ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

IAS ಟಾಪರ್ ಟೀನಾ ಡಾಬಿ-ಅಥರ್ ಖಾನ್ ವಿವಾಹ ವಿಚ್ಛೇದನಕ್ಕೆ ಅನುಮತಿ

|
Google Oneindia Kannada News

ಜೈಪುರ, ಆಗಸ್ಟ್ 11: ಐಎಎಸ್‌ ಟಾಪರ್ ಟೀನಾ ಡಾಬಿ ಹಾಗೂ ಅಥರ್ ಖಾನ್ ವಿವಾಹ ವಿಚ್ಛೇದನಕ್ಕೆ ಜೈಪುರ ಹೈಕೋರ್ಟ್ ಅನುಮತಿ ನೀಡಿದೆ.

ಅತಿ ಕಿರಿಯ ವಯಸ್ಸಿಗೇ ಐಎಎಸ್‌ ಹುದ್ದೆ ಅಲಂಕರಿಸಿದ ಮಹಿಳೆ ಎಂಬ ಹಗ್ಗೆಳಿಗೆ ಪಾತ್ರರಾಗಿದ್ದ ಟೀನಾ ಡಾಬಿ ಇದೀಗ ವಿವಾಹ ವಿಚ್ಛೇದನ ವಿಷಯದಿಂದಾಗಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ನನ್ನ ಸಾಧನೆಗೆ ಅಂಬೇಡ್ಕರ್ ಅವರೇ ಪ್ರೇರಣೆ : ಟೀನಾ ದಾಬಿನನ್ನ ಸಾಧನೆಗೆ ಅಂಬೇಡ್ಕರ್ ಅವರೇ ಪ್ರೇರಣೆ : ಟೀನಾ ದಾಬಿ

ಕಳೆದ ವರ್ಷ ನವೆಂಬರ್‌ನಲ್ಲಿ ಇಬ್ಬರೂ ವಿವಾಹ ವಿಚ್ಛೇದನಕ್ಕೆಂದು ಅರ್ಜಿ ಸಲ್ಲಿಸಿದ್ದರು. ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಈ ವಿವಾಹದಲ್ಲಿ ಪಾಲ್ಗೊಂಡಿದ್ದರು. ದೆಹಲಿಯ ಲೇಡಿ ಶ್ರೀರಾಮ್ ಕಾಲೇಜಿನಿಂದ ರಾಜಕೀಯ ವಿಜ್ಞಾನದಲ್ಲಿ ಪದವಿ ಪಡೆದ ಡಾಬಿ ಜೀಸಸ್ ಮತ್ತು ಮೇರಿಯ ಕಾನ್ವೆಂಟ್‌ನಲ್ಲಿ ತನ್ನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ಏತನ್ಮಧ್ಯೆ, ಅಥರ್ ಅವರು ಲಕ್ನೋದಲ್ಲಿರುವ ಭಾರತೀಯ ರೈಲ್ವೇ ಇನ್‌ಸ್ಟಿಟ್ಯೂಟ್ ಆಫ್ ಟ್ರಾನ್ಸ್‌ಪೋರ್ಟ್ ಅಂಡ್ ಮ್ಯಾನೇಜ್‌ಮೆಂಟ್‌ನಲ್ಲಿ ತರಬೇತಿ ಪಡೆಯುತ್ತಿದ್ದರು.

 Jaipur Family Court Grants Divorce To IAS Toppers Tina Dabi, Athar Khan

ಡಾಬಿ ಮತ್ತು ಅಥರ್ ಇಬ್ಬರನ್ನೂ ಐಎಎಸ್‌ನ ರಾಜಸ್ಥಾನ ಕೇಡರ್‌ನಲ್ಲಿ ನಿಯೋಜಿಸಲಾಗಿತ್ತು. ಆರಂಭದಲ್ಲಿ ಇಬ್ಬರೂ ಒಂದೇ ನಗರದಲ್ಲಿದ್ದರು. ನಂತರ ಟೀನಾ ಡಾಬಿಯನ್ನು ನಂತರ ಶ್ರೀ ಗಂಗಾನಗರಕ್ಕೆ ಜಿಲ್ಲಾ ಪರಿಷತ್ತಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಿಸಲಾಯಿತು. ಅಥರ್ ಅವರನ್ನು ಜೈಪುರಕ್ಕೆ ಜಿಲ್ಲಾ ಪರಿಷತ್ತಿನ ಸಿಇಒ ಆಗಿ ನೇಮಿಸಲಾಯಿತು.

ಐಎಎಸ್ ತರಬೇತಿ ವೇಳೆ ಟೀನಾ- ಅಥರ್ ನಡುವೆ ಪ್ರಮವಾಗಿತ್ತು, ಪ್ರಥಮ ಸ್ಥಾನ ಪಡೆದ ಟೀನಾ ಮತ್ತು ಎರಡನೇ ಸ್ಥಾನ ಪಡೆದ ಅಥರ್ ವಿವಾಹವಾಗುವುದಾಗಿ ಘೋಷಿಸಿದ್ದೇ ತಡ ಅಖಿಲ ಭಾರತೀಯ ಹಿಂದೂ ಮಹಾಸಭಾ ಅದನ್ನು ಲವ್ -ಜಿಹಾದ್ ಎಂದು ಹೇಳಿತ್ತು.

ಹಿಂದೂ ಮಹಾಸಭಾ ಟೀನಾ ಅವರ ಪೋಷಕರಿಗೆ ಪತ್ರ ಬರೆದು, ಆಕೆಯ ಸಾಧನೆ ಬಗ್ಗೆ ಹೆಮ್ಮೆ ಇದೆ. ಆದರೆ ಆಕೆ ಮುಸ್ಲಿಂ ಯುವಕನ್ನು ಮದುವೆಯಾಗಲು ತೀರ್ಮಾನಿಸಿರುವುದು ದುಃಖ ತಂದಿದೆ ಎಂದು ಹೇಳಿತ್ತು.

ಅಷ್ಟೇ ಅಲ್ಲದೆ ಮದುವೆಯನ್ನು ರದ್ದುಗೊಳಿಸಲು ಡಾಬಿ ಪೋಷಕರಿಗೆ ಒತ್ತಾಯಿಸಿದ ಸಂಘಟನೆ ಮದುವೆ ರದ್ದುಗೊಳಿಸಬೇಕು ಇಲ್ಲವೇ ಖಾನ್‌ನ್ನು ಮತಾಂತರ ಮಾಡಲು ಒಪ್ಪಿಸಬೇಕು ಎಂದು ಹೇಳಿತ್ತು. ಅಥರ್ ಖಾನ್ ಅವರ ಘರ್ ವಾಪಸಿಗೆ ಬೆಂಬಲ ನೀಡುವುದಾಗಿ ಹೇಳಿದ್ದರು.

2015ನೇ ಸಾಲಿನ ಐಎಎಸ್‌ ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್ ಪಡೆದಿದ್ದ ಟೀನಾ ಡಾಬಿ ಅದೇ ಬ್ಯಾಚ್‌ನಲ್ಲಿ ಎರಡನೇ ರ‍್ಯಾಂಕ್ ಪಡೆದಿದ್ದ ಅಥರ್‌ ಅಮಿರ್‌ ಖಾನ್‌ ಎಂಬುವವರನ್ನು ಪ್ರೀತಿಸಿ ವಿವಾಹವಾಗಿದ್ದರು. ಇದೀಗ ಅವರ ಪತಿ ಅಥರ್‌ ಖಾನ್‌ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಪ್ರೇಮಿಗಳಾಗಿದ್ದ ಇಬ್ಬರು 2018ರಲ್ಲಿ ಮದುವೆಯಾಗಿದ್ದರು. ಈಗ ದಂಪತಿ ಪರಸ್ಪರ ಒಪ್ಪಿಗೆಯ ಮೇರೆಗೆ ಜೈಪುರ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.

ಕೆಲ ದಿನಗಳ ಹಿಂದೆ ಟೀನಾ ಡಾಬಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ʼಖಾನ್‌ʼ ಸರ್‌ ನೇಮ್‌ ತೆಗೆದು ಹಾಕಿದ್ದರು. ಅಥರ್‌ ಖಾನ್‌ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಟೀನಾ ಅವರನ್ನು ಅನ್‌ಫಾಲೋ ಮಾಡಿದ್ದರು.

ಟೀನಾ ಡಾಬಿ ದಿಲ್ಲಿಯವರು, ಅಥರ್‌ ಖಾನ್‌ ಕಾಶ್ಮೀರ ಮೂಲದವರು. ಟೀನಾ ಮತ್ತು ಅಥರ್‌ ತರಬೇತಿ ಸಂದರ್ಭದಲ್ಲಿ ಪರಸ್ಪರ ಪ್ರೀತಿಸಲಾರಂಭಿಸಿದ್ದರು ಎನ್ನಲಾಗಿದೆ. ಇವರಿಬ್ಬರು 2018ರಲ್ಲಿ ಮದುವೆಯಾಗಿ ಭಾರೀ ಸುದ್ದಿಯಲ್ಲಿದ್ದರು.

ಐಎಎಸ್‌ ಅಧಿಕಾರಿಗಳು ಅದರಲ್ಲೂ ಟಾಪ್‌ 2 ಸ್ಥಾನಗಳಲ್ಲಿ ಕಾಣಿಸಿಕೊಂಡ ಇಬ್ಬರು ಮದುವೆಯಾಗುವ ಮೂಲಕ ದೇಶಾದ್ಯಂತ ಉತ್ತಮ ಅಭಿಪ್ರಾಯ ವ್ಯಕ್ತವಾಗಿತ್ತು. ಈ ಐಎಎಸ್ ದಂಪತಿಯನ್ನು ಅನೇಕ ಗಣ್ಯರು ಅಭಿನಂದಿಸಿದ್ದರು. ಸದ್ಯ ಇಬ್ಬರೂ ರಾಜಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

English summary
A family court in Jaipur has granted divorce to IAS toppers Tina Dabi and Athar Khan. Tina Dabi, topper of the Union Public Service Commission (UPSC) examination in 2015, and her husband, IAS Athar Khan, had filed for divorce in November 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X