ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೋಧ್‌ಪುರದಲ್ಲಿ ಮುಂದುವರೆದ ಘರ್ಷಣೆ: ಪೊಲೀಸರ ಮೇಲೆ ಕಲ್ಲು ತೂರಾಟ

|
Google Oneindia Kannada News

ಜೈಪುರ, ಮೇ 03: ರಾಜಸ್ಥಾನದ ಜೋಧ್‌ಪುರದಲ್ಲಿ ಹಿಂಸಾಚಾರದ ಎರಡನೇ ದಿನವೂ ಘರ್ಷಣೆ ನಡೆದಿದೆ. ಉದ್ರಿಕ್ತರ ಗುಂಪಿನಿಂದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಜೊತೆಗೆ ಬಿಜೆಪಿ ಶಾಸಕನ ಮನೆ ಹೊರಗೆ ಬೈಕ್‌ಗೆ ಬೆಂಕಿ ಹಚ್ಚಲಾಗಿದ್ದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧವೂ ಘೋಷಣೆಗಳನ್ನು ಕೂಗುವ ಮೂಲಕ ಗುಂಪು ಆಕ್ರೋಶ ಹೊರಹಾಕಿದೆ.

ಬಿಜೆಪಿ ಶಾಸಕ ಸೂರ್ಯಕಾಂತ ವ್ಯಾಸ್ ಮನೆಯ ಹೊರಗೆ ಬೈಕ್‌ಗೆ ಬೆಂಕಿ ಹಚ್ಚಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ. ಇದಕ್ಕೂ ಮುನ್ನ ಕೇಂದ್ರ ಸಚಿವ ಮತ್ತು ಜೋಧ್‌ಪುರ ಸಂಸದ ಗಜೇಂದ್ರ ಸಿಂಗ್ ಶೇಖಾವತ್ ಗೆಹ್ಲೋಟ್ ವಿರುದ್ಧ ಘೋಷಣೆಗಳನ್ನು ಕೂಗಿದ ಸ್ಥಳಕ್ಕೆ ತಲುಪಿದರು.

ಜೋಧ್‌ಪುರ: ಭುಗಿಲೆದ್ದ ಹಿಂಸಾಚಾರ ಭುಗಿಲೆದ್ದಿದೆ, ಶಾಂತಿ ಕಾಪಾಡಲು ಸಿಎಂ ಮನವಿಜೋಧ್‌ಪುರ: ಭುಗಿಲೆದ್ದ ಹಿಂಸಾಚಾರ ಭುಗಿಲೆದ್ದಿದೆ, ಶಾಂತಿ ಕಾಪಾಡಲು ಸಿಎಂ ಮನವಿ

ಸೋಮವಾರ ಜಲೋರಿ ಗೇಟ್‌ನಲ್ಲಿ ಹಿಂದೂ ಧ್ವಜ ತೆಗೆದು ಮುಸ್ಲಿಂ ಬಾವುಟ ಹಾರಿಸಿದ ವಿಚಾರದಲ್ಲಿ ವಿವಾದ ಆರಂಭವಾಗಿದೆ. ಜಾಲೋರಿ ವೃತ್ತದ ಬಳಿ ಬ್ಯಾನರ್ ಹಾಕಿ ಧ್ವನಿವರ್ಧಕ ಅಳವಡಿಸಲಾಗಿತ್ತು. ವರದಿಗಳ ಪ್ರಕಾರ ಸ್ವಾತಂತ್ರ್ಯ ಹೋರಾಟಗಾರ ಬಾಲ್ ಮುಕುಂದ್ ಬಿಸ್ಸಾ ಅವರ ಪ್ರತಿಮೆಯ ಮೇಲೆ ಧ್ವಜವನ್ನು ಹಾಕಲಾಗಿದೆ ಎಂದು ಆರೋಪಿಸಲಾಗುತ್ತಿದೆ.

ಜಲೋರಿಯ ವೃತ್ತದಲ್ಲಿ ಈದ್‌ಗೆ ಸಂಬಂಧಿಸಿದ ಬ್ಯಾನರ್ ಅನ್ನು ಕಟ್ಟಿದಾಗ ಒಂದು ಸಮುದಾಯದ ಜನರು ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು. ಕೇಸರಿ ಧ್ವಜವನ್ನು ತೆಗೆದ ಬೆನ್ನಲ್ಲೇ ಪ್ರತಿಭಟನಾಕಾರರು ಧ್ವಜ ಮತ್ತು ಬ್ಯಾನರ್ ತೆಗೆಸಿದೆ, ಇದು ಕೋಲಾಹಲಕ್ಕೆ ಕಾರಣವಾಗಿದೆ. ಈ ವೇಳೆ ಇತರೆ ಸಮುದಾಯದವರು ಆಕ್ರೋಶಗೊಂಡು ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ.

Jodhpur Violence: Fire To Bike Outside BJP MLAs House

ಎರಡೂ ಕಡೆಯಿಂದ ಕಲ್ಲು ತೂರಾಟ, ವಾಹನಗಳಿಗೆ ಹಾನಿ, ಧ್ವನಿವರ್ಧಕವನ್ನು ಕಿತ್ತೊಗೆಯುವ ಘಟನೆ ನಡೆದಿದೆ. ಗುಂಪನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ. ಜನಸಂದಣಿ ಹೆಚ್ಚಾದಂತೆ ಪೊಲೀಸರು ಆ ಪ್ರದೇಶದಿಂದ ಜನರನ್ನು ಚದುರಿಸಿ ಬಿಗಿ ಭದ್ರತೆ ಕೈಗೊಂಡಿದ್ದಾರೆ.

Jodhpur Violence: Fire To Bike Outside BJP MLAs House

Recommended Video

ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ರಂಜಾನ್ ಸಡಗರ ಹೇಗಿದೆ ನೋಡಿ.. | Oneindia Kannada

ಇದೇ ವೇಳೆ ಶಾಂತಿ ಕಾಪಾಡುವಂತೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮನವಿ ಮಾಡಿದ್ದಾರೆ. ಜೋಧ್‌ಪುರ-ಮಾರ್ವಾರ್‌ನ ಪ್ರೀತಿ ಮತ್ತು ಸಹೋದರತ್ವದ ಸಂಪ್ರದಾಯವನ್ನು ಗೌರವಿಸಿ. ಶಾಂತಿಯನ್ನು ಕಾಪಾಡಿ. ಕಾನೂನು ಮತ್ತು ಸುವ್ಯವಸ್ಥೆಗೆ ಸಹಕರಿಸಿ ಎಂದು ಎಲ್ಲಾ ಪಕ್ಷಗಳಿಗೆ ಮನವಿ ಮಾಡುತ್ತೇನೆ ಎಂದು ಮುಖ್ಯಮಂತ್ರಿಗಳು ಟ್ವೀಟ್ ಮಾಡಿದ್ದಾರೆ.

English summary
Rajasthan Violence: A group of extremists threw stones at policemen and set fire to a bike outside JP MLA's house In Jodhpur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X