ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಲೆ ಮೇಲೆ ಮಡಿಕೆ ಹೊತ್ತು ಓಡಿದ ವಿದೇಶಿಗರು, ಯಾಕೆ ಗೊತ್ತಾ?

|
Google Oneindia Kannada News

ಜೈಪುರ, ಜನವರಿ.12: ರಾಜಸ್ಥಾನದಲ್ಲಿ ವರ್ಣಮಯ ಲೋಕವೇ ತೆರೆದುಕೊಂಡಿದೆ. ಅಂತಾರಾಷ್ಟ್ರೀಯ ಒಂಟೆ ಹಬ್ಬದ ಹೊಸ ಜಗತ್ತನ್ನೇ ಸೃಷ್ಟಿಸಿದೆ. ಭಾರತದಲ್ಲಿನ ಆಚರಣೆಯನ್ನು ಕಂಡ ವಿದೇಶಿಗರು ಪುಳಕಿತಗೊಂಡಿದ್ದಾರೆ. ದೇಶೀ ಸೊಗಡಿನ ಆಚರಣೆಗಳಲ್ಲಿ ಸ್ವತಃ ತಾವೂ ಪಾಲ್ಗೊಂಡಿದ್ದರು.
ರಾಜಸ್ಥಾನದ ಬಿಕನೇರಿಯಲ್ಲಿ ಅಂತಾರಾಷ್ಟ್ರೀಯ ಒಂಟೆ ಹಬ್ಬದ ಪ್ರಯುಕ್ತ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ದೇಶೀಯರಷ್ಟೇ ಅಲ್ಲದೇ, ವಿದೇಶಿಗರಿಗೂ ಇದರಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿಕೊಡಲಾಗಿತ್ತು.

ಈ ಬಾರಿ ಗಣರಾಜ್ಯೋತ್ಸವ ಪಥಸಂಚಲನದಲ್ಲಿ 22 ಸ್ತಬ್ಧಚಿತ್ರಗಳ ಪ್ರದರ್ಶನ
ರಾಜಸ್ಥಾನ ಸಂಸ್ಕೃತಿಯ ಬಗ್ಗೆ ಸಾರಿ ಹೇಳುವಂತಾ ಆಚರಣೆಗಳು ಎಲ್ಲರ ಗಮನ ಸೆಳೆದವು. ಕುದರೆ ಓಟ, ಕುಸ್ತಿ, ಮಡಿಕೆ ಓಟ ಹೀಗೆ ಹಲವು ಆಟಗಳನ್ನು ಆಯೋಜಿಸಲಾಗಿತ್ತು. ಇದರ ಜೊತೆಗೆ ವಿದೇಶಿಗರಿಗಾಗಿ ವಿಶಿಷ್ಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

International Camel Festival: Foreign Tourists Participate In Mataka Race

ಒಂಟೆ ಓಟ, ಮಡಿಕೆ ಹೊತ್ತ ವಿದೇಶಿಗರು:
ರಾಜಸ್ಥಾನದಲ್ಲಿ ನಡೆಯುತ್ತಿರುವ ಹಬ್ಬದ ಹಿನ್ನೆಲೆಯಲ್ಲಿ ಒಂಟೆಗಳನ್ನು ಸಿಂಗಾರಗೊಳಿಸಲಾಗಿತ್ತು. ಬಣ್ಣಬಣ್ಣದ ಉಡುಪುಗಳನ್ನು ಒಂಟೆಗಳಿಗೆ ಹಾಕಲಾಗಿತ್ತು. ರಂಗಿನ ಧರಿಸಿನಲ್ಲಿ ಒಂಟೆಗಳ ಓಟದ ಸ್ಪರ್ಧೆಯು ನೆರೆದ ಪ್ರವಾಸಿಗರನ್ನೆಲ್ಲ ತನ್ನತ್ತ ಸೆಳೆಯಿತು.
ಇನ್ನೊಂದೆಡೆ ವಿದೇಶಿ ಪ್ರವಾಸಿಗರಿಗಾಗಿ ಮಡಿಕೆ ಓಟವನ್ನು ಆಯೋಜಿಸಲಾಗಿತ್ತು. ಬಣ್ಣದ ಮಡಿಕೆಯನ್ನು ಹೊತ್ತ ವಿದೇಶ ಮಹಿಳೆಯರು ನಾ ಮುಂದು, ತಾ ಮುಂದು ಎಂದು ಜಿದ್ದಿಗೆ ಬಿದ್ದಂತೆ ಓಡಿದರು.

English summary
International Camel Festival: Foreign Tourists Participate In Mataka Race Competition In Bikaner.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X