ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನ ಗಡಿ ಸಮೀಪವೇ ವಾಯು ಶಕ್ತಿ ಪ್ರದರ್ಶಿಸಿದ ಭಾರತ

|
Google Oneindia Kannada News

ಪೋಖ್ರಾನ್, ಫೆಬ್ರವರಿ 16: ಉಗ್ರರ ದಾಳಿಯ ನಡುವೆಯೂ ರಾಜಸ್ಥಾನದ ಪೋಖ್ರಾನ್‌ನಲ್ಲಿ ಭಾರತೀಯ ವಾಯು ಪಡೆ ಶನಿವಾರ ತನ್ನ ವಾಯು ಶಕ್ತಿಯ ಪ್ರದರ್ಶನ ನಡೆಸಿತು.

ವಾಯು ಶಕ್ತಿ 2019' ಅಭ್ಯಾಸದ 'ಫೈರ್ ಪವರ್ ಪ್ರದರ್ಶನ'ದ (ಎಫ್‌ಪಿಡಿ) ಏಳನೇ ಆವೃತ್ತಿಯಲ್ಲಿ ಸರ್ವ ಋತು, ಹಗಲು, ಸಂಜೆ ಮತ್ತು ರಾತ್ರಿ ವೇಳೆ ಕಾರ್ಯಾಚರಣೆ ನಡೆಸಬಲ್ಲ ಯುದ್ಧ ವಿಮಾನಗಳ ಪ್ರದರ್ಶನ ನಡೆಸಲಾಯಿತು.

ರಾಜಸ್ಥಾನದ ಪಾಕ್-ಭಾರತ ಗಡಿಯಲ್ಲಿರುವ ಪೋಖ್ರಾನ್‌ನಲ್ಲಿ ಈ ಪ್ರದರ್ಶನ ನಡೆದಿದ್ದು, ಭಾರತದ ವಾಯು ಪಡೆ ತನ್ನ ಪೂರ್ಣ ಪ್ರಮಾಣದ ಯುದ್ಧ ಮತ್ತು ಶಸ್ತ್ರಾಸ್ತ್ರ, ಮದ್ದುಗುಂಡುಗಳ ಬಳಕೆಯ ಸಾಮರ್ಥ್ಯವನ್ನು ತೋರಿಸಿತು.

ಪಾಕಿಸ್ತಾನದ ಗಡಿಯಲ್ಲಿಯೇ ಈ ಪ್ರದರ್ಶನ ನಡೆದಿರುವುದು ಕುತೂಹಲ ಮೂಡಿಸಿದೆ. ಇದನ್ನು ಪಾಕಿಸ್ತಾನಕ್ಕೆ ರವಾನಿಸಿದ ಸಂದೇಶ ಎಂದೇ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಈ ಪ್ರದರ್ಶನ ಪೂರ್ವ ನಿರ್ಧರಿತವಾಗಿತ್ತು.

ಮೂರು ವರ್ಷಕ್ಕೊಮ್ಮೆ ನಡೆಯುವ ಈ ಫೈರ್ ಪವರ್ ಪ್ರದರ್ಶನದಲ್ಲಿ ಎಲ್ಲ ಬಗೆಯ ಯುದ್ಧ ವಿಮಾನಗಳು, ಹೆಲಿಕಾಪ್ಟರ್‌ಗಳು, ಟ್ರಾನ್ಸ್‌ಪೋರ್ಟ್ಸ್‌ ಮತ್ತಿತರ ಯುದ್ಧೋಪಕರಣಗಳು ಪಾಲ್ಗೊಂಡಿದ್ದವು.

Indian Air Force Vayu Shakti 2019 firepower demonstration in Rajasthan Pokhran range

ಇದು ಐಎಎಫ್‌ ನಡೆಸಿದ ಬೃಹತ್ ವಾಯು ಅಭ್ಯಾಸವಾಗಿದೆ. ಈ ಪ್ರದರ್ಶನದ ಮೂಲಕ ದೇಶಿ ನಿರ್ಮಿತ ಹಗುರ ಯುದ್ಧ ವಿಮಾನ ತೇಜಸ್, ಅತ್ಯಾಧುನಿಕ ಹಗುರ ಹೆಲಿಕಾಪ್ಟರ್ ಮತ್ತು ನೆಲದಿಂದ ಆಕಾಶಕ್ಕೆ ಚಿಮ್ಮುವ ಆಕಾಶ್ ಕ್ಷಿಪಣಿ ಹಾಗೂ ಆಗಸದಿಂದ ಆಗಸಕ್ಕೆ ಚಿಮ್ಮುವ ಅಸ್ತ್ರ ಕ್ಷಿಪಣಿಯನ್ನು ಪ್ರಯೋಗಿಸಲಾಯಿತು.

ಸೇನಾ ಮುಖ್ಯಸ್ಥ ಬಿಪಿನ್ ರಾವತ್, ವಿವಿಧ ದೇಶಗಳ ರಕ್ಷಣಾ ಅಧಿಕಾರಿಗಳು, ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಗಳು, ಐಎಎಫ್‌ನ ಗೌರವಾನ್ವಿತ ಸಮೂಹ ಕ್ಯಾಪ್ಟನ್, ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಹಾಜರಿದ್ದರು.

English summary
Indian Air Force on Saturday conducted a firepower demonstration Vayu Shakti 2019 at Pokhran Range in rajasthan near Pakistan border.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X