ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಹಾವಾಡಿಗರ ದೇಶ ಎಂದು ಬಿಂಬಿಸಿದ್ದ ಕಾಂಗ್ರೆಸ್: ನರೇಂದ್ರ ಮೋದಿ

|
Google Oneindia Kannada News

ಬಿಕಾನೇರ್, ಮೇ 3: ಹಾವುಗಳೊಂದಿಗೆ ಆಟವಾಡಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರನ್ನು ಲೇವಡಿ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಭಾರತವು 'ಹಾವಾಡಿಗರ ದೇಶ' ಎಂದೇ ಸ್ವಾತಂತ್ರ್ಯಾನಂತರದ ಹಲವು ದಶಕಗಳವರೆಗೂ ಕಾಂಗ್ರೆಸ್ ಬಿಂಬಿಸಿತ್ತು ಎಂದು ಆರೋಪಿಸಿದ್ದಾರೆ.

ರಾಜಸ್ಥಾನದ ಬಿಕಾನೇರ್‌ನಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು, 'ಹಾವಾಡಿಸುವ ಮೂಲಕ ಕಾಂಗ್ರೆಸ್ ವಿದೇಶಿ ಅತಿಥಿಗಳನ್ನು ಖುಷಿಪಡಿಸುವ ಕಾಲವೊಂದಿತ್ತು. ಭಾರತವು ಕೇವಲ ಹಾವಾಡಿಗರು ಮತ್ತು ಜಾದೂಗಾರರ ದೇಶ ಎಂದು ಇಡೀ ದೇಶ ನಂಬುತ್ತಿತ್ತು. ಇಂತಹ ಹಲವು ದಶಕಗಳು ಕಳೆದ ಬಳಿಕವೂ ನಮ್ಮ ಚಿತ್ರಣವನ್ನು ಹಾಗೆಯೇ ಬಿಂಬಿಸಲಾಗುತ್ತಿದೆ' ಎಂದು ಹೇಳಿದರು.

Lok Sabha Elections 2019 congress portrayed india as land of snake charmers Narendra Modi

ಭಾರತದ ನಾಗರಿಕರು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಆವಿಷ್ಕಾರದ ಮೂಲಕ ಕಂಪ್ಯೂಟರ್‌ನ ಮೌಸ್ ಸಹಾಯದಿಂದ ಮುಂದೆ ಸಾಗುತ್ತಿದ್ದಾರೆಯೇ ವಿನಾ ಹಾವುಗಳಿಂದ ಅಲ್ಲ ಎಂದು ಮೋದಿ ಹೇಳಿದರು.

'ಭಾರತವು ಹಾವುಗಳಿಗಿಂತ ಸಾಕಷ್ಟು ಮುಂದೆ ಸಾಗಿದ್ದಾರೆ ಎನ್ನುವುದನ್ನು ಅವರು ಮರೆಯುತ್ತಿದ್ದಾರೆ. ದೇಶವು 'ಮೌಸ್‌'ನೊಂದಿಗೆ ಮುಂದೆ ಸಾಗುತ್ತಿದೆ. ಈಗ ಹಾವಾಡಿಗರು ಇಲ್ಲ. ಅವರೀಗ ಕಂಪ್ಯೂಟರ್‌ನ ಮೌಸ್ ಬಳಸುತ್ತಿದ್ದಾರೆ' ಎಂದು ಹೇಳಿದರು.

ಪ್ರಿಯಾಂಕಾ ವಿರುದ್ಧ ಪ್ರಕರಣ
ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಹಾವುಗಳನ್ನು ಮುಟ್ಟಿ ಆಟವಾಡಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಕ್ರಮ ತೆಗೆದುಕೊಳ್ಳುವಂತೆ ವಕೀಲರೊಬ್ಬರು ದೂರು ನೀಡಿದ್ದಾರೆ.

ಉತ್ತರ ಪ್ರದೇಶದ ಮುಖ್ಯ ವನ್ಯಜೀವಿ ಸಂರಕ್ಷಕರಿಗೆ ಪತ್ರ ಬರೆದಿರುವ ಅವರು, ಹಾವುಗಳನ್ನು ಅಕ್ರಮವಾಗಿ ಹಿಡಿದಿಡಲಾಗಿತ್ತು ಮತ್ತು ಪ್ರಿಯಾಂಕಾ ಗಾಂಧಿ ಹಾವುಗಳನ್ನು ಮುಟ್ಟುವಂತೆ ಜನರನ್ನು ಪ್ರೇರೇಪಿಸುವ ಜತೆಗೆ ಅವುಗಳ ಬೇಟೆಗೆ ಉತ್ತೇಜನ ನೀಡಿದ್ದರು ಎಂದು ಗೌರಿ ಮೌಲೇಖಿ ಎಂಬುವವರು ಆರೋಪಿಸಿದ್ದಾರೆ.

English summary
Lok Sabha Elections 2019: Prime Minister Narendra Modi in Rajasthan's Bikaner alleged that Congress used to portray India as a land of snake charmers and magic even after decades of Independence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X