• search
  • Live TV
ಜೈಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜೈಪುರ ಸಾಹಿತ್ಯ ಉತ್ಸವ: ಶಶಿ ತರೂರ್ ಕೃತಿ ಕುರಿತು ಚರ್ಚೆ

|

ಜೈಪುರ, ಫೆಬ್ರವರಿ 26: ಜಗತ್ತಿನ ಅತ್ಯಂತ ಶ್ರೇಷ್ಠ ಸಾಹಿತ್ಯ ಉತ್ಸವಗಳಲ್ಲಿ ಒಂದೆನಿಸಿರುವ ಜೈಪುರ ಸಾಹಿತ್ಯ ಉತ್ಸವದ ಶುಕ್ರವಾರದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಪುಸ್ತಕದ ಕುರಿತು ಸಂವಾದ ನಡೆಯಿತು.

ಹಾರ್ವರ್ಡ್ ವಿಶ್ವವಿದ್ಯಾಲಯದ ಪ್ರೊಫೆಸರ್ ಮಿಖಾಯಲ್ ಸ್ಯಾಂಡೆಲ್ ಅವರು 'ದಿ ಟಿರನಿ ಆಫ್ ಮೆರಿಟ್: ವಾಟ್ಸ್ ಬಿಕಂ ಆಫ್ ದಿ ಕಾಮನ್ ಗುಡ್?' ಕೃತಿಯ ಬಗ್ಗೆ ತರೂರ್ ಅವರೊಂದಿಗೆ ಸಂವಾದ ನಡೆಸಿದರು. ಜಯಶಾಲಿಗಳು ಮತ್ತು ಸೋತವರ ನಡುವೆ ತೀವ್ರವಾದ ವಿಭಜನೆಯನ್ನು ಪ್ರತಿಫಲಿಸು ರಾಜಕೀಯ ಕಾಲಮಾನದ ಧ್ರುವೀಕರಣದ ಬಗ್ಗೆ ತರೂರ್ ಪುಸ್ತಕ ವಿವರಣೆ ನೀಡಿದೆ.

ಜೈಪುರ ಸಾಹಿತ್ಯ ಉತ್ಸವ: ಫೆ. 26ರಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಸಂವಾದಜೈಪುರ ಸಾಹಿತ್ಯ ಉತ್ಸವ: ಫೆ. 26ರಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಸಂವಾದ

ಮಿಖಾಯಲ್ ಸ್ಯಾಂಡೆಲ್ ಅವರನ್ನು ಶ್ಲಾಘಿಸಿದ ತರೂರ್, ಅವರ ಕೆಲಸಗಳನ್ನು ಬಹಳ ಸಮಯದಿಂದ ತಾವು ಗಮನಿಸುತ್ತಿರುವುದಾಗಿ ತಿಳಿಸಿದರು.

'ಅರ್ಹತೆ' ವಿಷಯದ ಕುರಿತು ಸ್ಯಾಂಡೆಲ್ ಅವರು ಇಡೀ ಚರ್ಚೆಗೆ ಹೊಸ ಆಯಾಮ ನೀಡಿದರು. ಯೋಗ್ಯತಾಶಾಹಿ ನೀತಿಯು ಅಸಮಾನತೆಯ ಸಮಾಜಕ್ಕೆ ಅನ್ವಯವಾಗುತ್ತದೆ ಎಂಬ ಕಾರಣಕ್ಕೆ ಮಾತ್ರವಲ್ಲದೆ, ತನ್ನ ಪರಿಕಲ್ಪನೆಯೊಳಗೇ ಹರಿದಾಡುತ್ತದೆ ಎಂಬ ಕಾರಣಕ್ಕೆ ಸಮಸ್ಯಾತ್ಮಕವಾಗಿದೆ. ಜನರು ಯೋಗ್ಯತಾಶಾಹಿ ಸಮಾಜದ ಬಗ್ಗೆ ದೂರಿದಾಗ, ಆ ದೂರು ಸಾಮಾನ್ಯವಾಗಿ ಆದರ್ಶದ ಬಗ್ಗೆ ಇರುವುದಿಲ್ಲ. ಬದಲಾಗಿ ಅದರ ಮಟ್ಟಕ್ಕೆ ತಲುಪಲು ವಿಫಲವಾಗುವುದರ ಬಗ್ಗೆ ಇರುತ್ತದೆ ಎಂದು ವ್ಯಾಖ್ಯಾನಿಸಿದರು.

ಇತ್ತೀಚಿನ ದಶಕಗಳಲ್ಲಿ ಮಾರುಕಟ್ಟೆ ಚಾಲಿತ ಜಾಗತೀಕರಣ, ಜಯಶಾಲಿಗಳು ಮತ್ತು ಸೋತವರ ವಿಭಜನೆ ತೀವ್ರಗೊಳ್ಳುತ್ತಿದೆ. ನಮ್ಮ ರಾಜಕಾರಣಕ್ಕೆ ವಿಷವುಣಿಸುವುದು ನಮ್ಮನ್ನು ದೂರ ಮಾಡುತ್ತಿದೆ. ಹೆಚ್ಚುತ್ತಿರುವ ಅಸಮಾನತೆಯಿಂದ ನಮ್ಮ ನಿಲುವುಗಳಲ್ಲಿ ಬದಲಾವಣೆಗಳಾಗಿವೆ. ಮೇಲ್ಮಟ್ಟದಲ್ಲಿ ಇಳಿದವರು ತಮ್ಮದೇ ಪರಿಶ್ರಮದಿಂದ ತಮಗೆ ಯಶಸ್ಸು ಸಿಕ್ಕಿದೆ ಎಂದು ಭಾವಿಸುತ್ತಿದ್ದಾರೆ ಎಂದು ಸ್ಯಾಂಡೆಲ್ ಹೇಳಿದರು.

English summary
Jaipur Literature Festival 2021: Harvard University Professor Michael Sandel discussed with Congress MP Shashi Tharoor on his book.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X