುತ್ತಿದ್ದೇನೆ. ಈ ಸಂದೇಶವು ಹುಜೂರ್ ಖ್ವಾಜಾ ಬಾಬಾ ಕಾ ದರ್ಬಾರ್‌ನಿಂದ ಬಂದಿದೆ ಎಂದು ಅವರು ಪ್ರಸಿದ್ಧ ಸೂಫಿ ದೇಗುಲವನ್ನು ಉಲ್ಲೇಖಿಸಿ ವಿಡಿಯೋದಲ್ಲಿ ಹೇಳಿದ್ದನು. ಆರೋಪಿಯು ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿದ್ದಾನೆ ಎಂದು ಪೊಲೀಸ್ ಅಧಿಕಾರಿ ದಲ್ವೀರ್ ಸಿಂಗ್ ಫೌಜ್ದಾರ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಅಜ್ಮೀರ್ ದರ್ಗಾದ ದಿವಾನ್ ಝೈನುಲ್ ಅಬೇದಿನ್ ಅಲಿ ಖಾನ್ ಅವರ ಕಚೇರಿ ಈ ವಿಡಿಯೋವನ್ನು ಖಂಡಿಸಿದೆ. ದರ್ಗಾವು ಕೋಮು ಸೌಹಾರ್ದತೆಯ ಸ್ಥಳವಾಗಿದೆ ಎಂದು ಹೇಳಿದೆ. ವಿಡಿಯೋದಲ್ಲಿರುವ ವ್ಯಕ್ತಿಯು ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ದರ್ಗಾದ ಸಂದೇಶವೆಂದು ಪರಿಗಣಿಸಲಾಗುವುದಿಲ್ಲ. ಈ ಟೀಕೆಗಳು ಒಬ್ಬ ವ್ಯಕ್ತಿಯ ಹೇಳಿಕೆಯಾಗಿದ್ದು, ಇದು ಅತ್ಯಂತ ಖಂಡನೀಯ ಎಂದು ಅದು ಹೇಳಿದೆ.

ಜೈಪುರ್ ಕೋರ್ಟ್ ಬಳಿ ಕನ್ಹಯ್ಯಾ ಲಾಲ್ ಹಂತಕರ ಮೇಲೆ ದಾಳಿಜೈಪುರ್ ಕೋರ್ಟ್ ಬಳಿ ಕನ್ಹಯ್ಯಾ ಲಾಲ್ ಹಂತಕರ ಮೇಲೆ ದಾಳಿ

Man Offers House Gift For Who Beheading Nupur Sharma Arrest

ಸಲ್ಮಾನ್ ಚಿಸ್ತಿ ವಿಡಿಯೋದಲ್ಲಿ ನಾನು ನನ್ನ ದೇವರು, ತಾಯಿ ಮತ್ತು ಮಕ್ಕಳ ಮೇಲೆ ಪ್ರಮಾಣ ಮಾಡುತ್ತೇನೆ. ನೂಪುರ್ ಶರ್ಮಾ ಶಿರಚ್ಛೇದ ಮಾಡುವ ಯಾರಿಗಾದರೂ ನಾನು ಮನೆ ಮತ್ತು ಆಸ್ತಿಯನ್ನು ನೀಡುತ್ತೇನೆ ಎಂದು ಹೇಳಿಕೆ ನೀಡಿದ್ದನು. ವಿಡಿಯೋ ವೈರಲ್ ಆದ ನಂತರ, ಅಜ್ಮೀರ್ ಐಟಿ ವಿಭಾಗದ ಪೊಲೀಸರು ಐಪಿಸಿ 153 ಎ (ಧರ್ಮದ ಆಧಾರದ ಮೇಲೆ ದ್ವೇಷವನ್ನು ಉತ್ತೇಜಿಸುವುದು) ಮತ್ತು ಇತರ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಸಲ್ಮಾನ್ ಚಿಸ್ತಿ ತಲೆಮರೆಸಿಕೊಂಡಿದ್ದನು. ಆರೋಪಿಯನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದು, ಶೀಘ್ರದಲ್ಲೇ ಬಂಧಿಸುವುದಾಗಿ ಹೇಳಿದ್ದರು. ಈ ಕುರಿತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಸಾಂಗ್ವಾನ್, ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಹುಡುಕಾಟ ನಡೆಸುತ್ತಿದ್ದೇವೆ ಎಂದು ಹೇಳಿದ್ದರು.

Man Offers House Gift For Who Beheading Nupur Sharma Arrest

ನೂಪುರ್‌ ಶರ್ಮಾ ಬೆಂಬಲಿಸಿ ಪೋಸ್ಟ್‌ ಮಾಡಿದ್ದಕ್ಕಾಗಿ ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯಾ ಲಾಲ್‌ನನ್ನು ಇಸ್ಲಾಂ ಧರ್ಮಕ್ಕೆ ಮಾಡಿದ ಅವಮಾನ ಮಾಡಿದ್ದಾನೆಂದು ಈಗ ಬಂಧಿತರಾಗಿರುವ ಮೊಹಮ್ಮದ್ ರಿಯಾಜ್ ಅಖ್ತರಿ ಮತ್ತು ಗೋಶ್ ಮೊಹಮ್ಮದ್ ಹತ್ಯೆ ಮಾಡಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.

English summary
A priest of Rajasthan's Ajmer dargah has been arrested for allegedly gifting his house to anyone who killed former BJP spokesperson Nupur Sharma.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X