ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್ ಡೌನ್; ಶಾಲೆಯಲ್ಲಿದ್ದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

|
Google Oneindia Kannada News

ಜೈಪುರ, ಏಪ್ರಿಲ್ 26 : ಲಾಕ್ ಡೌನ್‌ನಿಂದಾಗಿ ಊರಿಗೆ ಹೋಗಲು ಸಾಧ್ಯವಾಗದೇ ಶಾಲೆಯಲ್ಲಿ ಉಳಿದುಕೊಂಡಿದ್ದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಒಬ್ಬ ಪೊಲೀಸ್ ಮಖ್ಯಪೇದೆಯಾಗಿದ್ದಾನೆ.

ರಾಜಸ್ಥಾನದ ಸ್ವಾಯಿ ಮಾಧೋಪುರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. 40 ವರ್ಷದ ಮಹಿಳೆ ಮೇಲೆ ಏಪ್ರಿಲ್ 23 ರಂದು ಮೂವರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಘಟನೆ ಬಗ್ಗೆ ತನಿಖೆಗೆ ಆದೇಶ ನೀಡಲಾಗಿದೆ.

ಉತ್ತರ ಪ್ರದೇಶದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಉತ್ತರ ಪ್ರದೇಶದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಹೆಡ್ ಕಾನ್ಸ್‌ಟೇಬಲ್ ಲಾಲ್ ಚಂದ್ ಅಮಾನತುಗೊಳಿಸಲಾಗಿದೆ. ಮಹಿಳೆಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ವರದಿ ಇನ್ನೂ ಬರಬೇಕಿದೆ.

ಮಗುವಿಗೆ 'ಕಾಂಗ್ರೆಸ್' ಎಂದು ನಾಮಕರಣ ಮಾಡಿದ ರಾಜಸ್ಥಾನ ದಂಪತಿಮಗುವಿಗೆ 'ಕಾಂಗ್ರೆಸ್' ಎಂದು ನಾಮಕರಣ ಮಾಡಿದ ರಾಜಸ್ಥಾನ ದಂಪತಿ

Lock Down Women Gang Raped In Rajasthan School

ಜೈಪುರದ ಜೈಲಿನಲ್ಲಿದ್ದ ತನ್ನ ಮಗನನ್ನು ನೋಡಲು ಮಹಿಳೆ ಹೋಗಿದ್ದಳು. ಆದರೆ, ಕೊರೊನಾ ಹಿನ್ನಲೆಯಲ್ಲಿ ಮಗನನ್ನು ಬೇರೆ ಜೈಲಿಗೆ ಸ್ಥಳಾಂತರ ಮಾಡಲಾಗಿತ್ತು. ಇದರಿಂದಾಗಿ ಮಹಿಳೆ ಊರಿಗೆ ವಾಪಸ್ ಹೊರಟಿದ್ದಳು.

ಮೈಸೂರಿನಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ: ಆರೋಪಿ ಬಂಧನ ಮೈಸೂರಿನಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮಹಿಳೆ ಊರಿಗೆ ಹೋಗುವಾ ಸ್ವಾಯಿ ಮಾಧೋಪುರ್ ತಲುಪಿದ್ದಳು. ಆಗ ಲಾಕ್ ಡೌನ್ ಘೋಷಣೆಯಾಗಿದೆ. ಇದರಿಂದಾಗಿ ಊರಿಗೆ ಮರಳಲು ಸಾರಿಗೆ ಸೌಕರ್ಯ ಸಿಕ್ಕಿರಲಿಲ್ಲ. ಆಗ ಊರಿನವರು ಪೊಲೀಸರ ಸಮ್ಮುಖದಲ್ಲಿ ಪಂಚಾಯಿತಿ ನಡೆಸಿ, ಆಕೆಗೆ ಶಾಲೆಯಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಿದ್ದರು.

ಪಂಚಾಯಿತಿ ಸಂದರ್ಭದಲ್ಲಿ ಹಾಜರಿದ್ದ ಹೆಡ್ ಕಾನ್ಸ್‌ಟೇಬಲ್ ಏಪ್ರಿಲ್ 23ರ ರಾತ್ರಿ ತನ್ನ ಸ್ನೇಹಿತರ ಜೊತೆ ಸೇರಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಏಪ್ರಿಲ್ 24ರಂದು ಮಹಿಳೆ ಪೊಲೀಸರಿಗೆ ಈ ಕುರಿತು ದೂರು ನೀಡಿದ್ದಾಳೆ.

ಮಹಿಳೆಗೆ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಸ್ಥಳೀಯವಾಗಿ ಲಭ್ಯವಿದ್ದ ಕ್ವಾರಂಟೈನ್‌ ಝೋನ್‌ನಲ್ಲಿ ವಾಸ್ತವ್ಯ ಕಲ್ಪಿಸಲಾಗಿದೆ. ಘಟನೆ ಬಗ್ಗೆ ತನಿಖೆ ನಡೆಸಲು ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ.

English summary
40 year old women allegedly gang raped in Sawai Madhopur district of Rajasthan. Women in school due to travel restrictions. Three accused have been arrested and one accused is head constable.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X