ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೀವಭಯದಿಂದ 6 ದಿನ ಅಂಗಡಿ ಮುಚಿದ್ದ ಕನ್ಹಯ್ಯ ಲಾಲ್: ಅಂಗಡಿ ತೆರೆದ ದಿನವೇ ಹತ್ಯೆ

|
Google Oneindia Kannada News

ಉದಯಪುರ, ಜೂನ್ 30: ಮುಸ್ಲಿಂ ಯುವಕರಿಂದ ಭೀಕರವಾಗಿ ಕೊಲೆಯಾದ ಕನ್ಹಯ್ಯಾ ಲಾಲ್ ಜೀವ ಭಯದಿಂದ 6 ದಿನ ಅಂಗಡಿಯನ್ನೇ ತೆರೆದಿರಲಿಲ್ಲ ಎಂದು ತಿಳಿದುಬಂದಿದೆ. ತನಗೆ ಜೀವ ಬೆದರಿಕೆ ಇದೆ ಎಂದು ಕನ್ಹಯ್ಯ ಲಾಲ್ ಪೊಲೀಸರಿಗೆ ದೂರು ನೀಡಿದ್ದರೂ ಸರಿಯಾದ ಕ್ರಮ ತೆಗೆದುಕೊಳ್ಳದಿರುವುದು ದುರಂತಕ್ಕೆ ಕಾರಣವಾಗಿದೆ.

ರಾಜಸ್ಥಾನದ ಉದಯಪುರ ನಗರದ ಧನ್‌ಮಂಡಿ ಮಾರುಕಟ್ಟೆ ಪ್ರದೇಶದ ಮಾರುಕಟ್ಟೆಯಲ್ಲಿ ಕನ್ಹಯ್ಯ ಲಾಲ್‌ನನ್ನು ಮೊಹಮ್ಮದ್ ರಿಯಾಜ್ ಮತ್ತು ಗೌಸ್ ಮೊಹಮ್ಮದ್ ಎನ್ನುವ ಇಬ್ಬರು ಮುಸ್ಲಿಂ ಯುವಕರು ಕೊಚ್ಚಿ ಕೊಂದಿದ್ದರು. ಅದು ಆತನ ಟೈಲರ್ ಅಂಗಡಿಯಲ್ಲಿ. ಗ್ರಾಹಕರ ಸೋಗಿನೊಂದಿಗೆ ಅಂಗಡಿಗೆ ಪ್ರವೇಶಿಸಿ ಕೊಚ್ಚಿ ಹಾಕಿದ್ದಾರೆ ಮಾತ್ರವಲ್ಲದೆ ಆ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ.

ಉದಯಪುರ ಟೈಲರ್‌ನ ಹಂತಕರಿಗೆ ಪಾಕ್‌ ಉಗ್ರಗಾಮಿ ಗುಂಪಿನ ಜೊತೆ ಸಂಪರ್ಕ?ಉದಯಪುರ ಟೈಲರ್‌ನ ಹಂತಕರಿಗೆ ಪಾಕ್‌ ಉಗ್ರಗಾಮಿ ಗುಂಪಿನ ಜೊತೆ ಸಂಪರ್ಕ?

ಕೊಲೆ ಮಾಡಿದ ಬಳಿಕ ಅಲ್ಲಿಂದ ಓಡಿ ಹೋಗಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ. ನೂಪುರ್ ಶರ್ಮಾ ಬೆಂಬಲಿಸಿ ಪೋಸ್ಟ್ ಹಾಕಿದ್ದಕ್ಕಾಗಿ ಆತನನ್ನು ಕೊಂದಿರುವುದಾಗಿ ವಿಡಿಯೋದಲ್ಲಿ ತಿಳಿಸಿದ್ದರು.

ಹತ್ಯೆಗೆ ವಾರಗಳ ಮೊದಲು, ಕನ್ಹಯ್ಯಾ ಲಾಲ್ ಬಿಜೆಪಿ ನಾಯಕ ನೂಪುರ್ ಶರ್ಮಾ ಅವರನ್ನು ಬೆಂಬಲಿಸುವ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಕೊಲೆ ಬೆದರಿಕೆಗಳ ಬಗ್ಗೆ ದೂರು ನೀಡಿದ್ದರು.

ಬೆದರಿಕೆ ಬಗ್ಗೆ ದೂರು ನೀಡಿದ್ದ ಕನ್ಹಯ್ಯ

ಬೆದರಿಕೆ ಬಗ್ಗೆ ದೂರು ನೀಡಿದ್ದ ಕನ್ಹಯ್ಯ

ಕನ್ಹಯ್ಯಾ ಲಾಲ್ ಬೆದರಿಕೆ ಹಾಕಿದ್ದವರ ವಿರುದ್ಧ ದೂರು ನೀಡಿದ ನಂತರ ಜೂನ್ 10 ರಂದು ಆರೋಪಿಗಳನ್ನು ಬಂಧಿಸಲಾಯಿತು. ಆದರೆ, ಮರುದಿನ ಜಾಮೀನಿನ ಮೇಲೆ ಬಿಡುಗಡೆಗೊಂಡರು.

ಕನ್ಹಯ್ಯಾ ಲಾಲ್ ಅವರ ಕುಟುಂಬವು ಜೂನ್ 15 ರಂದು ಮತ್ತೆ ಧನ್ಮಂಡಿ ಪೊಲೀಸ್ ಠಾಣೆಯಲ್ಲಿ ಸಮಾಜ ವಿರೋಧಿ ಶಕ್ತಿಗಳಿಂದ ಬೆದರಿಕೆ ಹಾಕುತ್ತಿದೆ ಎಂದು ಆರೋಪಿಸಿ ದೂರು ದಾಖಲಿಸಿದೆ ಎಂದು ಹೇಳಿದ್ದಾರೆ. ಆದರೆ, ಎರಡೂ ಕಡೆಯವರ ನಡುವೆ ಮಾತುಕತೆಯ ನಂತರ ಒಪ್ಪಂದಕ್ಕೆ ಬರಲಾಯಿತು ಎಂದು ಪೊಲೀಸರು ಹೇಳುತ್ತಾರೆ.

ಕನ್ಹಯ್ಯಾ ಲಾಲ್‌ಗೆ ಬರುತ್ತಿರುವ ಬೆದರಿಕೆ ಕರೆಗಳ ಬಗ್ಗೆ ಎಎಸ್‌ಐ ಗಮನಹರಿಸಿಲ್ಲ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಹವಾ ಸಿಂಗ್ ಘುಮಾರಿಯಾ ಹೇಳಿದ್ದಾರೆ.

ಉದಯ್‌ಪುರ ಘಟನೆ: ವಿವೇಕ್ ಅಗ್ನಿಹೋತ್ರಿ, ಕಂಗನಾ ರಣಾವತ್ ಆಕ್ರೋಶಉದಯ್‌ಪುರ ಘಟನೆ: ವಿವೇಕ್ ಅಗ್ನಿಹೋತ್ರಿ, ಕಂಗನಾ ರಣಾವತ್ ಆಕ್ರೋಶ

6 ದಿನ ಅಂಗಡಿ ಬಂದ್ ಮಾಡಿದ್ದ ಕನ್ಹಯ್ಯ ಲಾಲ್

6 ದಿನ ಅಂಗಡಿ ಬಂದ್ ಮಾಡಿದ್ದ ಕನ್ಹಯ್ಯ ಲಾಲ್

ಪೊಲೀಸರು ಕನ್ಹಯ್ಯ ಲಾಲ್ ಮನವಿಗೆ ಸ್ಪಂದಿಸದೇ ಇದ್ದಾಗ, ಕನ್ಹಯ್ಯಾ ಲಾಲ್ ಜೀವಭಯದಿಂದ ಆರು ದಿನಗಳಿಂದ ಅಂಗಡಿ ತೆರೆಯಲಿಲ್ಲ ಎನ್ನಲಾಗಿದೆ. ಆದರೆ ಜೀವನ ನಡೆಸಲು ಅಂಗಡಿಯೇ ಆಧಾರವಾಗಿದ್ದರಿಂದ ಹೊಟ್ಟೆಪಾಡಿಗಾಗಿ ಮಂಗಳವಾರ ಅಂಗಡಿ ತೆರೆದಿದ್ದಾರೆ.

ಇದಕ್ಕೆ ಕಾದು ಕುಳಿತಿದ್ದ ಹಂತಕರು ಕನ್ಹಯ್ಯ ಲಾಲ್ ಅಂಗಡಿಗೆ ಗ್ರಾಹಕರಂತೆ ಬಂದು ಹತ್ಯೆ ಮಾಡಿದ್ದಾರೆ. ಪೊಲೀಸರು ಸಕಾಲದಲ್ಲಿ ಕ್ರಮಕೈಗೊಂಡಿದ್ದರೆ ಅನಾಹುತ ನಡೆಯುತ್ತಿರಲಿಲ್ಲ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.

ಕೊಲೆಗಾರರಿಗೆ ಮರಣದಂಡನೆ ವಿಧಿಸಲು ಆಗ್ರಹ

ಕೊಲೆಗಾರರಿಗೆ ಮರಣದಂಡನೆ ವಿಧಿಸಲು ಆಗ್ರಹ

ಕೃತ್ಯ ಎಸಗಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಕನ್ಹಯ್ಯ ಲಾಲ್ ಸಂಬಂಧಿಕರು ಒತ್ತಾಯಿಸಿದ್ದಾರೆ. ದೇಶದಲ್ಲಿ ಇಂತಹ ಘಟನೆ ಮರುಕಳಿಸಬಾರದು, ತಮ್ಮ ಕುಟುಂಬಕ್ಕೆ ಬಂದಂತ ಸ್ಥಿತಿ ಇನ್ಯಾರಿಗೂ ಬರಬಾರದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಅಲ್ಲದೆ ಆರೋಪಿಗಳಿಗೆ ಮರಣದಂಡನೆ ವಿಧಿಸುವಂತೆ ಒತ್ತಾಯಿಸಿದ್ದಾರೆ. "ಆರೋಪಿಗಳು ನನ್ನ ತಾಯಿಯ ಚಿಕ್ಕಪ್ಪನನ್ನು ಚಿತ್ರಹಿಂಸೆ ನೀಡಿ ಕೊಂದಿದ್ದಾರೆ, ಅವರಿಗೆ ಮರಣದಂಡನೆ ನೀಡಬೇಕು, ಇಂದು ಅವರು ನಮ್ಮ ಮಾವನನ್ನು ಕೊಂದಿದ್ದಾರೆ ಮತ್ತು ನಾಳೆ ಇತರರನ್ನು ಕೊಲ್ಲುತ್ತಾರೆ, ನಮಗೆ ನ್ಯಾಯ ಬೇಕು, ಅವರನ್ನು ಗಲ್ಲಿಗೇರಿಸಬೇಕು, ದೇಶದಲ್ಲಿ ಮತ್ತೆ ಯಾರೂ ಈ ಕೃತ್ಯ ಎಸಗಲು ಯೋಚಿಸದಂತಹ ಶಿಕ್ಷೆ ನೀಡಬೇಕು" ಎಂದು ಸಂತ್ರಸ್ತೆಯ ಸೊಸೆ ಒತ್ತಾಯಿಸಿದ್ದಾರೆ.

45 ದಿನ ಪಾಕ್‌ನಲ್ಲಿ ಇದ್ದ ಗೌಸ್ ಮೊಹಮ್ಮದ್

45 ದಿನ ಪಾಕ್‌ನಲ್ಲಿ ಇದ್ದ ಗೌಸ್ ಮೊಹಮ್ಮದ್

ರಾಜಸ್ಥಾನದ ಗೃಹ ಖಾತೆ ರಾಜ್ಯ ಸಚಿವ ರಾಜೇಂದ್ರ ಸಿಂಗ್ ಯಾದವ್ ಆರೋಪಿ ಗೌಸ್ ಮೊಹಮ್ಮದ್ 2014 ರಲ್ಲಿ ಪಾಕಿಸ್ತಾನದ ಕರಾಚಿಗೆ ಹೋಗಿ ಸುಮಾರು 45 ದಿನಗಳನ್ನು ಕಳೆದಿದ್ದಾನೆ ಎಂದು ಹೇಳಿದ್ದಾರೆ. ಕೊಲೆಗಾರರು ಕೆಲವು ಬಾರಿ ನೇಪಾಳಕ್ಕೆ ಭೇಟಿ ನೀಡಿದ್ದರು. ಕಳೆದ 2-3 ವರ್ಷಗಳಿಂದ ಅವರು ಪಾಕಿಸ್ತಾನದ 8-10 ಫೋನ್ ಸಂಖ್ಯೆಗಳಿಗೆ ಕರೆಗಳನ್ನು ಮಾಡುತ್ತಿದ್ದರು ಎಂದು ಯಾದವ್ ತಿಳಿಸಿದ್ದಾರೆ.

ಆರೋಪಿಗಳು ಕರಾಚಿಯಲ್ಲಿರುವ 'ದಾವತ್ ಇ ಇಸ್ಲಾಮಿ' ಕಚೇರಿಗೆ ಭೇಟಿ ನೀಡಲು ಹೋಗಿದ್ದರು ಎಂದು ಪೊಲೀಸ್ ಮಹಾನಿರ್ದೇಶಕ ಎಂಎಲ್ ಲಾಥರ್ ತಿಳಿಸಿದ್ದಾರೆ.

ಕನ್ಹಯ್ಯಾ ಲಾಲ್ ಹತ್ಯೆಗೆ 10 ದಿನಗಳ ಹಿಂದೆಯೇ ಸಂಚು ರೂಪಿಸಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪಾಕಿಸ್ತಾನ ಮೂಲದ ಏಜೆನ್ಸಿಗಳ ಪಾತ್ರವೂ ಇದೆ ಎಂದು ತನಿಖಾ ಸಂಸ್ಥೆಗಳ ಮೂಲಗಳು ತಿಳಿಸಿವೆ.

English summary
Kanhaiya Lal did not open his shop for six days fearing for his life. But when he opened his shop on Tuesday, he was beheaded.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X