ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇಡ್ ಇನ್ ಚೀನಾ ಟೆಸ್ಟಿಂಗ್ ಕಿಟ್ ಗಳು ಕಳಪೆ: ಯಾವ ಪ್ರಯೋಜನವೂ ಇಲ್ಲ!

|
Google Oneindia Kannada News

ಜೈಪುರ, ಏಪ್ರಿಲ್ 21: ಚೀನಾದಿಂದ ಖರೀದಿಸಿದ 3.5 ಮಿಲಿಯನ್ ಟೆಸ್ಟಿಂಗ್ ಕಿಟ್ ಗಳು ವಿಶ್ವಾಸಾರ್ಹವಾಗಿಲ್ಲ ಎಂದು ಬ್ರಿಟನ್ ಆರೋಪಿಸಿತ್ತು. ಚೀನಾದ ಟೆಸ್ಟಿಂಗ್ ಕಿಟ್ ಗಳು ದೋಷಪೂರಿತವಾಗಿವೆ ಮತ್ತು ಕಳಪೆ ಗುಣಮಟ್ಟದ್ದು ಎಂದು ರಿಪಬ್ಲಿಕ್ ಜೆಕ್ ಹೇಳಿತ್ತು. ಇನ್ನು ಸ್ಪೇನ್ ಕೂಡ ಇದೇ ರೀತಿ ದೂರಿತ್ತು.

ಇದೀಗ ಭಾರತದಲ್ಲೂ ಮೇಡ್ ಇನ್ ಚೀನಾ ಟೆಸ್ಟಿಂಗ್ ಕಿಟ್ ಗಳಿಂದ ಯಾವುದೇ ಉಪಯೋಗ ಆಗುತ್ತಿಲ್ಲ. ಚೀನಾದಿಂದ ಬಂದಿದ್ದ Rapid ಟೆಸ್ಟಿಂಗ್ ಕಿಟ್ ಗಳಿಂದ ಕೊರೊನಾ ಸೋಂಕು ಪತ್ತೆ ಪರೀಕ್ಷೆಯಲ್ಲಿ ನಿಖರ ಫಲಿತಾಂಶ ಲಭ್ಯವಾಗುತ್ತಿಲ್ಲ. ಹೀಗಾಗಿ, ಈ Rapid ಟೆಸ್ಟಿಂಗ್ ಕಿಟ್ ಗಳನ್ನ ಬಳಸದಂತೆ ರಾಜ್ಯಗಳಿಗೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಸೂಚನೆ ನೀಡಿದೆ.

Rapid Antibody ಟೆಸ್ಟಿಂಗ್ ಅಂದ್ರೇನು.? ಅದರ ಕಾರ್ಯ ವಿಧಾನ ಹೇಗೆ.?Rapid Antibody ಟೆಸ್ಟಿಂಗ್ ಅಂದ್ರೇನು.? ಅದರ ಕಾರ್ಯ ವಿಧಾನ ಹೇಗೆ.?

ರಾಜಸ್ಥಾನದಲ್ಲಿ ಗುರುತಿಸಲಾದ ಹಾಟ್ ಸ್ಪಾಟ್ ಗಳಲ್ಲಿ ಕಳೆದ ಶುಕ್ರವಾರದಿಂದ ಕೋವಿಡ್-19 ಪತ್ತೆಗಾಗಿ Rapid ಟೆಸ್ಟಿಂಗ್ ಕಿಟ್ ಗಳನ್ನು ಬಳಸಿ ಪರೀಕ್ಷೆ ನಡೆಸಲಾಗುತ್ತಿತ್ತು. ಇದಕ್ಕಾಗಿ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ನಿಂದ ರಾಜಸ್ಥಾನ ಸರ್ಕಾರ 30,000 ಕಿಟ್ ಗಳನ್ನು ಉಚಿತವಾಗಿ ಪಡೆದುಕೊಂಡಿತ್ತು. ಆದ್ರೀಗ, ಈ ಕಿಟ್ ಗಳಿಂದ ಯಾವುದೇ ಪ್ರಯೋಜನ ಇಲ್ಲ ಎಂಬುದು ರಾಜಸ್ಥಾನ ಸರ್ಕಾರಕ್ಕೆ ಮನದಟ್ಟಾಗಿದೆ.

ಚೀನಾದಿಂದ ಖರೀದಿಸಿದ ಕೊರೊನಾ ಟೆಸ್ಟಿಂಗ್ ಕಿಟ್ ಕಳಪೆ: ಬ್ರಿಟನ್ ಸರ್ಕಾರಚೀನಾದಿಂದ ಖರೀದಿಸಿದ ಕೊರೊನಾ ಟೆಸ್ಟಿಂಗ್ ಕಿಟ್ ಕಳಪೆ: ಬ್ರಿಟನ್ ಸರ್ಕಾರ

5.4% ನಿಖರತೆ

5.4% ನಿಖರತೆ

ಬ್ಲಡ್ ಸ್ಯಾಂಪಲ್ ಗಳನ್ನು ಬಳಸಿ Rapid ಟೆಸ್ಟಿಂಗ್ ಕಿಟ್ ನಲ್ಲಿ ಕೋವಿಡ್-19 ಪತ್ತೆಗಾಗಿ ಪರೀಕ್ಷೆ ನಡೆಸಲಾಗುತ್ತದೆ. ಹಾಗೆ ರಾಜಸ್ಥಾನದಲ್ಲಿ ನಡೆಸಿದ ಪರೀಕ್ಷೆಗಳಲ್ಲಿ Rapid ಟೆಸ್ಟಿಂಗ್ ಕಿಟ್ ಗಳಿಂದ ಬಂದ ಫಲಿತಾಂಶದಲ್ಲಿ 5.4% ಮಾತ್ರ ನಿಖರತೆ ಹೊಂದಿದೆ ಎಂದು ಆರೋಗ್ಯ ಸಚಿವ ರಘು ಶರ್ಮಾ ಹೇಳಿದ್ದಾರೆ.

ನಿರೀಕ್ಷೆ ಹುಸಿ ಆಯ್ತು

ನಿರೀಕ್ಷೆ ಹುಸಿ ಆಯ್ತು

''Rapid ಟೆಸ್ಟಿಂಗ್ ಕಿಟ್ ಗಳಿಂದ 90% ನಿಖರತೆ ನಿರೀಕ್ಷೆ ಮಾಡಿದ್ವಿ. ಆದ್ರೆ, ಅದು 5.4% ಮಾತ್ರ ನಿಖರತೆ ಹೊಂದಿದೆ. ಹೀಗಾಗಿ, ಅದರಿಂದ ಯಾವುದೇ ಪ್ರಯೋಜನ ಇಲ್ಲ'' ಎಂದು ರಘು ಶರ್ಮಾ ತಿಳಿಸಿದ್ದಾರೆ.

ಇನ್ಮುಂದೆ ಬಳಸಬೇಡಿ

ಇನ್ಮುಂದೆ ಬಳಸಬೇಡಿ

ಈಗಾಗಲೇ ಪಾಸಿಟಿವ್ ಎಂದು ದೃಢಪಟ್ಟು, ಆಸ್ಪತ್ರೆಗೆ ದಾಖಲಾಗಿರುವವರನ್ನೂ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರೆಲ್ಲರ ರಿಪೋರ್ಟ್ ನಲ್ಲೂ Rapid ಟೆಸ್ಟಿಂಗ್ ಕಿಟ್ ನಿಂದಾಗಿ 'ನೆಗೆಟಿವ್' ಬಂದಿದೆ. ಸೋಂಕಿದ್ದರೂ Rapid ಟೆಸ್ಟಿಂಗ್ ಕಿಟ್ ಗಳು ನೆಗೆಟಿವ್ ಎಂದು ಫಲಿತಾಂಶ ನೀಡುತ್ತಿರುವುದರಿಂದ, ಅದನ್ನು ಇನ್ಮುಂದೆ ಬಳಸದಂತೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಸೂಚನೆ ನೀಡಿದೆ.

ಪಿ.ಸಿ.ಆರ್ ಟೆಸ್ಟ್ ಬೆಸ್ಟ್

ಪಿ.ಸಿ.ಆರ್ ಟೆಸ್ಟ್ ಬೆಸ್ಟ್

ಈ ಹಿಂದೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಪಿ.ಸಿ.ಆರ್ (Polymerase Chain Reaction) ಪರೀಕ್ಷಾ ಮಾದರಿಯನ್ನು ಅನುಸರಿಸುತ್ತಿತ್ತು. ಈ ಪರೀಕ್ಷಾ ಮಾದರಿಯಲ್ಲಿ ಗಂಟಲು ಅಥವಾ ಮೂಗಿನ ದ್ರವವನ್ನು ಪಡೆದು ಕೊರೊನಾ ವೈರಸ್ ಅನ್ನು ಪತ್ತೆಹಚ್ಚಬಹುದು. ಗಂಟಲು ಅಥವಾ ಮೂಗಿನ ದ್ರವವನ್ನು ಪಡೆದು ಮಾಡಲಾಗುವ ಪಿ.ಸಿ.ಆರ್ ಪರೀಕ್ಷೆಯ ಫಲಿತಾಂಶ ಸಿಗಬೇಕು ಅಂದ್ರೆ 5-6 ಗಂಟೆ ಕಾಯಬೇಕು. ಆದ್ರೆ, Rapid Antibody ಟೆಸ್ಟಿಂಗ್ ಮೂಲಕ ಮಾಡಲಾಗುವ ಪರೀಕ್ಷೆಯ ಫಲಿತಾಂಶ 15-30 ನಿಮಿಷಗಳ ಒಳಗೆ ಲಭಿಸುತ್ತದೆ. ಹೀಗಾಗಿ ಹಾಟ್ ಸ್ಪಾಟ್ ಗಳಲ್ಲಿ Rapid ಟೆಸ್ಟಿಂಗ್ ಕಿಟ್ ಗಳನ್ನು ಬಳಸುವಂತೆ ಸೂಚಿಸಲಾಗಿತ್ತು.

English summary
Made in China rapid testing kits are delivering inaccurate results.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X