ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಕ್ಷಣಕ್ಕೆ ವಯಸ್ಸಿನ ಹಂಗಿಲ್ಲ: 62ನೇ ವರ್ಷಕ್ಕೆ ಬಿಎ ಪರೀಕ್ಷೆ ಬರೆದ ಶಾಸಕ

|
Google Oneindia Kannada News

ಜೈಪುರ, ಮಾರ್ಚ್ 04: ಶಿಕ್ಷಣಕ್ಕೆ ವಯಸ್ಸಿನ ಹಂಗಿಲ್ಲ ಅಂತಾರೆ, ಇದು ಈ ಶಾಸಕರ ವಿಚಾರದಲ್ಲಿ ಸತ್ಯವಾಗಿದೆ.

ಹೌದು, ರಾಜಸ್ಥಾನದಲ್ಲಿ 62 ವರ್ಷದ ಶಾಸಕರೊಬ್ಬರು ಬಿಎ ಪರೀಕ್ಷೆ ಬರೆದಿದ್ದಾರೆ. ಉದಯಪುರ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಫೂಲ್ ಸಿಂಗ್ ಮೀನಾ ಈಗ ಅಂತಿಮ ವರ್ಷದ ಬಿಎ ಪರೀಕ್ಷೆಯನ್ನು ಬರೆದಿದ್ದಾರೆ.

ಮಗುವಿನೊಂದಿಗೆ ಬಂದು ಎಫ್‌ಡಿಎ ಪರೀಕ್ಷೆ ಬರೆದ ಮಹಿಳೆ!ಮಗುವಿನೊಂದಿಗೆ ಬಂದು ಎಫ್‌ಡಿಎ ಪರೀಕ್ಷೆ ಬರೆದ ಮಹಿಳೆ!

40 ವರ್ಷಗಳ ನಂತರ ವಿದ್ಯಾಭ್ಯಾಸವನ್ನು ಮತ್ತೆ ಆರಂಭಿಸಿರುವ ಶಾಸಕರು, ಮಂಗಳವಾರ ಉದಯಪುರದಲ್ಲಿನ ಕೋಟಾ ಮುಕ್ತ ವಿಶ್ವವಿದ್ಯಾನಿಲಯ ಕೇಂದ್ರದಲ್ಲಿ ರಾಜ್ಯಶಾಸ್ತ್ರ ಪರೀಕ್ಷೆ ಬರೆಯಲು ಬಂದಾಗ ಶಾಸಕರನ್ನು ನೋಡಿ ಎಲ್ಲರಿಗೆ ಆಶ್ಚರ್ಯವಾಯಿತು.

Phool Singh Meena

ಶಿಕ್ಷಣ ರಾಜಕೀಯದಷ್ಟು ಮುಖ್ಯವಾಗಿರುತ್ತದೆ ಅವರು ಹೇಳಿದರು. ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟಿದ್ದರಿಂದ ವಿದ್ಯಾರ್ಥಿಗಳಿಗೆ ಶಿಕ್ಷಣ ಮಹತ್ವ ಕುರಿತು ಸರಿಯಾದ ಭಾಷಣ ಮಾಡಲು ಕೂಡಾ ಆಗುತ್ತಿರಲಿಲ್ಲ. ಇದನ್ನು ತಿಳಿದು ವಿದ್ಯಾಭ್ಯಾಸ ಮತ್ತೆ ಆರಂಭಿಸಿದ್ದಾಗಿ ತಿಳಿಸಿದ್ದಾರೆ.

ಎರಡು ಬಾರಿ ಶಾಸಕರಾಗಿರುವ ಮೀನಾ, ರಾಜಕೀಯ ಕ್ಷೇತ್ರದಲ್ಲಿ ಹಲವು ಪರೀಕ್ಷೆಗಳನ್ನು ಎದುರಿಸಿದ್ದರೂ ಯಾವುದೇ ಡಿಗ್ರಿ ಇಲ್ಲದಿರುವುದು ಅಥವಾ ಬೋರ್ಡ್ ಪರೀಕ್ಷೆಯಲ್ಲಿ ಪಾಸಾಗದೆ ಇರುವುದರಿಂದ ಮುಜುಗರ ಅನುಭವಿಸುತ್ತಿದ್ದರು.

ಸೇನೆಯಲ್ಲಿ ತಮ್ಮ ತಂದೆ ನಿಧನರಾದ ಬಳಿಕ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ, ಕುಟುಂಬವನ್ನು ನೋಡಿಕೊಳ್ಳಲು ಕೃಷಿಯಲ್ಲಿ ತೊಡಗಿಸಿಕೊಂಡೆ. ಇದರಿಂದಾಗಿ ಶಾಲಾ ಶಿಕ್ಷಣವನ್ನು ಸಹ ಪೂರ್ಣಗೊಳಿಸಲು ಆಗಲಿಲ್ಲ.

ಸ್ನಾತಕೋತ್ತರ ಹಾಗೂ ಪಿಹೆಚ್ ಡಿ ಪದವಿ ಪಡೆಯುವ ಚಿಂತನೆ ನಡೆಸಿರುವುದಾಗಿ ಶಾಸಕ ಮೀನಾ ತಿಳಿಸಿದ್ದಾರೆ. ಆದರೆ, ಅವರ ಐವರು ಪುತ್ರಿಯರಿಗೆ ಉತ್ತಮ ಶಿಕ್ಷಣ ಕೊಡಿಸಿದ್ದಾರೆ. ಅವರ ಐವರು ಪುತ್ರಿಯರ ಪೈಕಿ ನಾಲ್ವರು ಇದೀಗ ಸ್ನಾತಕೋತ್ತರ ಪದವಿ ಮಾಡುತ್ತಿದ್ದಾರೆ. ಹಿರಿಯ ಪುತ್ರಿ ಕಾನೂನು ವಿಷಯದಲ್ಲಿ ಪದವಿ ಪಡೆದಿದ್ದಾರೆ.

2013ರಲ್ಲಿ ಮೊದಲ ಬಾರಿಗೆ ಅವರು ಶಾಸಕನಾದೆ, ನಂತರ ತನ್ನ ಪುತ್ರಿಯರ ಪ್ರೇರಣೆಯಿಂದ ವಿದ್ಯಾಭ್ಯಾಸವನ್ನು ಮತ್ತೆ ಆರಂಭಿಸಿದೆ. 2013ರಲ್ಲಿ 10ನೇ ತರಗತಿಗೆ ತನ್ನ ಪುತ್ರಿಯರು ದಾಖಲುಪಡಿಸಿದರು.

ನಂತರ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು, ಇದೀಗ ಅಂತಿಮ ವರ್ಷದ ಬಿಎ ಪರೀಕ್ಷೆ ಬರೆದಿದ್ದೇನೆ. ಶೀಘ್ರದಲ್ಲಿಯೇ ಪದವಿ ಪಡೆಯುವ ವಿಶ್ವಾಸದಲ್ಲಿರುವುದಾಗಿ ಶಾಸಕರು ಹೇಳಿದ್ದಾರೆ.

English summary
A 62-year-old MLA in Rajasthan, encouraged by his five daughters, has resumed studies after over 40 years. A BJP MLA from Udaipur Rural, Phool Singh Meena is now giving his BA final year exams.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X