• search
  • Live TV
ಜೈಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜೈಪುರ ಬಾಂಬ್ ಸ್ಪೋಟ; ನಾಲ್ವರು ಅಪರಾಧಿಗಳಿಗೆ ಗಲ್ಲು

|

ಜೈಪುರ, ಡಿಸೆಂಬರ್ 18: 2008 ರ ಜೈಪುರ ಸರಣಿ ಬಾಂಬ್ ಸ್ಫೋಟದಲ್ಲಿ ದೋಷಿಗಳಾಗಿದ್ದ ನಾಲ್ವರಿಗೆ ಜೈಪುರ ವಿಶೇಷ ನ್ಯಾಯಾಲಯ ಇಂದು ಮರಣದಂಡನೆ ಶಿಕ್ಷೆ ವಿಧಿಸಿದೆ. ಘಟನೆ ಸಂಭವಿಸಿ 11 ವರ್ಷಗಳ ಬಳಿಕ ಎಲ್ಲಾ ಐವರು ಆರೋಪಿಗಳು ದೋಷಿ ಎಂದು ನ್ಯಾಯಾಲಯ ಕಳೆದ ಬುಧವಾರ ಆದೇಶ ನೀಡಿತ್ತು. ಅದರಲ್ಲಿ ನಾಲ್ವರಿಗೆ ಗಲ್ಲು ಶಿಕ್ಷೆ ವಿಧಿಸಿ ಇಂದು ಶಿಕ್ಷೆ ಪ್ರಕಟಿಸಿದೆ.

ದೋಷಿಗಳಾದ ಶಹಬಾಜ್ ಹುಸೇನ್, ಸರ್ವಾರ್ ಅಜಾಮಿ, ಉರ್ ರಹಮಾನ್ ಹಾಗೂ ಸಲ್ಮಾನ್ ಎನ್ನವರಿಗೆ ಗಲ್ಲು ಶಿಕ್ಷೆ ಆಗಿದೆ. ಮೊಹಮ್ಮದ್ ಸೈಫ್ ಎನ್ನುವ 2008 ರಲ್ಲಿ ಬಾಟ್ಲಾ ಹೌಸ್ ಎನ್‌ಕೌಂಟರ್‌ನಲ್ಲಿ ಹತನಾಗಿದ್ದ. ಜೈಪುರ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಎಂಟು ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಈ ಸ್ಫೋಟದಲ್ಲಿ 80ಕ್ಕೂ ಅಧಿಕ ಮಂದಿ ಮೃತಪಟ್ಟು 170 ಮಂದಿ ಗಾಯಗೊಂಡಿದ್ದರು. ಮನಕ್ ಚೌಕ್ ಹಾಗೂ ಕೋತ್ವಾಲಿ ಪೊಲೀಸ್ ಠಾಣೆಯಲ್ಲಿ ಒಟ್ಟು 8 ಪ್ರಕರಣಗಳು ದಾಖಲಾಗಿತ್ತು.

ಡಿಸೆಂಬರ್ 2008ರಿಂದ ನಡೆದ ವಿಚಾರಣೆ

ಡಿಸೆಂಬರ್ 2008ರಿಂದ ನಡೆದ ವಿಚಾರಣೆ

ಶಹಬಾಜ್ ಹುಸೇನ್, ಮೊಹಮ್ಮದ್ ಸೈಫ್, ಸರ್ವಾರ್ ಅಜಾಮಿ, ಸೈಫ್ ಉರ್ ರಹಮಾನ್ ಹಾಗೂ ಸಲ್ಮಾನ್ ಎಂಬುವರ ವಿರುದ್ಧ ರಾಜಸ್ಥಾನ್ ಎಟಿಎಸ್ ಪ್ರಕರಣ ದಾಖಲಿಸಿಕೊಂಡು ದೋಷಾರೋಪಣ ಪಟ್ಟಿ ಸಲ್ಲಿಸಿತ್ತು. ವಿಶೇಷ ನ್ಯಾಯಾಲಯದಿಂದ ಡಿಸೆಂಬರ್ 2008ರಿಂದ ನಡೆದ ವಿಚಾರಣೆ ಅಂತ್ಯಗೊಂಡು ಡಿಸೆಂಬರ್ 18, 2019ರಂದು ಆದೇಶ ಹೊರ ಬಂದಿದೆ.

ಜೈಪುರದ 2008 ಸರಣಿ ಸ್ಫೋಟ ಕೇಸ್, 5 ಆರೋಪಿಗಳು ದೋಷಿ

ಸರಣಿ ಬಾಂಬ್ ಸ್ಪೋಟ ಆಗಿದ್ದವು

ಸರಣಿ ಬಾಂಬ್ ಸ್ಪೋಟ ಆಗಿದ್ದವು

ಸ್ಫೋಟಕ್ಕೆ ಅಮೋನಿಯಂ ನೈಟ್ರೇಟನ್ನು ಬಳಸಿರುವುದಾಗಿ ಪ್ರಾಥಮಿಕ ಪರೀಕ್ಷೆಯಿಂದ ತಿಳಿದು ಬಂದಿತ್ತು. ಇದಕ್ಕಾಗಿ ಹೊಸ ಸೈಕಲ್‌ಗಳನ್ನು ಬಳಸಿಕೊಳ್ಳಲಾಗಿತ್ತು. ಸ್ಫೋಟಕ್ಕೆ ಕಾರಣವಾಗಿರುವ ಹೂಜಿ ಸಂಘಟನೆ ಮುಖ್ಯವಾಗಿ ಬಾಂಗ್ಲಾದೇಶದಲ್ಲಿ ಅಸ್ತಿತ್ವದಲ್ಲಿದೆ. ಸರಣಿ ಬಾಂಬ್‌ಗಳನ್ನು ಸ್ಫೋಟಿಸಿ ರಾಜಸ್ಥಾನದ ಆರ್ಥಿಕ ಶಕ್ತಿಯಂತಿರುವ ಪ್ರವಾಸೋದ್ಯಮ ಚಟುವಟಿಕೆಯನ್ನು ದುರ್ಬಲಗೊಳಿಸುವ ಉದ್ದೇಶದಿಂದ ಹೂಜಿ ಈ ದುಷ್ಕೃತ್ಯಕ್ಕೆ ಕೈಹಾಕಿದೆ ಎಂದು ಪೊಲೀಸರು ಚಾರ್ಜ್ ಶೀಟ್ ನಲ್ಲಿ ದಾಖಲಿಸಿದ್ದರು.

80 ಮಂದಿ ಬಲಿ

80 ಮಂದಿ ಬಲಿ

ಜೈಪುರದ ತ್ರಿಪೋಲಿಯಾ ಬಜಾರ್, ಹವಾ ಮಹಲ್, ಜೋಹರಿ ಬಜಾರ್, ಮಾನಸ್ ಚೌಕ್, ಬಡಿ ಚೌಪಾಲ್ ಮತ್ತು ಚೋಟಿ ಚೌಪಾಲ್, ಕೋತ್ವಾಲಿ ಪ್ರದೇಶಗಳಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟ 80ಕ್ಕೂ ಹೆಚ್ಚು ಮಂದಿಯನ್ನು ಬಲಿತೆಗೆದುಕೊಂಡು 170ಕ್ಕೂ ಹೆಚ್ಚು ಮಂದಿಯನ್ನು ಗಾಯಗೊಳಿಸಿತ್ತು.

ದೇಶದಲ್ಲಿ 39 ವರ್ಷಗಳಲ್ಲಿ ನಡೆದ ಭೀಕರ ಭಯೋತ್ಪಾದನಾ ದಾಳಿಗಳ ಮಾಹಿತಿ

ಹಿಂದೂ ಸ್ಥಳಗಳ ಟಾರ್ಗೆಟ್

ಹಿಂದೂ ಸ್ಥಳಗಳ ಟಾರ್ಗೆಟ್

ತ್ರಿಪೋಲಿಯಾ ಬಜಾರ್‌ನಲ್ಲಿ ಬಾಂಬ್ ಸ್ಫೋಟಿಸಿದಾಗ ಸಾವಿರಾರು ಜನ ಅಲ್ಲೇ ಸಮೀಪದಲ್ಲಿದ್ದ ಹನುಮಾನ್ ಗುಡಿಗೆ ದೇವರ ದರ್ಶನಕ್ಕಾಗಿ ಬಂದಿದ್ದರು. ಉಗ್ರರು ಬಾಂಬ್ ಸ್ಫೋಟಕ್ಕೆ ಹಿಂದೂ ಧಾರ್ಮಿಕ ಕೇಂದ್ರಗಳಿಗೆ ಸಮೀಪವಿರುವ ಸ್ಥಳಗಳನ್ನೇ ಆಯ್ಕೆ ಮಾಡಿಕೊಂಡಿರುವುದು ಗಮನಾರ್ಹ. ಸರಣಿ ಸ್ಫೋಟ ಸಂಭವಿಸಿದ ಸ್ಥಳದಲ್ಲಿ ಸೈಕಲ್‌ನ ಹ್ಯಾಂಡಲ್‌ನ ಬಳಿ ಇಟ್ಟಿದ್ದ ಬಾಂಬ್‌ ಒಂದು ಸ್ಫೋಟಗೊಳ್ಳದೆ ಇನ್ನೂ ಜೀವಂತವಾಗಿತ್ತು. ಇದನ್ನು ಗಮನಿಸಿದ ಪೊಲೀಸರು ತಕ್ಷಣ ಅದನ್ನು ನಿಷ್ಕ್ರಿಯಗೊಳಿಸಿದರು. ಟೈಮರ್‌ಗಳನ್ನು ಅಳವಡಿಸಿ ಬಾಂಬ್‌ಗಳನ್ನು ಸ್ಫೋಟಿಸಲಾಗಿದೆ. ಇದಕ್ಕಾಗಿ ಮಂಗಳವಾರ ತೀವ್ರ ಜನಸಂದಣಿ ಇರುವ ನಗರದ ಎರಡು ಹನುಮಾನ್ ಮಂದಿರಗಳನ್ನು ಆರಿಸಿಕೊಂಡಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿತ್ತು.

ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಪೀಠ- ದೈವಜ್ಞ ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ ಉದ್ಯೋಗದಲ್ಲಿ ತೊಂದರೆ, ಮದುವೆ ವಿಳಂಬ, ಸತಿ- ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಶತ್ರು ಪೀಡೆ, ಅತ್ತೆ -ಸೊಸೆ ಕಲಹ, ಸಂತಾನ ಸಮಸ್ಯೆ, ಆರೋಗ್ಯ ಸಮಸ್ಯೆ, ರಾಜಕೀಯದಲ್ಲಿ ಶತ್ರುಗಳ ಕಾಟ, ಸಿನಿಮಾ ಪ್ರವೇಶ ಇನ್ನೂ ಯಾವುದೇ ಗುಪ್ತ ಸಮಸ್ಯೆಗೆ ಗುರೂಜಿ ಅವರನ್ನು ನೇರವಾಗಿ ಭೇಟಿಯಾಗಬಹುದು. ಗುರೂಜಿ ಅವರ ಸಲಹೆ ಮತ್ತು ಪರಿಹಾರ ಪಡೆದುಕೊಂಡಂಥ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ವಿಳಾಸ # 37, 4th block, ಜಯನಗರ, ಬೆಂಗಳೂರು- 9986623344

English summary
Jaipur Blast; Four Convicts For Hang Special Court Order. Around eleven years later, Four accuses were convicted by the Court on Wednesday in connection with the 2008 Jaipur serial blast matter. The blast had killed 80 people and left 170 injured.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X